ಉಡುಪಿ: ಲಾಕ್ ಡೌನ್ ವೇಳೆ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಉಳಿತಾಯದ ಹಣದಲ್ಲಿ ದಿನಗೂಲಿ ಕಾರ್ಮಿಕನ ನೆರವು!

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ಸುಮಾರು 70 ಕುಟುಂಬಗಳಿಗೆ ಉಡುಪಿ ಜಿಲ್ಲೆಯ ಅಂಬಾಲಪಾಡಿ ಜಿಲ್ಲೆಯ ದಿನಗೂಲಿ ಕಾರ್ಮಿಕರೊಬ್ಬರು ಸಹಾಯ ಮಾಡಿದ್ದಾರೆ.

Published: 16th June 2021 11:48 AM  |   Last Updated: 16th June 2021 01:13 PM   |  A+A-


krishna

ಕೃಷ್ಣ

Posted By : Shilpa D
Source : The New Indian Express

ಮಂಗಳೂರು: ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ಸುಮಾರು 70 ಕುಟುಂಬಗಳಿಗೆ ಉಡುಪಿ ಜಿಲ್ಲೆಯ ಅಂಬಾಲಪಾಡಿ ಜಿಲ್ಲೆಯ ದಿನಗೂಲಿ ಕಾರ್ಮಿಕರೊಬ್ಬರು ಸಹಾಯ ಮಾಡಿದ್ದಾರೆ.

42 ವರ್ಷದ ಕೃಷ್ಣ ಜೆ ಎಂಬುವರು ದಿನಗೂಲಿ ಕಾರ್ಮಿಕರಾಗಿದ್ದಾರೆ. ತಮ್ಮ ಸಂಪಾದನೆಯೇ ಕಡಿಮೆ ಇದ್ದರೂ ಅದರಲ್ಲಿಯೇ ತನ್ನ ಗಳಿಕೆಯಲ್ಲಿ ಉಳಿತಾಯದ ಹಣವನ್ನು ಹಿಂದು ಮುಂದು ನೋಡದೇ ತಮ್ಮ ನೆರೆಹೊರೆಯವರಿಗೆ ಸಹಾಯ ಮಾಡಿದ್ದಾರೆ.

ಉಡುಪಿಯಿಂದ ಮೂರು ಕಿಮೀ ದೂರದ ಗ್ರಾಮದಲ್ಲಿ ತಮ್ಮ ತಾಯಿ ಮತ್ತು ಸಹೋದರಿಯೊಂದಿಗೆ ವಾಸವಿದ್ದಾರೆ, ಮರ ಕತ್ತರಿಸುವ ಕೆಲಸ ಮಾಡುವ ಕೃಷ್ಣ, ಕಲ್ಮಾಡಿ, ಕಪ್ಪೆಟ್ಟು, ಬಚನಾಬೈಲ್, ಮುಂತಾದ ಗ್ರಾಮಗಳಲ್ಲಿರುವ ಬಡ ಜನರಿಗೆ ಆಹಾರ ಕಿಟ್ ವಿತರಿಸಿದ್ದಾರೆ. ಅಕ್ಕಿ, ಟೀ ಪುಡಿ, ಸಕ್ಕರೆ, ತೆಂಗಿನಕಾಯಿ ಮತ್ತು ಸೋಪು ಸೇರಿದಂತೆ ಹಲವು ಪದಾರ್ಥಗಳನ್ನು ಹಂಚಿದ್ದಾರೆ.

ನಾನು ಕೆಲಸಕ್ಕೆ ಹೋಗುವ ವೇಳೆ ಹಲವು ಬಡ ಕುಟುಂಬಗಳು ಸಹಾಯ ಕೇಳಿದವು, ಹಲವು ವಾರಗಳ ಹಿಂದೆ ಭಾರೀ ಮಳೆಯಿಂದಾಗಿ ಕೆಲವು ಮರಗಳು ಬುಡ ಸಮೇತ ಉರುಳಿ ಬಿದ್ದಿದ್ದವು, ಅವುಗಳನ್ನು ನಾನು ತೆರವುಗೊಳಿಸಿದೆ, ಇದರಿಂದ ನನಗೆ ಸ್ವಲ್ಪ ಹಣ ಸಂಪಾದನೆಯಾಯಿತು, ಈ ಹಣದಿಂದ ನಾನು ಬಡ ಕುಟುಂಬದವರಿಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಿ ನೀಡಿದ್ದೇನೆ, ಲಾಕ್ ಡೌನ್ ಸಮಯದಲ್ಲಿ ದೈನಂದಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕಷ್ಟಪಡುತ್ತಿರುವುದನ್ನು ನಾನು ನೋಡಿದ್ದೆ. ಹೀಗಾಗಿ ನಾನು ಉಳಿತಾಯ ಮಾಡಿದ್ದ 70 ಸಾವಿರ ರು ಹಣವನ್ನು ಬಡವರಿಗೆ ಸಹಾಯ ಮಾಡಲು ಬಳಸಲು ನಿರ್ಧರಿಸಿದೆ ಎಂದು ಕೃಷ್ಣ ತಿಳಿಸಿದ್ದಾರೆ.

ಆರಂಭದಲ್ಲಿ, ನಾವು ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಿದೆವು, ನಂತರ ನಾವು ಅವರನ್ನು ಭಜನಾ ಮಂದಿರಕ್ಕೆ ಕರೆದು ಗ್ರಾಮ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಕಿಟ್‌ಗಳನ್ನು ವಿತರಿಸಿದ್ದೇವೆ ಎಂದು ಅವರು ಹೇಳಿದರು. ಮರ ಕತ್ತರಿಸುವುದರ ಜೊತೆಗೆ ತೆಂಗಿನಕಾಯಿ ಕೀಳುವುದು ಮತ್ತು ಚಾವಣಿ ಕಟ್ಟುವ ಕೆಲಸಗಳನ್ನು ಕೃಷ್ಣ ಮಾಡುತ್ತಾರೆ.

ಬಡತನ ಏನು ಎಂದು ನನಗೆ ತಿಳಿದಿದೆ ಮತ್ತು ಹಸಿವಿನ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈ ಕಷ್ಟದ ಸಮಯದಲ್ಲಿ, ನಾವು ಪರಸ್ಪರ ಸಹಾಯ ಮಾಡಬೇಕಾಗಿದೆ ಎಂದು 9 ನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿರುವ ಕೃಷ್ಣ ಹೇಳಿದರು. ಪಡಿತರ ಕಿಟ್‌ಗಳನ್ನು ವಿತರಿಸುವುದರ ಹೊರತಾಗಿ, ಕೃಷ್ಣ ಅನೇಕ ಬಡ ಕುಟುಂಬಗಳಿಗೆ ಸಾವಿನ ಸಂದರ್ಭದಲ್ಲಿ ಆಂಬ್ಯುಲೆನ್ಸ್  ಗಾಗಿ  ಹಣ ಸಹಾಯ ಮಾಡಿದ್ದಾರೆ. ಕಳೆದ ವರ್ಷವೂ ಅವರು ಲಾಕ್ ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಪಡಿತರ ಕಿಟ್ ವಿತರಿಸಿದರು.


Stay up to date on all the latest ವಿಶೇಷ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp