ಹೆಣ್ಣುಮಕ್ಕಳಿಗೆ ಆಶಾಕಿರಣ: ಬುಡಕಟ್ಟು ಮಹಿಳೆಯರಿಗೆ ಸ್ವಶಕ್ತಿ ತುಂಬಲು ಸ್ವತಃ ಶಿಕ್ಷಣ ಪಡೆದು ಶಿಕ್ಷಕಿಯಾದ ಮಹಿಳೆ!

ದಕ್ಷಿಣ ರಾಜಸ್ತಾನದ ಬುಡಕಟ್ಟು ಜನಾಂಗದವರು ನೆಲೆಸಿರುವ ಪ್ರದೇಶದಲ್ಲಿ 43 ವರ್ಷದ ಬಸಂತಿ ದೇವಿ ಶಿಕ್ಷಕಿಯಾಗಿದ್ದು ಹೇಗೆ ಎಂದು ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

Published: 15th March 2021 02:01 PM  |   Last Updated: 16th March 2021 12:45 PM   |  A+A-


Besides teaching in her village school, Basanti goes out every evening to engage with women in her area to not only send their kids to school but also make them realise the importance of education.

ಮಕ್ಕಳಿಗೆ ಪಾಠ ಮಾಡುತ್ತಿರುವ ಬಸಂತಿ ದೇವಿ

Posted By : Sumana Upadhyaya
Source : The New Indian Express

ರಾಜಸ್ತಾನ: ದಕ್ಷಿಣ ರಾಜಸ್ತಾನದ ಬುಡಕಟ್ಟು ಜನಾಂಗದವರು ನೆಲೆಸಿರುವ ಪ್ರದೇಶದಲ್ಲಿ 43 ವರ್ಷದ ಬಸಂತಿ ದೇವಿ ಶಿಕ್ಷಕಿಯಾಗಿದ್ದು ಹೇಗೆ ಎಂದು ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಬಸಂತಿ ದೇವಿಯ ಸಾಧನೆ ಬಗ್ಗೆ ಕೇಳಿದರೆ ಆಕೆಯ ಬಾಲ್ಯಜೀವನಕ್ಕೆ ಒಮ್ಮೆ ಕರೆದುಕೊಂಡು ಹೋಗುತ್ತಾರೆ. ತೀರಾ ಬಡ ಕುಟುಂಬ, ಶಿಶುವಿದ್ದಾಗಲೆ ತಂದೆ-ತಾಯಿಯನ್ನು ಕಳೆದುಕೊಂಡ ಬಸಂತಿ ದೇವಿ, ತಾಯಿಯ ತಂದೆ-ತಾಯಿಯ ಆಶ್ರಯದಲ್ಲಿ ಸಿರೊಹಿ ಎಂಬ ಜಿಲ್ಲೆಯ ಕುಗ್ರಾಮವೊಂದರಲ್ಲಿ ಬೆಳೆದು ದೊಡ್ಡವಳಾಗಿದ್ದು.

5ನೇ ತರಗತಿಯವರೆಗೆ ಶಾಲೆಗೆ ಹೋದ ಬಸಂತಿಗೆ 13ನೇ ವರ್ಷದಲ್ಲಿ ಮದುವೆಯಾಯಿತು. ಸಿರೋಹಿಯಿಂದ 50 ಕಿಲೋ ಮೀಟರ್ ದೂರದಲ್ಲಿ ತಾಂಡಿ ಬೆರಿ ಗ್ರಾಮದಲ್ಲಿ ಪತಿ ಹಕ್ಮ ರಾಮ್ ಜೊತೆ ವಾಸಿಸಲು ಆರಂಭಿಸಿದ ಬಸಂತಿ ದೇವಿಗೆ ಆಗ ಅರಿವಿಗೆ ಬಂದಿದ್ದು, ತನ್ನಷ್ಟು ಕೂಡ ಶಾಲೆಗೆ ಹೋಗಿ ಓದಿದವರು ಈ ಗ್ರಾಮದಲ್ಲಿ ಯಾವ ಹೆಣ್ಣು ಮಕ್ಕಳಿಲ್ಲ  ಎಂದು. ಹತ್ತನೇ ತರಗತಿಯವರೆಗೆ ಓದಿದ್ದ ಹಕ್ಮ ರಾಮ್ ಪತ್ನಿಗೆ ಓದುವಂತೆ ಹುರಿದುಂಬಿಸಿದ್ದರು.

ಬಸಂತಿ ದೇವಿ 

ಬಸಂತಿಗೆ ಮದುವೆಯಾದ ಕೆಲ ವರ್ಷಗಳಲ್ಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಶಿಕ್ಷ ಕರ್ಮಿ ಯೋಜನೆಯನ್ನು ಆರಂಭಿಸಿತ್ತು. ಅದರಲ್ಲಿ 5ನೇ ತರಗತಿಯವರೆಗೆ ಓದಿದವರು ಬುಡಕಟ್ಟು ಪ್ರದೇಶದಲ್ಲಿ ಶಿಕ್ಷಕರಾಗಬಹುದಿತ್ತು. ಹೀಗಾಗಿ ನನಗೆ ಹಳ್ಳಿಯಲ್ಲಿ ಪಾಠ ಹೇಳಿಕೊಡಲು ಅವಕಾಶ ಸಿಕ್ಕಿತು ಎಂದು ಬಸಂತಿ ಹೇಳುತ್ತಾರೆ.

2000ನೇ ಇಸವಿಯಲ್ಲಿ ಗೌರವ ಧನವಾಗಿ ಬಸಂತಿಗೆ ತಿಂಗಳಿಗೆ 600 ರೂಪಾಯಿ ನೀಡುತ್ತಿದ್ದರು. ಆರಂಭದಲ್ಲಿ ಪಾಠ ಹೇಳಿಕೊಡುವುದಕ್ಕೆ ಬಸಂತಿಗೆ ಅತ್ತೆಯ ವಿರೋಧವಿದ್ದರೂ ಹಣ ಬರಲಾರಂಭಿಸಿದಾಗ ಖುಷಿಯಾಯಿತಂತೆ. ನಂತರ ವಿರೋಧಿಸಲಿಲ್ಲ ಎನ್ನುತ್ತಾರೆ ಬಸಂತಿ.

ಧೈರ್ಯಶಾಲಿ ಬಸಂತಿ ಮೊದಲು 8 ನೇ ತರಗತಿ ಪರೀಕ್ಷೆಗಳನ್ನು ತೇರ್ಗಡೆ ಮಾಡಿದರು, ಶೀಘ್ರದಲ್ಲೇ ರಾಜ್ಯ ಮುಕ್ತ ಶಾಲೆಯಿಂದ 10 ನೇ ತರಗತಿ ಮಂಡಳಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಕೆಲವು ವರ್ಷಗಳ ನಂತರ, ತನ್ನ ಸ್ವಂತ ಮಗಳು 10 ನೇ ತರಗತಿಯನ್ನು ತಲುಪಿದಾಗ, ಬಸಂತಿ ಮತ್ತು ಅವರ ಪತಿ ಇಬ್ಬರೂ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತೆಗೆದುಕೊಂಡು ಕಲಿತು ತೇರ್ಗಡೆ ಹೊಂದಿದರು. ನಂತರ ಖಾಸಗಿ ಕಾಲೇಜಿಗೆ ಸೇರಿಕೊಂಡು ಬಿಎ ಪದವಿ ಪಡೆದರು. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರಿಗೆ ಬಿ.ಎಡ್ ಪದವಿಗೆ ಸಮಾನವಾದ ಎಸ್‌ಟಿಸಿ ತೆಗೆದುಕೊಳ್ಳುವಂತೆ ಹೇಳಿದಾಗ, ಬಸಂತಿ ಸಂತೋಷದಿಂದ ಪೂರ್ಣ ತರಬೇತಿ ಪಡೆದು ಶಾಲಾ ಶಿಕ್ಷಕರಾಗಲು ಅರ್ಹತೆಯನ್ನು ಪಡೆದರು.

ನಾನು ಕಲಿಸಲು ಪ್ರಾರಂಭಿಸಿದಾಗ, ನಮ್ಮ ಹಳ್ಳಿಯ ಶಾಲೆಯಲ್ಲಿ ಕೇವಲ ಐದು ಹುಡುಗಿಯರಿದ್ದರು. ಈಗ 300 ಕ್ಕೂ ಹೆಚ್ಚು ಬಾಲಕಿಯರು ಪ್ರೌಢ ಶಾಲೆಯಲ್ಲಿದ್ದಾರೆ. ಪ್ರಸ್ತುತ, ನಮ್ಮ ಶಾಲೆಗೆ ದಾಖಲಾದ 108 ವಿದ್ಯಾರ್ಥಿಗಳಲ್ಲಿ 53 ಬಾಲಕಿಯರಿದ್ದಾರೆ ಎಂದು ಹೆಣ್ಣುಮಕ್ಕಳ ಶಿಕ್ಷಣ ಪ್ರಗತಿ ಬಗ್ಗೆ ಬಸಂತಿ ಹೇಳುತ್ತಾರೆ. 

ಬಸಂತಿಯ ಕಲಿಕೆ, ಸಾಧನೆ ಬುಡಕಟ್ಟು ಜನಾಂಗದ ಯುವತಿಯರಿಗೆ, ಮಹಿಳೆಯರಿಗೆ ಹೊಸ ಕ್ರಾಂತಿ ಎನ್ನುತ್ತಾರೆ ಸ್ಥಳೀಯ ಪತ್ರಕರ್ತೆ ನತು ಸಿಂಗ್.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp