ಅಸ್ಸಾಂ: ಪ್ರಾಮಾಣಿಕತೆ ಮೆರೆದ ಹೋಂ ಗಾರ್ಡ್ ಗೆ ಪೊಲೀಸ್ ಪೇದೆ ನೌಕರಿಯ ಭಾಗ್ಯ!

ಪ್ರಾಮಾಣಿಕತೆ ಮೆರೆದ ಹೋಂ ಗಾರ್ಡ್ ಬೋರ್ಸಿಂಗ್ ಬೇ ಗೆ ಅಸ್ಸಾಂ ಸರ್ಕಾರ ಉಡುಗೊರೆ ನೀಡಿದ್ದು, ಆತನ ಕನಸು ನನಸಾಗಿದೆ.
ಹೋಮ್ ಗಾರ್ಡ್ ಜವಾನ್ ಬೋರ್ಸಿಂಗ್ ಬೇ'ಗೆ ನೇಮಕಾತಿ ಆದೇಶ ನೀಡುತ್ತಿರುವ ಸಿಎಂ
ಹೋಮ್ ಗಾರ್ಡ್ ಜವಾನ್ ಬೋರ್ಸಿಂಗ್ ಬೇ'ಗೆ ನೇಮಕಾತಿ ಆದೇಶ ನೀಡುತ್ತಿರುವ ಸಿಎಂ

ಗುವಾಹಟಿ: ಪ್ರಾಮಾಣಿಕತೆ ಮೆರೆದ ಹೋಂ ಗಾರ್ಡ್ ಬೋರ್ಸಿಂಗ್ ಬೇ ಗೆ ಅಸ್ಸಾಂ ಸರ್ಕಾರ ಉಡುಗೊರೆ ನೀಡಿದ್ದು, ಆತನ ಕನಸು ನನಸಾಗಿದೆ. 

ಡ್ರಗ್ ಡೀಲರ್ ಗಳಿಂದ ಕೋಟ್ಯಾಂತರ ರೂಪಾಯಿ ಹಣವನ್ನು ನಿರ್ಲಕ್ಷ್ಯಿಸಿ ಅಂತಾರಾಷ್ಟ್ರೀಯ ಕಾಳಸಂತೆಯಲ್ಲಿ 12 ಕೋಟಿ ಬೆಲೆ ಬಾಳುವ ಡ್ರಗ್ಸ್ ನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಲು ಸರ್ಕಾರಕ್ಕೆ ಸಹಾಯ ಮಾಡಿದ್ದಕ್ಕಾಗಿ ಹೋಮ್ ಗಾರ್ಡ್ ಜವಾನ್ ಬೋರ್ಸಿಂಗ್ ಬೇ ಅವರನ್ನು ಪೊಲೀಸ್ ಇಲಾಖೆಗೆ ಸೇರ್ಪಡೆಗೊಳಿಸಿದ್ದು, ಪೊಲೀಸ್ ಪೇದೆಯಾಗಿ ನೇಮಕ ಮಾಡಲಾಗಿದೆ. ನೇಮಕಾತಿ ಆದೇಶವನ್ನು ಸ್ವತಃ ಸಿಎಂ ಹಿಮಂತ ಬಿಸ್ವ ಶರ್ಮ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಿದ್ದಾರೆ. 

12 ಕೋಟಿ ಮೌಲ್ಯದ ಡ್ರಗ್ಸ್ ನ್ನು ವಶಪಡಿಸಿಕೊಂಡು ತಮಿಳುನಾಡಿನ ಇಬ್ಬರು ಮಹಿಳೆಯರೂ ಸೇರಿ ಮೂವರು ಪೆಡ್ಲರ್ ಗಳನ್ನು ಬಂಧಿಸುವುದಕ್ಕೆ ಬೋರ್ಸಿಂಗ್ ಬೇ ಸಹಾಯ ಮಾಡಿದ್ದರು. 

ಹೋಮ್ ಗಾರ್ಡ್ ಗಳಿಗೆ ಅತ್ಯಂತ ಕಡಿಮೆ ವೇತನ ಲಭಿಸುತ್ತಿದೆ, ಬೇ ಸುಲಭವಾಗಿ ಆಮಿಷಕ್ಕೆ ಒಳಗಾಗಬಹುದಿತ್ತು. ಆದರೆ ಅವರು ಹಾಗೆ ಮಾಡದೇ ಸರ್ಕಾರಕ್ಕೆ ಸಹಾಯ ಮಾಡಿದ್ದಾರೆ. 

"ಹಲವು ಪ್ರಕರಣಗಳಲ್ಲಿ ಉನ್ನತ ಶ್ರೇಣಿಯ ಅಧಿಕಾರಿಗಳೇ ಆಮಿಷಕ್ಕೆ ಬಲಿಯಾಗುತ್ತಾರೆ. ಒಂದು ವೇಳೆ ಜವಾನ್ ಗಳು ಆಮಿಷಕ್ಕೆ ಒಳಗಾಗಿದ್ದರೆ ಅನಾಯಾಸವಾಗಿ 1-2 ಕೋಟಿ ರೂಪಾಯಿ ಹಣ ಮಾಡಿಕೊಳ್ಳಬಹುದಾಗಿತ್ತು ಆದರೆ ಹೋಮ್ ಗಾರ್ಡ್ ಜವಾನ್ ಆ ರೀತಿ ಮಾಡದೇ ಇರುವುದು ದೊಡ್ಡ ವಿಷಯವಾಗಿದೆ.ಪೊಲೀಸ್ ಇಲಾಖೆಯಲ್ಲಿ ಸೇರಬೇಕೆಂಬ ಮಹದುದ್ದೇಶ ಹೊಂದಿದ್ದ ಬೇ ಹಲವು ಸಂದರ್ಶನಗಳನ್ನು ನೀಡಿ ತೇರ್ಗಡೆಯಾಗದೇ ಬೇಸತ್ತಿದ್ದರು. ಆದರೆ ಅವರ ಬದ್ಧತೆ ಹಾಗೂ ಧೈರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. 

"ಶರ್ಮ ಹಾಗೂ ಪೊಲೀಸ್ ಮಹಾ ನಿರ್ದೇಶಕರ ಸಹಾಯದಿಂದ ಪೊಲೀಸ್ ಇಲಾಖೆಗೆ ಸೇರುವ ನನ್ನ ಕನಸು ನನಸಾಗಿದೆ, ಈ ಹಿಂದೆ ಕೆಲಸ ಮಾಡಿದಂತೆಯೇ ಈಗಲೂ ಕೆಲಸ ಮಾಡುತ್ತೇನೆ ಎಂದು" ಬೇ ಹೇಳಿದ್ದಾರೆ. ಸಾಹಸ ಮೆರೆದ ಕಡಿಮೆ ಶ್ರೇಣಿಯ ಪೊಲೀಸ್ ಸಿಬ್ಬಂದಿಗಳಿಗೆ ಉನ್ನತ ದರ್ಜೆಯ ಬಡ್ತಿ ನೀಡುವುದಕ್ಕೆ ಸರ್ಕಾರ ನೀತಿ ರೂಪಿಸುವುದನ್ನು ತಮ್ಮ ಸರ್ಕಾರ ಪರಿಗಣಿಸಲಿದೆ ಎಂದು ಅಸ್ಸಾಂ ಸಿ.ಎಂ ಬಿಸ್ವ ಶರ್ಮ ತಿಳಿಸಿದ್ದಾರೆ. 

ಹಿಮಂತ ಬಿಸ್ವ ಶರ್ಮ ಸಿಎಂ ಆದ ಬಳಿಕ 4-45 ದಿನಗಳಲ್ಲಿ ಅಸ್ಸಾಂ ಪೊಲೀಸರು 135 ಕೋಟಿ ರೂಪಾಯಿಗೂ ಹೆಚ್ಚಿನ ಡ್ರಗ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com