ಉಡುಪಿ: ಹೃದ್ರೋಗ ತಜ್ಞ ಪದ್ಮನಾಭ ಕಾಮತ್ ನಿಸ್ವಾರ್ಥ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ

ಹೃದಯ ಸಂಬಂಧಿತ ಕಾಯಿಲೆಗಳನ್ನು ಪತ್ತೆಹಚ್ಚಲು ನೆರವಾಗುವ ನಿಟ್ಟಿನಲ್ಲಿ ಮಂಗಳೂರಿನ ಮೂಲದ ಹೃದ್ರೋಗ ತಜ್ಞ- ಡಾ. ಪದ್ಮನಾಭ ಕಾಮತ್ ಅವರು ಇಸಿಜಿ ಯಂತ್ರಗಳನ್ನು ಯಶಸ್ವಿಯಾಗಿ ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಸೇರಿದಂತೆ ಆರು ಜಿಲ್ಲೆಗಳ 30 ಜನೌಷಧಿ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

Published: 07th March 2021 06:32 PM  |   Last Updated: 08th March 2021 12:46 PM   |  A+A-


ಡಾ.ಪದ್ಮನಾಭ ಕಾಮತ್

Posted By : Raghavendra Adiga
Source : The New Indian Express

ಉಡುಪಿ: ಹೃದಯ ಸಂಬಂಧಿತ ಕಾಯಿಲೆಗಳನ್ನು ಪತ್ತೆಹಚ್ಚಲು ನೆರವಾಗುವ ನಿಟ್ಟಿನಲ್ಲಿ ಮಂಗಳೂರಿನ ಮೂಲದ ಹೃದ್ರೋಗ ತಜ್ಞ- ಡಾ. ಪದ್ಮನಾಭ ಕಾಮತ್ ಅವರು ಇಸಿಜಿ ಯಂತ್ರಗಳನ್ನು ಯಶಸ್ವಿಯಾಗಿ ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಸೇರಿದಂತೆ ಆರು ಜಿಲ್ಲೆಗಳ 30 ಜನೌಷಧಿ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಡಾ. ಕಾಮತ್ ಬ್ರಹ್ಮಾವರ, ಸಿ.ಎಚ್.ಸಿ ಯಲ್ಲಿ ಜನೌಷಧಿ ದಿನದ ಕಾರ್ಯಕ್ರಮ ವೇದಿಕೆಯಿಂದ ಪಿಎಂ ಮೋದಿ ಅವರೊಂದಿಗೆ ಸಂವಾದ ನಡೆಸಿದರು. ಗ್ರಾಮೀಣ ಜನರಿಗೆ ಯಾವುದೇ ಹೃದಯ ಕಾಯಿಲೆ ಎದುರಾದರೆ ರೋಗನಿರ್ಣಯ ಮಾಡುವುದು ಕಷ್ಟ ಎಂದು ಅವರು ಕಂಡುಕೊಂಡಿದ್ದು ಮೂರು ವರ್ಷಗಳ ಹಿಂದೆ ನಮ್ಮಿಂದ ಜನೌಷಧಿ ಕೇಂದ್ರಗಳಲ್ಲಿ ಇಸಿಜಿ ಯಂತ್ರಗಳನ್ನು ಪೂರೈಸಲು ನಿರ್ಧರಿಸಲಾಗಿತ್ತು ಎಂದು ಹೇಳಿದ್ದಾರೆ."ಇದನ್ನು ಪ್ರಾರಂಭಿಸಿದಾಗ ಅನೇಕರು ನನ್ನನ್ನು ಕಂಡು ಹಾಸ್ಯ ಮಾಡಿದ್ದರು.ಜನೌಷಧಿ ಪರಿಕಲ್ಪನೆಯನ್ನು ಬೆಂಬಲಿಸಲು ಹೃದ್ರೋಗ ತಜ್ಞರಿಗೆ ಇವೆಲ್ಲ ಏಕೆ ಬೇಕು ಎಂದು ಕೆಲವರು ಕೇಳಿದ್ದಾರೆ" ಎಂದು ಅವರು ಹೇಳಿದರು.

"ಆದರೆ ಈಗ ಅನೇಕರಿಗೆ ಇದರಿಂದ ಉಪಯೋಗವಾಗಿದೆ.100 ಕ್ಕೂ ಹೆಚ್ಚು ಹೃದಯಾಘಾತದ ತೊಂದರೆಗಳನ್ನು ಜನೌಷಧಿ ಕೇಂದ್ರಗಳಲ್ಲಿ ಇಸಿಜಿಯ ಕಾರ್ಯತಂತ್ರದದ ಮೂಲಕ ತಪ್ಪಿಸಲಾಗಿದೆ. ನಾವು ಇಸಿಜಿಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಜನೌಷಧಿ ಕೇಂದ್ರಗಳಲ್ಲಿ ಜನರಿಗೆ ತರಬೇತಿ ನೀಡಿದ್ದೇವೆ" ಎಂದು ಡಾ ಕಾಮತ್ ವಿವರಿಸಿದರು.

ಎರಡು ವರ್ಷಗಳ ಹಿಂದೆ ಜನೌಷಧಿ ಕೇಂದ್ರವನ್ನು ಸ್ಥಾಪಿಸಲು ಯುವಕನಿಗೆ ಸಹಾಯ ಮಾಡಿದ ಘಟನೆ ಮತ್ತು ಮಂಗಳೂರಿನಲ್ಲಿ ಕೇಂದ್ರವು ಉತ್ತಮ ವ್ಯವಹಾರ ಮಾಡುತ್ತಿರುವಾಗ ಯುವಕರು ಈಗ ಹೇಗೆ ಸ್ವಾವಲಂಬಿಗಳಾಗಿದ್ದಾರೆ ಎಂಬುದನ್ನು ಡಾ. ಕಾಮತ್ ನೆನೆದರು.

ವೈದ್ಯಕೀಯ ವೃತ್ತಿಯನ್ನು ಮಾನವಕುಲಕ್ಕೆ ಸೇವೆ ಸಲ್ಲಿಸುವ ಗಿಫ್ಟ್ ಆಗಿ ಜನರು ಪರಿಗಣಿಸುವುದರಿಂದ ಡಾ. ಕಾಮತ್ ವೃತ್ತಿಯ ಪಾವಿತ್ರ್ಯವನ್ನು ಎತ್ತಿಹಿಡಿದಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಕಾಮತ್  ಸೇವಾ ಮನೋಭಾವವನ್ನು ಆನುವಂಶಿಕವಾಗಿ ಪಡೆದಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.  ಡಾ. ಕಾಮತ್ ಅವರು ವಾಟ್ಸಾಪ್ ಗ್ರೂಪ್, ಕಾರ್ಡಿಯಾಲಜಿ ಅಟ್ ಡೋರ್‌ಸ್ಟೆಪ್ಸ್ (ಸಿಎಡಿ) ಯನ್ನು ಪ್ರಾರಂಭಿಸಿವಿಶೇಷವಾಗಿ ಅನೇಕ ವೈದ್ಯರೊಂದಿಗೆ ತ್ವರಿತವಾಗಿ ರೋಗನಿರ್ಣಯಕ್ಕೆ ಸಹಾಯ ಮಾಡುವ ಇದು ವಿಶೇಷವಾಗಿ ದೂರದ ಗ್ರಾಮೀಣ ಪ್ರದೇಶ, ತಜ್ಞರು ಸುಲಭವಾಗಿ ತಲುಪಲು ಆಗದ ಪ್ರದೇಶಗಳಿಗೆ ಇದರಿಂದ ಒಳಿತಾಗಲಿದೆ.ಸೆಕೆಂಡ್ ಒಪಿನಿಯನ್ ಗಾಗಿ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಮಾಡಲಾದ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಓದುವ ವಿಷಯದಲ್ಲಿ ವೈದ್ಯರು ಗ್ರಾಮೀಣ ವೈದ್ಯರಿಗೆ ತಮ್ಮ ಮಾರ್ಗದರ್ಶನವನ್ನು ನೀಡುತ್ತಾರೆ.ಜನೌಷಧಿ ಕೇಂದ್ರವು ಕೇವಲ .ಔಷಧಿಗಳನ್ನು ನೀಡುವುದಕ್ಕಿಂತ ಜನರಿಗೆ ಅನೇಕ ಬಗೆಯಲ್ಲಿ ಉಪಯೋಗವಾಗುತ್ತದೆಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಅದಕ್ಕಾಗಿಯೇ ಜನೌಷಧಿ ಕೇಂದ್ರದಲ್ಲಿ ಇಸಿಜಿ ಯಂತ್ರಗಳನ್ನು ಲಭ್ಯವಾಗಬೇಕು ಎಂದು ಅವರು ಭಾವಿಸಿದ್ದರು.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp