ಕೋವಿಡ್ ರೋಗಿಗಳ ಸೇವೆಯಲ್ಲಿ ಸಿಲಿಕಾನ್ ಸಿಟಿಯ ಏಕೈಕ ಕ್ಯಾಬ್ ಚಾಲಕಿ ತುಳಸಿ ಲವಕುಮಾರ್!

ಕೋವಿಡ್ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ಏಕೈಕ ಕ್ಯಾಬ್ ಚಾಲಕಿ ತುಳಸಿ ಲವಕುಮಾರ್. ಆಕೆ ತನ್ನದೇ ಆದ ಹೃದಯಸ್ಪರ್ಶಿ ಕಥೆಯನ್ನು ಹೊಂದಿದ್ದರೂ, ಪಿಪಿಇ ಸೂಟ್ ಧರಿಸಿದ 42 ವರ್ಷದ ತುಳಸಿ ಸದಾ ನಗುಮುಖದೊಂದಿಗೆ ಜನರ ಸೇವೆಗೆ ಸಜ್ಜಾಗುತ್ತಾರೆ. ಅವರ ಕ್ಯಾಬ್ ಬಳಸಿಕೊಳ್ಳುವ ಎಲ್ಲರಿಗೂ ಸಾಂತ್ವನ ನೀಡುತ್ತಾರೆ.

Published: 13th June 2021 08:36 AM  |   Last Updated: 14th June 2021 08:15 PM   |  A+A-


ತುಳಸಿ ಲವಕುಮಾರ್.

Posted By : Raghavendra Adiga
Source : The New Indian Express

ಬೆಂಗಳೂರು: ಕೋವಿಡ್ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ಏಕೈಕ ಕ್ಯಾಬ್ ಚಾಲಕಿ ತುಳಸಿ ಲವಕುಮಾರ್. ಆಕೆ  ತನ್ನದೇ ಆದ ಹೃದಯಸ್ಪರ್ಶಿ ಕಥೆಯನ್ನು ಹೊಂದಿದ್ದರೂ, ಪಿಪಿಇ ಸೂಟ್ ಧರಿಸಿದ 42 ವರ್ಷದ ತುಳಸಿ ಸದಾ ನಗುಮುಖದೊಂದಿಗೆ ಜನರ ಸೇವೆಗೆ ಸಜ್ಜಾಗುತ್ತಾರೆ. ಅವರ ಕ್ಯಾಬ್ ಬಳಸಿಕೊಳ್ಳುವ ಎಲ್ಲರಿಗೂ ಸಾಂತ್ವನ ನೀಡುತ್ತಾರೆ.

ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ ಜತೆಗೆ ಮಾತನಾಡಿದ ತುಳಸಿ “ಸುಮಾರು 12 ವರ್ಷಗಳ ಹಿಂದೆ ನನ್ನ ತಾಯಿ ಇದ್ದಕ್ಕಿದ್ದಂತೆ ಕುಸಿದುಬಿದ್ದಾಗ ನಾವು ಎಂದಿಗೂ ಬರದ ಆಂಬುಲೆನ್ಸ್‌ಗಾಗಿ ಕಾಯುತ್ತಿದ್ದೆವು, ಆದರೆ ಅವರು ಸಾವನ್ನಪ್ಪಿದ್ದರು.ನನ್ನ ತಾಯಿ ಒಬ್ಬರೇ ನಾಲ್ಕು ಹೆಣ್ಣುಮಕ್ಕಳನ್ನು ಸಾಕಬೇಕಾಗಿದ್ದರೂ, ನಾವು ಗೌರವಯುತವಾಗಿ ಬೆಳೆದಿದ್ದೇವೆ. ನಮ್ಮಲ್ಲಿ ಯಾರಿಗೂ ವಾಹನ ಚಲಾಯಿಸಲು ತಿಳಿದಿಲ್ಲದ ಕಾರಣ ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ನಾನು ಡ್ರೈವಿಂಗ್ ಕಲಿಯಬೇಕೆಂದು ಆಗ ನಾನು ಬಯಸಿದ್ದೆ" ಎಂದು ಅವರು ವಿವರಿಸಿದರು. ಕೆಲವು ತಿಂಗಳುಗಳ ನಂತರ, ಬನಶಂಕರಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಸಂಪರ್ಕಿಸಿದ ತುಳಸಿ ಮಹಿಳೆಯರಿಗೆ ಉಚಿತ ಚಾಲನಾ ತರಗತಿಗೆ ಸೇರಿದರು. 

ತರಬೇತಿಗೆ ಸೇರಿದ ಕೆಲವೇ ದಿನಗಳಲ್ಲಿ ವಾಹನ ಚಾಲನೆ ಮಾಡುವಲ್ಲಿ ಪ್ರವೀಣರಾಗಿದ್ದರು. ನಂತರ ಆಕೆ ತನ್ನ ಪತಿ ಮತ್ತು 21 ವರ್ಷದ ಮಗನಿಗೆ ವಾಹನ ಚಲಾಯಿಸಲು ಕಲಿಸಿದರು. ಸ್ವಲ್ಪ ಸಮಯದ ನಂತರ, ಅವರ ಪತಿ ಕ್ಯಾಬ್ ಡ್ರೈವರ್ ಆದರು. ಅವರು ಇತ್ತೀಚೆಗೆ ತುರ್ತು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆದಾಗ್ಯೂ, ಈ ಸಮಯದಲ್ಲಿ, "ನಾನು ಯಾವುದೇ ಆಂಬ್ಯುಲೆನ್ಸ್ ಗಾಗಿ ಕಾಯಬೇಕಾಗಿಲ್ಲ ಅಥವಾ ನನ್ನ ಗಂಡನಿಗೆ ಆಸ್ಪತ್ರೆಗೆ ಸೇರಿಸಲು ಯಾರ ಸಹಾಯವನ್ನೂ ತೆಗೆದುಕೊಳ್ಳಬೇಕಾಗಿಲ್ಲ ನಾನು ಅವರನ್ನು ನಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಅವರ ಜೀವವನ್ನು ಉಳಿಸಿದೆ”.

ಪತಿಯ ಆರೋಗ್ಯದೊಂದಿಗೆ, ಕುಟುಂಬದ ಆರ್ಥಿಕ ಸ್ಥಿತಿ ಕೆಟ್ಟದಾಗಿತ್ತು. ತುಳಸಿ ಸಹ ಕರಾಟೆ ತರಬೇತುದಾರರಾಗಿದ್ದರೂ, ಆಕೆಗೆ ಸಾಕಷ್ಟು ಸಂಪಾದಿಸಲು ಸಾಧ್ಯವಾಗಲಿಲ್ಲ. ಕೋವಿಡ್ ರೋಗಿಗಳನ್ನು ಕರೆದೊಯ್ಯಲು ನೂರಾರು ಜನರು ಕ್ಯಾಬ್ ಸೇವೆಗಳನ್ನು ಬಯಸುತ್ತಾರೆ ಎಂದು ಅವರು ಗಮನಿಸಿದರು. ಆದರೆ ಸೋಂಕಿನ ಭಯದಿಂದ ಯಾರೂ ಸಿದ್ಧರಿರಲಿಲ್ಲ. ಅವರು ತಮ್ಮ ಗಂಡನ ಕಾರನ್ನು Cabtoದಲ್ಲಿ ನೋಂದಾಯಿಸಿಕೊಂಡರು. ನಂತರ ಸೇವೆ ನೀಡಲು ಪ್ರಾರಂಭಿಸಿದರು.

ಅವರು ಈ ಸೇವೆ ನೀಡಲು ಪ್ರಾರಂಭಿಸಿ 20 ದಿನಗಳು ಕಳೆದಿದೆ.“ನನ್ನ ಕ್ಯಾಬ್‌ನಲ್ಲಿ ನಾನು ಸಾಗಿಸುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ನಾನು ಜೀವನದ ಒಂದು ಹೊಸ ಪಾಠವನ್ನು ಕಲಿಯುತ್ತೇನೆ. ನನ್ನನ್ನು ಅಕ್ಕ, ತಾಯಿ. ತಂಗಿ, ಅಮ್ಮ ಎಂದು ಸಂಬೋಧಿಸಲಾಗುತ್ತದೆ. ಆ ಮಾತುಗಳು ನನಗೆ ಆಶೀರ್ವಾದ".

ಅವರು ಪ್ರತಿ ಟ್ರಿಪ್‌ಗೆ 600 ರೂ ನಿಗದಿ ಮಾಡಿದ್ದಾರೆ. ಕರೆ ಬಂದಾಗಲೆಲ್ಲಾ ಸೈನಿಕಳಂತೆ ಸಿದ್ಧವಾಗಿರುವುದಾಗಿ ಹೇಳುತ್ತಾರೆ. ಆಕೆಯ ಸರಾಸರಿ ಗಳಿಕೆಯ ಹೊರತಾಗಿಯೂ, ಅವರು ಅವರ ಸೋದರಿಯರು ಅಗತ್ಯವಿರುವವರಿಗೆ ವಿವಿಧ ಸ್ಥಳಗಳಲ್ಲಿ ಆಹಾರವನ್ನು ವಿತರಿಸಿದ್ದಾರೆ.


Stay up to date on all the latest ವಿಶೇಷ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp