ಕೋವಿಡ್ ತಡೆಗಟ್ಟಲು ಕೊಡಗು ಜಿಲ್ಲೆಯ ಅಂಗನವಾಡಿ ಶಿಕ್ಷಕಿಯಿಂದ ಜನಮೆಚ್ಚುವ ಕಾರ್ಯ!

ಕೊಡಗು ಗ್ರಾಮಾಂತರ ಪ್ರದೇಶದ ಅಂಗನವಾಡಿ ಶಿಕ್ಷಕಿ ಬಿ ಎಂ ಪುಷ್ಪವತಿ ಅವರು ಅವರು ಕೊರೋನಾ ಸಂಕಷ್ಟ ಕಾಲದಲ್ಲಿ ಜನಮೆಚ್ಚುವ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಅಂಗನವಾಡಿ ಇಲ್ಲದಿದ್ದರೂ ಆರೋಗ್ಯ ಕಾರ್ಯಕರ್ತೆಯಾಗಿ, ಇನ್ಸ್ ಪೆಕ್ಟರ್ ಆಗಿ, ನರ್ಸ್ ಆಗಿ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ.
ಬಿ ಎಂ ಪುಷ್ಪವತಿ
ಬಿ ಎಂ ಪುಷ್ಪವತಿ

ಮಡಿಕೇರಿ: ಕೊಡಗು ಗ್ರಾಮಾಂತರ ಪ್ರದೇಶದ ಅಂಗನವಾಡಿ ಶಿಕ್ಷಕಿ ಬಿ ಎಂ ಪುಷ್ಪವತಿ ಅವರು ಅವರು ಕೊರೋನಾ ಸಂಕಷ್ಟ ಕಾಲದಲ್ಲಿ ಜನಮೆಚ್ಚುವ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಅಂಗನವಾಡಿ ಇಲ್ಲದಿದ್ದರೂ ಆರೋಗ್ಯ ಕಾರ್ಯಕರ್ತೆಯಾಗಿ, ಇನ್ಸ್ ಪೆಕ್ಟರ್ ಆಗಿ, ನರ್ಸ್ ಆಗಿ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ.

ಕೊರೋನಾ ಕಾರಣದಿಂದ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿಯೇ ಅಂಗನವಾಡಿ ಬಾಗಿಲು ಮುಚ್ಚಿತ್ತು. ನಂತರ ಸತತವಾಗಿ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗ್ರಾಮದವರಾದ ಪುಷ್ಪಾವತಿ ಇದುವರೆಗೆ 120 ಮನೆಗಳನ್ನು ಭೇಟಿ ಮಾಡಿ ಯಾರ್ಯಾಯ ಮನೆಯಲ್ಲಿ ಕೊರೋನಾ ಸೋಂಕಿತರಿದ್ದಾರೆ ಎಂದು ಪರೀಕ್ಷೆ ಮಾಡುತ್ತಿದ್ದಾರೆ. ನಾನು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ವಲಯ ಸಹಾಯಕರ ಜೊತೆ ರೋಗಿಗಳ ಮನೆಗಳಿಗೆ ಭೇಟಿ ಕೊಟ್ಟು ಅವರಿಗೆ ಕಾಲಕಾಲಕ್ಕೆ ಹೇಗೆ ಔಷಧಿ ತೆಗೆದುಕೊಳ್ಳಬೇಕು, ಮನೆಯಲ್ಲಿಯೇ 14 ದಿನಗಳ ಕಾಲ ಇರಬೇಕೆಂದು ಜಾಗೃತಿ ಮೂಡಿಸುತ್ತೇನೆ ಎನ್ನುತ್ತಾರೆ.

ಕಂಟೈನ್ ಮೆಂಟ್ ವಲಯಗಳಿಗೆ ಯಾರೂ ಪ್ರವೇಶಿಸಬಾರದೆಂದು ನೋಡಿಕೊಳ್ಳುತ್ತೇವೆ. ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ, ನಮ್ಮ ಭೇಟಿ ಸಂದರ್ಭದಲ್ಲಿ ಕೊರೋನಾ ಪಾಸಿಟಿವ್ ರೋಗಿಗಳನ್ನು ಬಹಿರಂಗಪಡಿಸಿದ್ದರಿಂದ ಗ್ರಾಮಸ್ಥರಿಂದ ವಿರೋಧ ಎದುರಿಸಿದ್ದೆವು. ಆದರೆ ನಾವು ಸೋಂಕಿನ ವಿರುದ್ಧ ಹೋರಾಡಲು ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳುತ್ತಾರೆ. ಅಂಗನವಾಡಿ ಶಿಕ್ಷಕಿಯಾಗಿ ನನ್ನ ವಲಯದ ಜನರ, ಮಕ್ಕಳ ಆರೋಗ್ಯ ಮುಖ್ಯವಾಗುತ್ತದೆ ಎನ್ನುತ್ತಾರೆ ಪುಷ್ಪವತಿ.

ಕೊರೋನಾ ಎರಡನೇ ಅಲೆ ತೀವ್ರವಾದ ಸಂದರ್ಭದಲ್ಲಿ ಕೂಡ ನಾವು ಜವಾಬ್ದಾರಿ ಮರೆಯಲಿಲ್ಲ. ಗರ್ಭಿಣಿಯರನ್ನು ಮತ್ತು 6 ವರ್ಷದವರೆಗಿನ ಮಕ್ಕಳನ್ನು ತಪಾಸಣೆ ಮಾಡುವುದು ನನ್ನ ಕೆಲಸ. ಗರ್ಭಿಣಿಯರು ಸೂಕ್ತ ಪೋಷಕಾಂಶ ಆಹಾರ ಸೇವಿಸುತ್ತಾರೆಯೇ, ಹೆರಿಗೆಯಾದ ನಂತರ ಹೇಗೆ ಆರೋಗ್ಯ ಪಾಲಿಸುತ್ತಾರೆ, ಮಗುವಿಗೆ ಹೇಗೆ ಹಾಲುಣಿಸುತ್ತಾರೆ ಎಂದು ನೋಡಿಕೊಳ್ಳಬೇಕಾಗುತ್ತದೆ.

ನಾವು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಪುಟ್ಟ ಮಕ್ಕಳಿಗಾಗಿ ಶೀಘ್ರದಲ್ಲೇ ಪ್ರಾರಂಭವಾಗಲಿರುವ ಆನ್‌ಲೈನ್ ತರಗತಿಗಳೊಂದಿಗೆ, ಅವರು ಪೋಷಕರೊಂದಿಗೆ ಹಂಚಿಕೊಳ್ಳಬೇಕಾದ ಸಿದ್ಧ ವಸ್ತುಗಳನ್ನು ನೀಡುತ್ತೇವೆ. ನಾನು ಬೆಟ್ಟಗೇರಿ ಪ್ರದೇಶದ ಸುಮಾರು 260 ಕುಟುಂಬಗಳ ಉಸ್ತುವಾರಿ ವಹಿಸುತ್ತೇನೆ, ನಮ್ಮ ತಂಡವು ನಿವಾಸಿಗಳ ಆರೋಗ್ಯದ ಬಗ್ಗೆ ನಿಗಾ ಇಡಲು ಎಸ್ಟೇಟ್‌ಗಳವರೆಗೆ ನಡೆದುಕೊಂಡು ಹೋಗುತ್ತೇವೆ. ಅಂಗನವಾಡಿ ಶಿಕ್ಷಕಿಯರು ಸೋಂಕಿನ ವಿರುದ್ಧ ಹೋರಾಡುತ್ತಿರುವುದು ಅನೇಕರ, ಸರ್ಕಾರದ, ಅಧಿಕಾರಿಗಳ ಗಮನಕ್ಕೆ ಬರದಿರುವುದು ಕೆಲವೊಮ್ಮೆ ಬೇಸರವನ್ನುಂಟುಮಾಡುತ್ತದೆ ಎನ್ನುತ್ತಾರೆ ಪುಷ್ಪವತಿ.

ಇವರಿಗೆ ಪಂಚಾಯತ್ ನಿಂದ ಉಚಿತ ಮಾಸ್ಕ್ ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಸಿಗುತ್ತಿಲ್ಲವಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com