ಕೋವಿಡ್-19 ಲಸಿಕೆ ತೆಗೆದುಕೊಂಡ 107 ವರ್ಷದ ಅಜ್ಜ: ಭಾರತದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ!

ಭಾರತೀಯ ಸಂವಿಧಾನ ರಚನಾ ಸಮಿತಿಯ ಭಾಗವಾಗಿದ್ದ 107 ವರ್ಷದ ಕೇವಲ್ ಕೃಷ್ಣ ಕೊರೋನಾ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರು

Published: 16th March 2021 01:02 PM  |   Last Updated: 16th March 2021 01:09 PM   |  A+A-


ಲಸಿಕೆ

Posted By : Shilpa D
Source : The New Indian Express

ನವದೆಹಲಿ: ಭಾರತೀಯ ಸಂವಿಧಾನ ರಚನಾ ಸಮಿತಿಯ ಭಾಗವಾಗಿದ್ದ 107 ವರ್ಷದ ಕೇವಲ್ ಕೃಷ್ಣ ಕೊರೋನಾ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರು. 

ಈ ಮೂಲಕ ದೇಶದಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಂಡ ಅತ್ಯಮತ ಹಿರಿಯ ನಾಗರಿಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್ ಸ್ಟಿಟ್ಯೂಟ್ ನ ವೈದ್ಯ ಡಾ.ಅಶೋಕ್ ಸೇಠ್ ಅವರು ಕೃಷ್ಣನ್ ಅವರಿಗೆ ಲಸಿಕೆ ನೀಡಿದರು.

ಲಸಿಕೆ ಪಡೆದ ನಂತರ, ಅವರು ಆರೋಗ್ಯವಾಗಿದ್ದರು. ಅವರಿಗೆ ಯಾವುದೇ ಅಡ್ಡ ಪರಿಣಾಮಗಳಾಗಿಲ್ಲ ಎಂದು ಅವರ ಪುತ್ರ ಹೇಳಿದ್ದಾರೆ. ಎಂದಿನಂತೆ ದೈನಂದಿನ ಪೂಜಾ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರು ಎಂದು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ,  ಪಾರ್ಶ್ವವಾಯು ತಡೆಗಟ್ಟಲು ಮೆದುಳಿನ ಎಡಭಾಗದ ಅಪಧಮನಿಗೆ ಸ್ಟೆಂಟ್ ಅಳವಡಿಕೆ ಮಾಡಲಾಗಿದೆ. ವಿಶ್ವದ ಅತ್ಯಂತ ಹಳೆಯ ರೋಗಿಯಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.

ಕೃಷ್ಣನ್ ಅವರಿಗೆ 5 ವರ್ಷ ವಯಸ್ಸಾಗಿದ್ದಾಗ  1918 ರಲ್ಲಿ ಮಾರಣಾಂತಿಕ ಸ್ಪಾನಿಷ್ ಫ್ಲೂ ಬಂದಿತ್ತು. ಇದು ಜಾಗತಿಕವಾಗಿ ಹರಡಿಕೊಂಡಿತ್ತು. ಕೆವಾಲ್ ಕ್ರಿಶನ್ ಸುರಕ್ಷಿತವಾಗಿ ಲಸಿಕೆ ಪಡೆದಿದ್ದಾರೆ ಮತ್ತು ಸುರಕ್ಷತವಾಗಿ ಉತ್ತಮ ಗುಣಮಟ್ಟದ ಜೀವನ ನಡೆಸುತ್ತಿದ್ದಾರೆ.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp