ಉಡುಪಿ: ಕ್ರಿಶ್ಚಿಯನ್ ಉದ್ಯಮಿಯಿಂದ ಎರಡು ಕೋಟಿ ರು. ವೆಚ್ಚದಲ್ಲಿ ಸಿದ್ಧಿವಿನಾಯಕ ದೇವಾಲಯ ನಿರ್ಮಾಣ!

ಇಲ್ಲಿನ ಶಿರ್ವ- ಮೂಡುಬೆಳ್ಳೆ ಕ್ರಾಸ್‌ ರಸ್ತೆ ಜಂಕ್ಷನ್‌ನಲ್ಲಿ ಉದ್ಯಮಿ ಗ್ಯಾಬ್ರಿಯಲ್‌ ನಜ್ರೆತ್‌ ಅವರು ತಮ್ಮ ಸ್ವಂತ ಜಮೀನಿನಲ್ಲಿ ತಮ್ಮ ಮಾತಾಪಿತರ ಸವಿನೆನಪಿಗಾಗಿ ಸುಮಾರು 2 ಕೋಟಿ ರು. ವೆಚ್ಚದಲ್ಲಿ  ಶ್ರೀ ಸಿದ್ಧಿವಿನಾಯಕ ದೇವಾಲಯ ನಿರ್ಮಿಸಿದ್ದಾರೆ.
ಸಿದ್ಧಿ ವಿನಾಯಕ ದೇವಾಲಯ
ಸಿದ್ಧಿ ವಿನಾಯಕ ದೇವಾಲಯ

ಉಡುಪಿ: ಇಲ್ಲಿನ ಶಿರ್ವ- ಮೂಡುಬೆಳ್ಳೆ ಕ್ರಾಸ್‌ ರಸ್ತೆ ಜಂಕ್ಷನ್‌ನಲ್ಲಿ ಉದ್ಯಮಿ ಗೇಬ್ರಿಯಲ್‌ ನಜೆರತ್‌ ಅವರು ತಮ್ಮ ಸ್ವಂತ ಜಮೀನಿನಲ್ಲಿ ತಮ್ಮ ಮಾತಾಪಿತರ ಸವಿನೆನಪಿಗಾಗಿ ಸುಮಾರು 2 ಕೋಟಿ ರು. ವೆಚ್ಚದಲ್ಲಿ ಶ್ರೀ ಸಿದ್ಧಿವಿನಾಯಕ ದೇವಾಲಯ ನಿರ್ಮಿಸಿದ್ದಾರೆ.

ದಿವಂಗತ ಫ್ಯಾಬಿಯನ್ ಸೆಬಾಸ್ಟಿಯನ್ ನಜರೆತ್ ಮತ್ತು ಸಬೀನಾ ನಜರೆತ್ - ಅವರಿಗೆ ಸೇರಿದ 15 ಸೆಂಟ್ಸ್ ಪೂರ್ವಜರ ಭೂಮಿಯಲ್ಲಿ ದೇವಾಲಯ ನಿರ್ಮಿಸಿರುವ ಗೇಬ್ರಿಯಲ್ ನಜೆರತ್ ಹಿಂದೂಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.

60 ವರ್ಷಗಳ ಹಿಂದೆ ನಾನು ಗಣೇಶನ ಭಕ್ತನಾದೆ. ಅಂದಿನಿಂದಲೂ ನಾನು ಯಾವಾಗಲೂ ಸಿದ್ಧಿ ವಿನಾಯಕ ಭಗವಂತನಿಂದ ಆಶೀರ್ವದಿಸಲ್ಪಟ್ಟಿದ್ದೇನೆ. ನಾನು  1959 ರಲ್ಲಿ ಎಸ್‌ಎಸ್‌ಎಲ್‌ ಸಿ ಪೂರ್ಣಗೊಳಿಸಿ ಉದ್ಯೋಗ ಹುಡುಕಿಕೊಂಡು ಮುಂಬೈಗೆ ಹೋದೆ. ಆಗ ನನಗೆ ಕೇವಲ 14 ವರ್ಷ ವಯಸ್ಸಾಗಿತ್ತು ಮತ್ತು ಮುಂಬೈನ ಪ್ರಭಾದೇವಿ ಬಳಿ ತಂಗಿದ್ದೆ. ಅಲ್ಲಿ ಸಿದ್ಧಿ ವಿನಾಯಕ ದೇವಸ್ಥಾನವಿತ್ತು, ಅಲ್ಲಿ ನಾನು ಪ್ರತಿದಿನ ಸ್ವಾಮಿಗೆ ನಮಸ್ಕರಿಸುತ್ತಿದ್ದೆ ಎಂದು ಗ್ರೇಬ್ರಿಯಲ್ ತಿಳಿಸಿದ್ದಾರೆ.

<strong>ಗೇಬ್ರಿಯಲ್‌ ನಜೆರತ್‌</strong>
ಗೇಬ್ರಿಯಲ್‌ ನಜೆರತ್‌

ಕೆಲವು ವರ್ಷಗಳ ನಂತರ, ಅವರು ಮೆಟಲ್ ಡೈಯ್ಯಿಂಗ್ ವರ್ಕ್ ಶಾಪ್ ಪ್ರಾರಂಭಿಸಿದರು ಮತ್ತು ಯಶಸ್ವಿ ಉದ್ಯಮಿಯಾದರು, ಮೂರು ವಿಭಿನ್ನ ಸ್ಥಳಗಳಲ್ಲಿ ವ್ಯಾಪಾರ ಘಟಕಗಳನ್ನು ಪ್ರಾರಂಭಿಸಿದರು.

ಇತ್ತೀಚೆಗೆ ಆರಂಭವಾಗಿರುವ ದೇವಾಲಯದಲ್ಲಿ, ಕಪ್ಪು ಬಣ್ಣದ 36 ಇಂಚಿನ ಗಣೇಶ ವಿಗ್ರಹವನ್ನು ಸ್ಥಾಪಿಸಲಾಯಿತು. ದೇವಾಲಯದ ಬಳಿ ದೇವಾಲಯದ ಅರ್ಚಕರಿಗೆ ಒಂದು ಮನೆಯನ್ನು ಸಹ ನಿರ್ಮಿಸಲಾಗಿದೆ. ದೇವಾಲಯದ ಆಡಳಿತವನ್ನು ಎಂಜಿನಿಯರ್ ನಾಗೇಶ್ ಹೆಗ್ಡೆ ಮತ್ತು ಗೇಬ್ರಿಯಲ್ ಅವರ ಸ್ನೇಹಿತರಾದ ಸತೀಶ್ ಶೆಟ್ಟಿ ಮತ್ತು ರತ್ನಕರ್ ಕುಕ್ಯಾನ್ ಒಳಗೊಂಡ ಮೂವರು ಸದಸ್ಯರ ಸಮಿತಿಗೆ ಹಸ್ತಾಂತರಿಸಲಾಗಿದೆ.

ಸಿದ್ಧಿ ವಿನಾಯಕನ ಮೇಲಿನ ಭಕ್ತಿಯಿಂದ ಗೇಬ್ರಿಯಲ್ ಯಾವುದೇ ದೇಣಿಗೆ ಇಲ್ಲದೆ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಅವರ ಸ್ನೇಹಿತ ಸತೀಶ್ ಶೆಟ್ಟಿ ಹೇಳಿದ್ದಾರೆ. 12 ವರ್ಷಗಳ ಹಿಂದೆ ಶಿರ್ವಾಕ್ಕೆ ಮರಳಿದ ಗೇಬ್ರಿಯಲ್, ಮುಂಬೈನಲ್ಲಿ ತನ್ನ ವ್ಯವಹಾರವನ್ನು ವೈಂಡ್ ಅಪ್ ಮಾಡಿ ಇಲ್ಲಿ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದರು. 

ಎಂಟು ವರ್ಷಗಳ ಹಿಂದೆ ಅವರು ಶಿರ್ವಾದ ಬಂಟಕಲ್ ಬಳಿ ‘ನಾಗ ಬನ’ (ಪವಿತ್ರ ತೋಪು) ನವೀಕರಿಸಿದ್ದರು. ಬ್ರಹ್ಮಚಾರಿಯಾಗಿರುವ ಅವರು 60 ಕ್ಕೂ ಹೆಚ್ಚು ಜನರಿಗೆ ಮದುವೆಯಾಗಲು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com