ಬಾಳೆ ನಾರಿನಿಂದ ಹಗ್ಗ ತಯಾರಿಸಿದ ಮದುರೈ ರೈತ: ಮನ್ ಕೀ ಬಾತ್ ನಲ್ಲಿ ಮೋದಿ ಮೆಚ್ಚುಗೆ!

ಹೊಸತನ, ಹೊಸ ಆವಿಷ್ಕಾರಗಳಿಗೆ ಮೊದಲು ಸಿಗುವ ಬಹುಮಾನವೇ ಮೂದಲಿಕೆ, ಲೇವಡಿ. ಆದರೆ ಇದನ್ನೆ ಸವಾಲಾಗಿ ಸ್ವೀಕರಿಸಿದ ತಮಿಳುನಾಡಿನ ರೈತರೊಬ್ಬರು ತಮ್ಮ ದಶಕಗಳ ಶ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಮೆಚ್ಚುಗೆ ಪಡೆದಿದ್ದಾರೆ. 

Published: 01st March 2021 02:06 PM  |   Last Updated: 02nd March 2021 03:04 PM   |  A+A-


Murugesan with the household handicraft products he made using banana fibre. (Photo | EPS)

ಬಾಳೆ ನಾರಿನಿಂದ ಹಗ್ಗ ತಯಾರಿಸಿದ ಮದುರೈ ರೈತ: ಮನ್ ಕೀ ಬಾತ್ ನಲ್ಲಿ ಮೋದಿ ಮೆಚ್ಚುಗೆ!

Posted By : Srinivas Rao BV
Source : The New Indian Express

ಮದುರೈಹೊಸತನ, ಹೊಸ ಆವಿಷ್ಕಾರಗಳಿಗೆ ಮೊದಲು ಸಿಗುವ ಬಹುಮಾನವೇ ಮೂದಲಿಕೆ, ಲೇವಡಿ. ಆದರೆ ಇದನ್ನೆ ಸವಾಲಾಗಿ ಸ್ವೀಕರಿಸಿದ ತಮಿಳುನಾಡಿನ ರೈತರೊಬ್ಬರು ತಮ್ಮ ದಶಕಗಳ ಶ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಮೆಚ್ಚುಗೆ ಪಡೆದಿದ್ದಾರೆ. 

ಮದುರೈ ನಲ್ಲಿರುವ 52 ವರ್ಷದ ಮುರುಗೇಸನ್ ಬಾಳೆ ನಾರಿನಿಂದ ಹಗ್ಗ ತಯಾರಿಸುವ ಹೊಸ ಆವಿಷ್ಕಾರಕ್ಕಾಗಿ ಪ್ರಧಾನಿಯಿಂದ ಮೆಚ್ಚುಗೆ ಪಡೆದಿರುವ ರೈತನಾಗಿದ್ದಾರೆ. 

ಮದುರೈನ ವಡಿಪಟ್ಟಿ ತಾಲೂಕಿನ ಮೇಲಕ್ಕಲ್ ಗ್ರಾಮದ ನಿವಾಸಿಯಾಗಿರುವ ಮುರುಗೇಸನ್ ಕಲಿತಿದ್ದು ಕೇವಲ 8 ನ ತರಗತಿ. ಆ ನಂತರ ಅವರ ತಂದೆಯ ಜೊತೆ ಕೃಷಿ ಕೆಲಸದಲ್ಲಿ ತೊಡಗಿದರು. ತಮಗಿರುವ ಎರಡೂವರೆ ಎಕರೆಗಳಲ್ಲಿ ಭತ್ತ ಹಾಗೂ ಬಾಳೆ ಹಣ್ಣುಗಳನ್ನು ಬೆಳೆಯತೊಡಗಿದರು. ಬಾಳೆ ನಾರಿನಿಂದ ಹೊಸತೇನನ್ನಾದರೂ ತಯಾರಿಸಬೇಕೆಂಬುದು ಮುರುಗೇಸನ್ ಗೆ ಹೊಳೆದಿದ್ದು 2009 ರಲ್ಲಿ.!  ಆಗಲೇ ಬಾಳೆ ನಾರಿನಿಂದ ಹಗ್ಗವನ್ನು ತಯಾರಿಸಿದ್ದೆ. ಆದರೆ ಪ್ರಾರಂಭದಲ್ಲಿ ಅದಕ್ಕೆ ಪ್ರತಿಕ್ರಿಯೆಯಾಗಿ ಸಿಕ್ಕಿದ್ದು ಮೂದಲಿಕೆಯಷ್ಟೇ! 

"ಆರು ತಿಂಗಳ ಕಾಲ ಏಕಾಂಗಿಯಾಗಿ ಶ್ರಮಿಸಿ ಕೈ ಚಾಲಿತ ಹಗ್ಗ ಮಾಡುವ ಯಂತ್ರವನ್ನು 2010 ರಲ್ಲಿ ತಯಾರಿಸಿದೆ, ಈಗ ಅದರ ಬೆಲೆ 25,000 ರೂಪಾಯಿಗಳಾಗಿವೆ" ಎನ್ನುತ್ತಾರೆ ಮುರುಗೇಸನ್. 

"ಬಾಳೆ ನಾರಿನ ಹಗ್ಗಗಳನ್ನು ಸ್ವಯಂ ಒಂದು ಉತ್ಪನ್ನವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ ಆದ್ದರಿಂದ ಮನೆಗೆ ಅಗತ್ಯವಿರುವ ಕರಕುಶಲ ಉತ್ಪನ್ನಗಳನ್ನು ತಯಾರಿಸಲು ಮುಂದಾದೆ, 2011 ರಲ್ಲಿ 6 ಜನ ನೌಕರರ ಜೊತೆಯಲ್ಲಿ ಕೊಟ್ಟಿಗೆಯಲ್ಲಿ ಶುರುವಾದ ಸಣ್ಣ ಉದ್ಯಮ ಇಂದು  ಐದು ಯುನಿಟ್ ಗಳಾಗಿದ್ದು 80 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮುರುಗೇಸನ್

ಫೆ.28 ರ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುರುಗೇಸನ್ ಅವರ ನಾವಿನ್ಯ ಆವಿಷ್ಕಾರ ತ್ಯಾಜ್ಯ ವಿಲೆವಾರಿಗೆ ಪರಿಹಾರ ನೀಡುವುದಷ್ಟೇ ಅಲ್ಲದೇ, ರೈತರ ಆದಾಯಕ್ಕೆ ಹೊಸ ಮಾರ್ಗಗಳನ್ನು ತೆರೆಯುತ್ತದೆ" ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆಯ ಮಾತುಗಳು, ರೈತರಿಗೆ ಜೀವನೋಪಾಯ ಕಂಡುಕೊಳ್ಳುವುದಕ್ಕೆ ಮತ್ತಷ್ಟು ಹೆಚ್ಚಿನ ಅವಕಾಶಗಳನ್ನು ತೆರೆಯುವಂತಹ ತರಬೇತಿ ನೀಡುವುದಕ್ಕೆ ತಮ್ಮನ್ನು ಉತ್ತೇಜಿಸುತ್ತದೆ" ಎನ್ನುತ್ತಾರೆ ಮುರುಗೇಸನ್ 

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp