ಔಪಚಾರಿಕ ಶಿಕ್ಷಣ ಪಡೆಯದೇ 10ನೇ ತರಗತಿ ಪರೀಕ್ಷೆ ಬರೆಯಲಿರುವ ಮಂಗಳೂರು ಬಾಲಕಿ; ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್ಸ್'ಗೆ ಸೇರ್ಪಡೆ

ಔಪಚಾರಿಕ ಶಿಕ್ಷಣದ ಹೊರತಾಗಿಯೂ ಬಹು ಪ್ರತಿಭಾವಂತ ಬಾಲಕಿ ಆದಿ ಸ್ವರೂಪ 10 ನೇ ತರಗತಿ ಪರೀಕ್ಷೆಯನ್ನು ಮುಂದಿನ ವಾರ ಬರೆಯುತ್ತಿದ್ದಾರೆ. 
ಪೋಷಕರೊಂದಿಗೆ ಆದಿ ಸ್ವರೂಪ
ಪೋಷಕರೊಂದಿಗೆ ಆದಿ ಸ್ವರೂಪ

ಮಂಗಳೂರು: ಔಪಚಾರಿಕ ಶಿಕ್ಷಣದ ಹೊರತಾಗಿಯೂ ಬಹು ಪ್ರತಿಭಾವಂತ ಬಾಲಕಿ ಆದಿ ಸ್ವರೂಪ 10 ನೇ ತರಗತಿ ಪರೀಕ್ಷೆಯನ್ನು ಮುಂದಿನ ವಾರ ಬರೆಯುತ್ತಿದ್ದಾರೆ. 

10 ನೇ ತರಗತಗೆ ವಿಷುಯಲ್ ಮೆಮೊರಿ ಆರ್ಟ್ ನಲ್ಲಿ ಆದಿ ಸ್ವರೂಪಾ ವಿಶೇಷ ಸಾಧನೆ ಮಾಡಿದ್ದು, ಇದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಆಕೆಯ ಹೆಸರು ಸೇರ್ಪಡೆಯಾಗಿದೆ. ಟ್ರಾಪ್ಡ್ ಎಜುಕೇಷನ್ ಎಂಬ ಥೀಮ್ ನ ಅಡಿಯಲ್ಲಿ ಚಿತ್ರಕಲೆಯ ಮೂಲಕ 10 ನೇ ತರಗತಿಯ ಸಂಪೂರ್ಣ ಪಠ್ಯಕ್ರಮವನ್ನು 93,000 ಮಿನಿಯೇಚರ್ ಚಿತ್ರಗಳಲ್ಲಿ ಆದಿ ಸ್ವರೂಪ ರೂಪಿಸಿದ್ದಾರೆ. 

ಆದಿ ಸ್ವರೂಪ ಅವರ ತಂದೆ, ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ, ಗೋಪಾದ್ಕರ್ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು,  10 ನೇ ತರಗತಿಗೆಯ 6 ವಿಷಯಗಳಿಗೆ 8 ದೃಶ್ಯ ಕಲೆಗಳ ಚಿತ್ರಗಳನ್ನು ರೂಪಿಸಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ 2022 ನೇ ಸಾಲಿನ "ಇನ್ಕ್ರೆಡಿಬಲ್ ವಿಷುಯಲ್ ಮೆಮೊರಿ ಆರ್ಟಿಸ್ಟ್" ಎಂಬ ದಾಖಲೆ ನಿರ್ಮಿಸಿದ್ದಾರೆ. 

ವಿದ್ಯಾರ್ಥಿಗಳಿಗೆ ಪಠ್ಯಗಳ ಟಿಪ್ಪಣಿಗಳನ್ನು ನೆನಪು ಮಾಡಿಕೊಳ್ಳುವುದಕ್ಕೆ ಹಾಗೂ ದಿನನಿತ್ಯ ಅಭ್ಯಾಸ ಮಾಡುವುದಕ್ಕೆ ಈ ದೃಶ್ಯ ಕಲೆಗಳು ಸಹಕಾರಿಯಾಗಿದೆ. ಎಲ್ಲಾ ವಿಷಯಗಳನ್ನು ದೃಶ್ಯೀಕರಿಸಿಕೊಳ್ಳುವುದಕ್ಕೆ ವಿದ್ಯಾರ್ಥಿಗಳಿಗೆ ನೆರವಾಗುವುದು ಆದಿಯ ಉದ್ದೇಶವಾಗಿದೆ. 

ಸ್ವರೂಪಾ ಅವರ ಮೆಮೊರಿ ತಂತ್ರ (ಟೆಕ್ನಿಕ್) ನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದ್ದು 20 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಪಾಠಗಳನ್ನು ಕಲಿಯಬಹುದಾಗಿದೆ. ಆದಿ ಸ್ವರೂಪ ತಮ್ಮ 8 ನೇ ವಯಸ್ಸಿನಲ್ಲೇ 10 ನೇ ತರಗತಿಯ ಪರೀಕ್ಷೆ ಬರೆಯುವುದಕ್ಕೆ ಸಿದ್ಧರಿದ್ದರು. ಆದರೆ ದುರದೃಷ್ಟವಶಾತ್ ಅವರಿಗೆ ಅನುಮತಿ ಸಿಗಲಿಲ್ಲ ಎಂದು ಗೋಪಾದ್ಕರ್ ಹೇಳಿದ್ದಾರೆ. 

ಆದಿ ಸ್ವರೂಪ ಮಾತನಾಡಿದ್ದು "ನಾನು ಎಂದಿಗೂ ಔಪಚಾರಿಕ ಶಿಕ್ಷಣ ಪಡೆದಿಲ್ಲ. ಆದರೂ ಈ ಬಾರಿಯ 10ನೇ ತರಗತಿ ಪರೀಕ್ಷೆ ಬರೆಯುವುದಕ್ಕೆ ಸಿದ್ಧಳಿದ್ದೇನೆ, 2-3 ದಿನಗಳಲ್ಲಿ ರಚಿಸಿರುವ ದೃಶ್ಯ ಮೆಮೊರಿ ಕಲೆ ಭಾರತೀಯ ಶಿಕ್ಷಣ ವ್ಯವಸ್ಥೆಯದ್ದಾಗಿದೆ ಹಾಗೂ ಕೆಲವು ಪಾಠಗಳು ಮಿನಿಯೇಚರ್ ಚಿತ್ರಗಳ ಮೂಲಕ ವಿವರಿಸಲಾಗಿದೆ. ಒಎಂಆರ್ ಮಾದರಿಯೊಂದಿಗೆ ಎಂಸಿಕ್ಯು ಇಲ್ಲದೇ ಇದ್ದಿದ್ದರೆ ನಾನು ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಿದ್ಧಳಾಗಿದ್ದೆ ಹಾಗೂ ಅಗ್ರಶ್ರೇಣಿ ಪಡೆಯುವ ವಿಶ್ವಾಸ ಹೊಂದಿದ್ದೇನೆ" ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com