ಬೆಂಗಳೂರು: ಕಿಡ್ನಿ, ಯಕೃತ್ತು ದಾನ ಮಾಡಿ ಇಬ್ಬರ ಜೀವ ಉಳಿಸಿದ 37 ವರ್ಷದ ವ್ಯಕ್ತಿ

ದೀರ್ಘಕಾಲದ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 37 ವರ್ಷದ ಬೆಂಗಳೂರು ವ್ಯಕ್ತಿಯೊಬ್ಬರು ಏಪ್ರಿಲ್ 14 ರಂದು ಸಾವನ್ನಪ್ಪಿದರು. ಇವರು ತಮ್ಮ ಮೂತ್ರಪಿಂಡ ಮತ್ತು ಯಕೃತ್ತನ್ನು ಇಬ್ಬರು ರೋಗಿಗಳಿಗೆ ದಾನ ಮಾಡಿ ಇಬ್ಬರ ಜೀವಕ್ಕೆ ದಾರಿ ದೀಪವಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ  37 ವರ್ಷದ ಬೆಂಗಳೂರು ವ್ಯಕ್ತಿಯೊಬ್ಬರು ಏಪ್ರಿಲ್ 14 ರಂದು ಸಾವನ್ನಪ್ಪಿದರು. ಇವರು ತಮ್ಮ ಮೂತ್ರಪಿಂಡ ಮತ್ತು ಯಕೃತ್ತನ್ನು ಇಬ್ಬರು ರೋಗಿಗಳಿಗೆ ದಾನ ಮಾಡಿ ಇಬ್ಬರ ಜೀವಕ್ಕೆ ದಾರಿ ದೀಪವಾಗಿದ್ದಾರೆ.

ಒಬ್ಬರು ಕೇರಳದ ತ್ರಿವೆಂಡ್ರಮ್ ನ 61 ವರ್ಷದ ವ್ಯಕ್ತಿ, ಸುಮಾರು ಒಂದು ವರ್ಷದ ಹಿಂದೆ ಪಿತ್ತಜನಕಾಂಗದ ಸಿರೋಸಿಸ್ ಮತ್ತು ಪಿತ್ತಜನಕಾಂಗದ ಗೆಡ್ಡೆಯಿಂದ ಬಳಲುತ್ತಿದ್ದ  ಅವರ ಹೆಸರನ್ನು ಅಂಗಾಂಗ ಕಸಿಗಾಗಿ  ಪಟ್ಟಿ ಮಾಡಿದ್ದರು.

ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ, ರೋಗಿಯು ಅಧಿಕ ರಕ್ತದೊತ್ತಡ, ಕಿಬ್ಬೊಟ್ಟೆಯ ತೊಂದರೆಗಳಿಂದ ಬಳಲುತ್ತಿದ್ದರು ಹಾಗೂ ಜ್ಯಾಂಡೀಸ್ ತೀವ್ರವಾಗಿತ್ತು. ಹಲವಾರು ಸುತ್ತಿನ ಪರೀಕ್ಷೆಗಳನ್ನು ನಡೆಸಿದರು. ರೋಗಿಯು ಪೋರ್ಟಲ್ ವೇಯ್ನ್ ಥ್ರಂಬೋಸಿಸ್ನಿಂದ ಬಳಲುತ್ತಿದ್ದಾರೆ ಎಂದು ವೈದ್ಯರಿಗೆ ತಿಳಿಯಿತು.

ರೋಗಿಯ ಸ್ಥಿತಿ ಗಂಭೀರವಾದ ಕಾರಣ ಏಪ್ರಿಲ್ 16 ರಂದು ಆತನಿಗೆ ವೈದ್ಯರು ಸರ್ಜರಿ ಮಾಡಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಪಿತ್ತಜನಕಾಂಗದ ಕಸಿ ಜೊತೆಗೆ, ವೈದ್ಯಕೀಯ ತಜ್ಞರು ಅವನ ಹಾನಿಗೊಳಗಾದ ಪೋರ್ಟಲ್ ರಕ್ತನಾಳವನ್ನು ದಾನಿಗಳಿಂದ ಕಸಿ ಮಾಡಿದ ಹೊಸ ರಕ್ತನಾಳದೊಂದಿಗೆ ಬದಲಾಯಿಸಿದರು, ಆದ್ದರಿಂದ ಯಕೃತ್ತು ಉತ್ತಮ ರಕ್ತ ಪೂರೈಕೆಯನ್ನು ಪಡೆಯಬಹುದು ಎಂದು ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಪತ್ರಿಕಾ ಹೇಳಿಕೆ ತಿಳಿಸಿದೆ.

ಮತ್ತೊಬ್ಬರು 66 ವರ್ಷದ ವ್ಯಕ್ತಿಯಾಗಿದ್ದು, ಕೆಲವು ವರ್ಷಗಳಿಂದ  ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಪರಿಧಮನಿಯ ಕಾಯಿಲೆ ಸೇರಿದಂತೆ ಕೊಮೊರ್ಬಿಡಿಟಿ ಇತಿಹಾಸ ಹೊಂದಿದ್ದರು.

ಇವರ ಶಸ್ತ್ರಚಿಕಿತ್ಸೆ ಹೆಚ್ಚು ಸವಾಲಾಗಿತ್ತು. ಈ ರೋಗಿ 2015 ರಿಂದ ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ನಲ್ಲಿದ್ದರು, ಇವರಿಗೆ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಎಚ್‌ಪಿಬಿ ಮತ್ತು ಪಿತ್ತಜನಕಾಂಗದ ಕಸಿ ವಿಭಾಗದ ಹಿರಿಯ ಸಲಹೆಗಾರ ಮತ್ತು ಎಚ್‌ಒಡಿ ಡಾ.ವೇಣುಗೋಪಾಲ್, ಅಂಗಾಂಗ ಕಸಿಗಾಗಿ ಪಟ್ಟಿ ಮಾಡಲಾದ ರೋಗಿಗಳು ಕೋವಿಡ್‌ಗೆ ಗುರಿಯಾಗುತ್ತಾರೆ ಏಕೆಂದರೆ ಅವರ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ ಎಂದು ಹೇಳಿದ್ದಾರೆ. ಮೂತ್ರಪಿಂಡ ಕಸಿಗೆ ಒಳಗಾಗವವರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂದು ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಮುಖ್ಯ ಕಸಿ ಶಸ್ತ್ರಚಿಕಿತ್ಸಕ ಹಿರಿಯ ಸಲಹೆಗಾರ ಡಾ. ನರೇಂದ್ರ ಎಸ್ ತಿಳಿಸಿದ್ದಾರೆ. ಕೋವಿಡ್ ಮತ್ತು ಕಸಿ ನಂತರದ ಸೋಂಕನ್ನು ತಪ್ಪಿಸಲು ಶಸ್ತ್ರಚಿಕಿತ್ಸಾ ಮತ್ತು ಶುಶ್ರೂಷಾ ತಂಡವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com