ಮಾಸ್ಕ್, ಲಸಿಕೆ ಪ್ರಾಮುಖ್ಯತೆ ಎತ್ತಿ ಹಿಡಿಯಲು 'ಗೋ ಕರೋನಾ ಗೋ' ವೆಬ್ ಗೇಮ್ ಅಭಿವೃದ್ಧಿಪಡಿಸಿದ 14 ವರ್ಷದ ಬಾಲಕ

'ಗೋ ಕರೋನಾ ಗೋ' ಎಂಬ ಆಕರ್ಷಕವಾದ ವೆಬ್ ಆಧಾರಿತ ಆಟವನ್ನು ವೈಟ್‍ಹ್ಯಾಟ್ ಜೂನಿಯರ್ ವಿದ್ಯಾರ್ಥಿಯಾದ ಬೆಂಗಳೂರಿನ ಅಭಿನವ್ ರಂಜಿತ್ ದಾಸ್ ಎಂಬ 14 ವರ್ಷದ ಯುವಕ ಅಭಿವೃದ್ಧಿಪಡಿಸಿದ್ದಾನೆ.

Published: 07th June 2021 10:03 PM  |   Last Updated: 08th June 2021 04:34 PM   |  A+A-


mask-face shield

ಮಾಸ್ಕ್-ಫೇಸ್ ಶೀಲ್ಡ್ (ಸಾಂಕೇತಿಕ ಚಿತ್ರ)

Posted By : Srinivas Rao BV
Source : Online Desk

ಬೆಂಗಳೂರು: ಕೋವಿಡ್ -19 ರ ಎರಡನೇ ಅಲೆಯೊಂದಿಗೆ ಭಾರತ ಹೋರಾಡುತ್ತಿರುವ ಸಮಯದಲ್ಲಿ, ಮಾಸ್ಕ್ ಗಳನ್ನು ಧರಿಸುವ ಮತ್ತು ಆದಷ್ಟು ಬೇಗನೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ವೈರಸ್‍ನಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಮಹತ್ವವನ್ನು ಎತ್ತಿ ತೋರಿಸುವ 'ಗೋ ಕರೋನಾ ಗೋ' ಎಂಬ ಆಕರ್ಷಕವಾದ ವೆಬ್ ಆಧಾರಿತ ಆಟವನ್ನು ವೈಟ್‍ಹ್ಯಾಟ್ ಜೂನಿಯರ್ ವಿದ್ಯಾರ್ಥಿಯಾದ ಬೆಂಗಳೂರಿನ ಅಭಿನವ್ ರಂಜಿತ್ ದಾಸ್ ಎಂಬ 14 ವರ್ಷದ ಯುವಕ ಅಭಿವೃದ್ಧಿಪಡಿಸಿದ್ದಾನೆ.

ಅದ್ಭುತ ಅನಿಮೇಷನ್, ಉತ್ಸಾಹಭರಿತ ಸಂಗೀತ ಮತ್ತು ಆಸಕ್ತಿದಾಯಕ ಕಾರ್ಯಗಳೊಂದಿಗೆ, ವೈರಸ್ ಅನ್ನು ಸೋಲಿಸುವ ಪ್ರಯತ್ನದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಮುನ್ನೆಚ್ಚರಿಕೆಗಳ ಬಗ್ಗೆ ಆಟಗಾರರಿಗೆ ಜಾಗೃತಿ ಮೂಡಿಸುವುದು ವೆಬ್ ಗೇಮ್ ನ ಉದ್ದೇಶವಾಗಿದೆ.

ವೈರಸ್ ಅನ್ನು ಸೋಲಿಸಲು ಮಾಸ್ಕ್ ಗಳು ಮತ್ತು ಪಿಪಿಇ ಕಿಟ್‍ಗಳಂತಹ ಸುರಕ್ಷತಾ ಸಾಧನಗಳಿಗೆ ಪ್ರವೇಶ ಪಡೆಯಲು ಆಟಗಾರನು ವೈರಸ್ ಸೇರಿದಂತೆ ಹರ್ಡಲ್ (ಅಡೆತಡೆ)ಗಳನ್ನು ದಾಟುವ ಮೂರು ಹಂತಗಳನ್ನು ಹೊಂದಿದೆ. ಕೋವಿಡ್ -19 ಲಸಿಕೆಯನ್ನು ಆಟಗಾರನಿಗೆ ಪುರಸ್ಕರವಾಗಿ ನೀಡುವ ಮೂರನೇ ಮತ್ತು ಅಂತಿಮ ಹಂತವನ್ನು ತಲುಪುವುದೇ ಆಟದ ಗುರಿಯಾಗಿದೆ.

``ಪ್ರಸ್ತುತದ ಪರಿಸ್ಥಿತಿಯು ಆಟವನ್ನು ಅಭಿವೃದ್ಧಿಪಡಿಸಲು ನನ್ನನ್ನು ಪ್ರೇರೇಪಿಸಿತು. ಅಂತಿಮ ಗಮ್ಯಸ್ಥಾನವನ್ನು ತಲುಪಲು ಆಟಗಾರನು ಅಡೆತಡೆಗಳನ್ನು ನಿವಾರಿಸಬೇಕಾಗಿರುವುದರಿಂದ, ಜನರು ತಮ್ಮನ್ನು ವೈರಸ್‍ನಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ಮೋಜಿನ ರೀತಿಯಲ್ಲಿ ಅವರಿಗೆ ತಿಳಿಸಲು ಆಟವು ಪ್ರಯತ್ನಿಸುತ್ತದೆ. ಇದು ಸುರಕ್ಷತೆಯನ್ನು ಕುರಿತ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ. ಈ ಆಟವನ್ನು ಆಡುವ ಪ್ರತಿಯೊಬ್ಬರೂ ಇದತಿಂದ ಸ್ಫೂರ್ತಿ ಪಡೆಯಬೇಕು ಮತ್ತು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ ಹಾಗೂ ಇದರಿಂದ ನಾವು ಈ ವೈರಸ್ ನ್ನು ಸೋಲಿಸಬಹುದು", ಎನ್ನುತ್ತಾರೆ ಅಭಿನವ್ ರಂಜಿತ್ ದಾಸ್.

ಅಭಿನವ್ ಅವರು ಸುಮಾರು 8 ತಿಂಗಳಿನಿಂದ ವೈಟ್‍ಹ್ಯಾಟ್ ಜೂನಿಯರ್ ನೊಂದಿಗೆ ಅಧ್ಯಯನ ಮಾಡುತ್ತಿದ್ದಾರೆ ಮತ್ತು 84 ಕೋಡಿಂಗ್ ತರಗತಿಗಳನ್ನು ಪೂರ್ಣಗೊಳಿಸಿದ್ದಾರೆ. ಅಭಿನವ್ ವೆಬ್ ಗೇಮ್ ಅಭಿವೃದ್ಧಿಪಡಿಸಿರುವುದಕ್ಕೆ ಆತನ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಅಭಿನವ್ ಪ್ರತಿದಿನ ಕಲಿಯುತ್ತಿರುವ ವಿಧಾನದ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಮತ್ತು ಈಗ ಹೆಚ್ಚಿನ ಆಟಗಳನ್ನು ಸೃಷ್ಟಿಸಲು ಯೋಜಿಸುತ್ತಿದ್ದೇವೆ ಎಂದು ಆತನ ತಾಯಿ ಸೀಮಾ ರಂಜಿತ್ ಹೇಳಿದ್ದಾರೆ. ಅಭಿನವ್ ಹೆಚ್ಚಿನ ಆಟಗಳನ್ನು ಅಭಿವೃದ್ಧಿಪಡಿಸುವ ಆಶಯವನ್ನು ಹೊಂದಿದ್ದಾರೆ ಮತ್ತು ಪ್ರಸ್ತುತ ಕಾರ್ ರೇಸಿಂಗ್ ಆಟ ಮತ್ತು ರೂಬಿಕ್ಸ್ ಕ್ಯೂಬ್ ಆಟವನ್ನು ರಚಿಸುವ ಕೆಲಸ ಮಾಡುತ್ತಿದ್ದಾರೆ.


Stay up to date on all the latest ವಿಶೇಷ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp