ಯಜಮಾನನ ಕುಟುಂಬ ರಕ್ಷಿಸಲು ನಾಗರಹಾವಿನ ಮುಂದೆ 30 ನಿಮಿಷ ತಡೆಗೋಡೆಯಂತೆ ಕುಳಿತ ಸಾಕು ಬೆಕ್ಕು; ವಿಡಿಯೋ ವೈರಲ್!

ಬೆಕ್ಕು ಸಹ ನಾಯಿಯಂತೆ ಉತ್ತಮ ಸ್ನೇಹಿತನಾಗಬಹುದೆಂದು ಸಾಬೀತುಪಡಿಸಿದೆ. ಹೌದು ಬೆಕ್ಕೊಂದು ತನ್ನ ಮಾಲೀಕರ ಕುಟುಂಬವನ್ನು ರಕ್ಷಿಸುವ ಸಲುವಾಗಿ ನಾಗರಹಾವು ತಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯುವ ಮೂಲಕ ಸಂಭವನೀಯ ಅಪಾಯದಿಂದ ರಕ್ಷಿಸಿದೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಭುವನೇಶ್ವರ: ಬೆಕ್ಕು ಸಹ ನಾಯಿಯಂತೆ ಉತ್ತಮ ಸ್ನೇಹಿತನಾಗಬಹುದೆಂದು ಸಾಬೀತುಪಡಿಸಿದೆ. ಹೌದು ಬೆಕ್ಕೊಂದು ತನ್ನ ಮಾಲೀಕರ ಕುಟುಂಬವನ್ನು ರಕ್ಷಿಸುವ ಸಲುವಾಗಿ ನಾಗರಹಾವು ತಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯುವ ಮೂಲಕ ಸಂಭವನೀಯ ಅಪಾಯದಿಂದ ರಕ್ಷಿಸಿದೆ.

ಸಂಪದ್ ಕುಮಾರ್ ಪರಿದಾ ಮತ್ತು ಅವರ ಕುಟುಂಬವು ತಮ್ಮ ಸಾಕು ಬೆಕ್ಕು ಚಿನ್ನುನೊಂದಿಗೆ ಭೀಮತಂಗಿ ಪ್ರದೇಶದಲ್ಲಿ ನೆಲೆಸಿದ್ದರು. ನಿನ್ನೆ ಮಧ್ಯಾಹ್ನ ಮನೆಯ ಹಿಂಭಾಗದಿಂದ ನಾಗರಹಾವೊಂದು ಪರಿದಾ ಅವರ ಮನೆಯ ಆವರಣಕ್ಕೆ ಪ್ರವೇಶಿಸಲು ಮುಂದಾಗಿತ್ತು. ಈ ವೇಳೆ ಗಂಡು ಬೆಕ್ಕು ತಕ್ಷಣ ಅದನ್ನು ಕಂಡು ಅದರ ಮುಂದೆ ಹೋಗಿ ನಿಂತಿತ್ತು. 

ಚಿನ್ನು ಬೆಕ್ಕು ಹಿತ್ತಲಿಗೆ ಓಡುತ್ತಿರುವುದನ್ನು ನೋಡಿದ ಪರಿದಾ ಅದನ್ನು ಹಿಂಬಾಲಿಸಿದ. ಬೆಕ್ಕು ನಾಲ್ಕು ಅಡಿ ಉದ್ದದ ನಾಗರಹಾವು ವಿರುದ್ಧ ಕಾವಲು ನಿಂತು ಅದನ್ನು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಿಡಿದಿದೆ. ಹಾವು ಬುಸುಗುಡುತ್ತಿದ್ದು ಮುಂದಕ್ಕೆ ಬರಲು ಯತ್ನಿಸುತ್ತಿದ್ದರೂ ಚಿನ್ನು ತನ್ನ ಸ್ಥಳದಿಂದ ಒಂದು ಇಂಚು ಹಿಂದಕ್ಕೆ ಸರಿಯಲಿಲ್ಲ.

ಸಂಪದ್ ತಕ್ಷಣ ಸಹಾಯಕ್ಕಾಗಿ ಸ್ನೇಕ್ ಸಹಾಯವಾಣಿಗೆ ಕರೆ ಮಾಡಿದ. ಸಹಾಯವಾಣಿಯ ಸ್ವಯಂಸೇವಕ ಅರುಣ್ ಕುಮಾರ್ ಬರಾಲ್ ಸ್ಥಳಕ್ಕೆ ತಲುಪಿದಾಗ ಬೆಕ್ಕು ಕೋಬ್ರಾ ಹಾವನ್ನು ಸುಮಾರು 30 ನಿಮಿಷಗಳ ಕಾಲ ಒಳಗೆ ಪ್ರವೇಶಿಸದಂತೆ ತಡೆದಿದೆ. ನಂತರ ಅರುಣ್ ಬೆಕ್ಕನ್ನು ಸ್ಥಳದಿಂದ ದೂರವಿರಿಸಿ ತಕ್ಷಣ ನಾಗರಹಾವನ್ನು ರಕ್ಷಿಸಿದನು.

'ನಾನು ಸ್ಥಳಕ್ಕೆ ಬರುವವರೆಗೂ ಹಾವನ್ನು ತಡೆದು ಸಾಕು ಬೆಕ್ಕು ಕಾವಲು ನಿಂತಿದೆ. ಈ ಹೋರಾಟವು ಅರ್ಧ ಘಂಟೆಯವರೆಗೆ ನಡೆದಿದೆ. ಆದರೆ ಅದೃಷ್ಟವಶಾತ್ ಅವರಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅರುಣ್ ಹೇಳಿದರು.

2019ರಲ್ಲಿ ಖುರ್ಡಾ ಜಿಲ್ಲೆಯ ಜಾನ್ಲಾ ಗ್ರಾಮದಲ್ಲಿ ಸಾಕು ನಾಯಿ ತನ್ನ ಯಜಮಾನನ ಕುಟುಂಬವನ್ನು ವಿಷಪೂರಿತ ಹಾವಿನಿಂದ ರಕ್ಷಿಸಲು ತನ್ನ ಜೀವವನ್ನೇ ಕಳೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com