ರಾಜಸ್ಥಾನ: ಪುತ್ರಿಯರ ಪ್ರೇರಣೆಯಿಂದ ಬಿಎ ಪರೀಕ್ಷೆ ಬರೆದ 62 ವರ್ಷದ ಶಾಸಕ!

ಐವರು ಪುತ್ರಿಯರ ಪ್ರೇರಣೆಯಿಂದ 62 ವರ್ಷದ ರಾಜಸ್ಥಾನದ ಶಾಸಕರೊಬ್ಬರು, 40 ವರ್ಷಗಳ ನಂತರ ವಿದ್ಯಾಭ್ಯಾಸವನ್ನು ಪುನರ್ ಆರಂಭಿಸಿದ್ದಾರೆ. ಉದಯಪುರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ ಈಗ ಅಂತಿಮ ವರ್ಷದ ಬಿಎ ಪರೀಕ್ಷೆಯನ್ನು ಬರೆದಿದ್ದಾರೆ.

Published: 03rd March 2021 08:49 PM  |   Last Updated: 03rd March 2021 08:49 PM   |  A+A-


Rajasthan_MLA_sits_for_BA_exams1

ಪರೀಕ್ಷೆ ಬರೆಯುತ್ತಿರುವ 62 ವರ್ಷದ ಶಾಸಕ

Posted By : Nagaraja AB
Source : The New Indian Express

ಜೈಪುರ: ಐವರು ಪುತ್ರಿಯರ ಪ್ರೇರಣೆಯಿಂದ 62 ವರ್ಷದ ರಾಜಸ್ಥಾನದ ಶಾಸಕರೊಬ್ಬರು, 40 ವರ್ಷಗಳ ನಂತರ ವಿದ್ಯಾಭ್ಯಾಸವನ್ನು ಪುನರ್ ಆರಂಭಿಸಿದ್ದಾರೆ. ಉದಯಪುರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ ಈಗ ಅಂತಿಮ ವರ್ಷದ ಬಿಎ ಪರೀಕ್ಷೆಯನ್ನು ಬರೆದಿದ್ದಾರೆ.

ಮಂಗಳವಾರ ಉದಯಪುರದಲ್ಲಿನ ಕೊಟಾ ಮುಕ್ತ ವಿಶ್ವವಿದ್ಯಾನಿಲಯ ಕೇಂದ್ರದಲ್ಲಿ ರಾಜ್ಯಶಾಸ್ತ್ರ ಪರೀಕ್ಷೆ ಬರೆಯಲು ಬಂದಾಗ ಶಾಸಕರು ಆಕರ್ಷಣೇಯ ಕೇಂದ್ರಬಿಂದುವಾದರು.ಶಿಕ್ಷಣ ರಾಜಕೀಯದಷ್ಟು ಮುಖ್ಯವಾಗಿರುತ್ತದೆ ಅವರು ಹೇಳಿದರು.

ಎರಡು ಬಾರಿ ಶಾಸಕರಾಗಿರುವ ಮೀನಾ, ರಾಜಕೀಯ ಕ್ಷೇತ್ರದಲ್ಲಿ ಹಲವು ಪರೀಕ್ಷೆಗಳನ್ನು ಎದುರಿಸಿದ್ದರೂ ಯಾವುದೇ ಡಿಗ್ರಿ ಇಲ್ಲದಿರುವುದು ಅಥವಾ ಬೋರ್ಡ್ ಪರೀಕ್ಷೆಯಲ್ಲಿ ಪಾಸಾಗದೆ ಇರುವುದರಿಂದ ಮುಜುಗರ ಅನುಭವಿಸುತ್ತಿದ್ದರು.  ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿದ್ದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಹತ್ವ ಕುರಿತು ಸರಿಯಾದ ಭಾಷಣ ಮಾಡಲು ಕೂಡಾ ಆಗುತ್ತಿರಲಿಲ್ಲ. ಇದನ್ನು ಮನಗೊಂಡು ವಿದ್ಯಾಭ್ಯಾಸ ಪುನರ್ ಆರಂಭಿಸಿದ್ದಾಗಿ ತಿಳಿಸಿದ್ದಾರೆ.

ಸೇನೆಯಲ್ಲಿ ತಮ್ಮ ತಂದೆ ನಿಧನರಾದ ಬಳಿಕ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಕುಟುಂಬವನ್ನು ನೋಡಿಕೊಳ್ಳಲು ಕೃಷಿಯಲ್ಲಿ ತೊಡಗಿಸಿಕೊಂಡೆ. ಇದರಿಂದಾಗಿ ಶಾಲಾ ಶಿಕ್ಷಣವನ್ನು ಸಹ ಪೂರ್ಣಗೊಳಿಸಲು ಆಗಲಿಲ್ಲ. ಆದರೆ, ಅವರ ಐವರು ಪುತ್ರಿಯರಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಅವರ ಐವರು ಪುತ್ರಿಯರ ಪೈಕಿ ನಾಲ್ವರು ಇದೀಗ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ. ಹಿರಿಯ ಪುತ್ರಿ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ.

2013ರಲ್ಲಿ ಮೊದಲ ಬಾರಿಗೆ ಶಾಸಕರಾದ ನಂತರ ತನ್ನ ಪುತ್ರಿಯರ ಪ್ರೇರಣೆಯಿಂದ ವಿದ್ಯಾಭ್ಯಾಸವನ್ನು ಪುನರ್ ಆರಂಭಿಸಿದೆ. 2013ರಲ್ಲಿ 10ನೇ ತರಗತಿಗೆ ತನ್ನ ಪುತ್ರಿಯರು ದಾಖಲುಪಡಿಸಿದರು. ನಂತರ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು, ಇದೀಗ ಅಂತಿಮ ವರ್ಷದ ಬಿಎ ಪರೀಕ್ಷೆ ಬರೆದಿದ್ದೇನೆ. ಶೀಘ್ರದಲ್ಲಿಯೇ ಪದವಿ ಪಡೆಯುವ ವಿಶ್ವಾಸದಲ್ಲಿರುವುದಾಗಿ ಶಾಸಕರು ಹೇಳಿದ್ದಾರೆ. 

ಸ್ನಾತಕೋತ್ತರ ಹಾಗೂ ಪಿಹೆಚ್ ಡಿ ಪದವಿ ಪಡೆಯುವ ಚಿಂತನೆ ನಡೆಸಿರುವುದಾಗಿ ಶಾಸಕ ಮೀನಾ ತಿಳಿಸಿದ್ದಾರೆ. ಫೂಲ್ ಸಿಂಗ್ ಮೀನಾ ಕ್ಷೇತ್ರದ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಸಾಕಷ್ಟು ನೆರವು ನೀಡಿದ್ದಾರೆ. ರಾಜಸ್ಥಾನ ವಿಧಾನಸಭೆ ವೀಕ್ಷಿಸಲು ಉಚಿತವಾಗಿ ವಿಮಾನ ಪ್ರಯಾಣದ ಸೇವೆ ಕಲ್ಪಿಸಿದ್ದಲ್ಲದೇ, ಮುಖ್ಯಮಂತ್ರಿ ಮತ್ತಿತರ ಗಣ್ಯರನ್ನು ಭೇಟಿ ಮಾಡಿಸಿದ್ದಾರೆ. ಈವರೆಗೂ ಸುಮಾರು 50 ವಿದ್ಯಾರ್ಥಿಗಳ ವಿಮಾನ ಪ್ರಯಾಣಕ್ಕೆ ಹಣ ನೀಡಿದ್ದಾರೆ.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp