ಮಹಿಳಾ ದಿನ ವಿಶೇಷ: ಕೊರೋನಾ ಹಿಮ್ಮೆಟ್ಟಿಸಿ 87 ಕಿ.ಮೀ. ಮ್ಯಾರಥಾನ್ ಪೂರ್ಣಗೊಳಿಸಿದ ಬೆಂಗಳೂರು ವೈದ್ಯೆ

ಕಳೆದ ಮೂರು ವರ್ಷಗಳಲ್ಲಿ ಹಲವಾರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿರುವ ನರವಿಜ್ಞಾನಿ  ಡಾ.ಅನುರಾಧಾ ಎಚ್. ಕೆ. ಕೆಲ ತಿಂಗಳ ಹಿಂದೆ ಕೊರೋನಾ ಸೋಂಕಿಗೆ ಧನಾತ್ಮಕ ವರದಿ ಪಡೆದರು. ಇದು ಅವರ ಶ್ವಾಸಕೋಶದ ಮೇಲೆ ಪರಿಣಾಮ ಬೀರಿತು

Published: 08th March 2021 11:08 AM  |   Last Updated: 08th March 2021 12:52 PM   |  A+A-


ಡಾ ಅನುರಾಧಾ ಎಚ್. ಕೆ.

Posted By : Raghavendra Adiga
Source : The New Indian Express

ಬೆಂಗಳೂರು:  ಕಳೆದ ಮೂರು ವರ್ಷಗಳಲ್ಲಿ ಹಲವಾರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿರುವ ನರವಿಜ್ಞಾನಿ ಡಾ.ಅನುರಾಧಾ ಎಚ್. ಕೆ., ಕೆಲ ತಿಂಗಳ ಹಿಂದೆ ಕೊರೋನಾ ಸೋಂಕಿಗೆ ಧನಾತ್ಮಕ ವರದಿ ಪಡೆದರು. ಇದು ಅವರ ಶ್ವಾಸಕೋಶದ ಮೇಲೆ ಪರಿಣಾಮ ಬೀರಿತು.ಆಕೆ ಮತ್ತೆ ತಾನು ಮ್ಯಾರಥಾನ್ ಗಳಲ್ಲಿ ಭಾಗವಹಿಸಬಹುದೆ ಎಂದು ಆತಂಕಗೊಂಡಿದ್ದರು. ಆದರೆ ಸೋಂಕಿನಿಂದ ಚೇತರಿಸಿಕೊಳ್ಳಲು ಕೆಲ ಸಮಯ ತೆಗೆದುಕೊಂಡರೂ ಸಹ ಇದೀಗ ಮತ್ತೆ ತರಬೇತಿ ಪ್ರಾರಂಭಿಸಿದರು.ಅಲ್ಲದೆ ದೃಢ ನಿಶ್ಚಯದ ಮೂಲಕ , ಅವರು ಇತ್ತೀಚೆಗೆ 87.15 ಕಿ.ಮೀ ವ್ಯಾಪ್ತಿ, 12 ಗಂಟೆಗಳ ಸ್ಟೇಡಿಯಂ ರೇಸ್ ಪೂರ್ಣಗೊಳಿಸಿ ಎರಡನೇ ಸ್ಥಾನವನ್ನು ಗಳಿಸಿದರು.

ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾ.ಅನುರಾಧಾ (42) ಗೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೋವಿಡ್ ಕಾಣಿಸಿಕೊಂಡಿತ್ತು.ಆರಂಭದಲ್ಲಿ ಆಕೆಯ ಸ್ಥಿತಿ ತೀವ್ರ ಸಮಸ್ಯೆಯಿಂದ ಕೂಡಿರಲಿಲ್ಲವಾಗಿಯೂ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿ ಮೂರನೆಯ ದಿನ, ಅವರ ದೇಹದಲ್ಲಿ ಆಮ್ಲಜನಕದ ಮಟ್ಟವು ಇಳಿಯಲು ಪ್ರಾರಂಭಿಸಿತು, ಮತ್ತು ಅವರಿಗೆ ತೀವ್ರವಾದ ಕೆಮ್ಮಿನ ಸಮಸ್ಯೆ ಕಾಣಿಸಿತ್ತು. ಆಕೆ ದುರ್ಬಲಳಾಗಿ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ.ಅವರ ಸಿಟಿ ಸ್ಕ್ಯಾನ್ ನಲ್ಲಿ ಸಾಮಾನ್ಯ ಮಟ್ಟದ ನ್ಯುಮೋನಿಯಾ ಇರುವುದು ಸ್ಪಷ್ಟವಾಗಿತ್ತು. ಅದಕ್ಕಾಗಿ ಅವರಿಗೆ ಔಢಧಿ ನೀಡಲಾಯಿತು.ಹತ್ತು ದಿನಗಳಲ್ಲಿ ಆಕೆ ಚೇತರಿಸಿಕೊಂಡರಾದರೂ ಕೆಲ ಆರೋಗ್ಯ ಸಮಸ್ಯೆಯ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಲು ಬಯಸಿದ್ದರು. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅವರಿಗೆ ಎರಡು ದೀರ್ಘ ತಿಂಗಳುಗಳು ಬೇಕಾಯಿತು. ತಕ್ಷಣ, ಅವರು ಮನೆಯ ಸಮೀಪವೇ ವಾಕಿಂಗ್ ಮಾಡಲು ಪ್ರಾರಂಭಿಸಿದ್ದರು.ಮುಂದೆ ನಿಧಾನವಾಗಿ ಉದ್ಯಾನವನದಲ್ಲಿ ವಾಕಿಂಗ್ ಮಾಡಲು ಪ್ರಯತ್ನಿಸಿದ್ದರು.

“ನಾನು ಓಡುವುದನ್ನು ಬಿಟ್ಟುಕೊಡಲು ಇಷ್ಟವಿರಲಿಲ್ಲ. ಇದು ನನ್ನ ಪ್ರೀತಿಯ ವಿಷಯವಾಗಿತ್ತು. ನಾನು ದೇಶಾದ್ಯಂತ 50 ಕ್ಕೂ ಹೆಚ್ಚು ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದೇನೆ. ನಾನು ಚಿಂತೆಗೀಡಾಗಿದ್ದರೂ ಕೆಲವು ಸಮಯಗಳಲ್ಲಿ ನನ್ನ ಶ್ವಾಸಕೋಶದ ಬಗ್ಗೆ ಯೋಚಿಸುವಾಗ ಭಯವಾಗುತ್ತಿತ್ತು.ನಾನು ಸಾವಿಗೀಡಾಗಬಹುದು ಎಂಬ ಭಯ ಸಹ ಆವರಿಸಿತ್ತು. ಆದರೆ ನಾನು ಓಟವನ್ನು ಬಿಟ್ಟುಕೊಡಲು ಬಯಸಿಲ್ಲ."

ಒಂದು ತಿಂಗಳು ತರಬೇತಿ ಪಡೆದ ಅನುರಾಧಾ ಆ ನಂತರ ತನ್ನ ಮೊದಲ ಮ್ಯಾರಥಾನ್‌ನಲ್ಲಿ ಭಾಗವಹಿಸಿದರು."ನಾನು ಮತ್ತೆ ಮ್ಯಾರಥಾನ್ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ನಾನು ಅದನ್ನು ಪೂರ್ಣಗೊಳಿಸಿದೆ. ನಾನು ಮತ್ತೆ ಓಡುತ್ತಿದ್ದೇನೆ ಎಂದು ನನಗೆ ತುಂಬಾ ಸಂತೋಷದ ಸಂಗತಿ.ನಾನು ಗೆಲ್ಲಲಿಕ್ಕಾಗಿ ಭಾಗವಹಿಸಿಲ್ಲ. ಬದಲಿಗೆ ನಾನೆಷ್ಟು ಆರೋಗ್ಯವಾಗಿದ್ದೇನೆ ಎಂದು ನೋಡಲು ಭಾಗವಹಿಸಿದ್ದೆ."ಅವರು ಹೇಳಿದರು.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp