ವಲಸೆ ಹೋಗದ ಪಕ್ಷಿಗಳ ರಕ್ಷಣೆಗೆ ವಿಶಿಷ್ಟ ವಿಧಾನ ಅಳವಡಿಸಿಕೊಂಡ ಕರ್ನಾಟಕದ ದಂಪತಿ

ಬೇಸಿಗೆಯಲ್ಲಿ ಕರ್ನಾಟಕದಿಂದ ವಲಸೆ ಹೋಗದ ಪಕ್ಷಿಗಳ ರಕ್ಷಣೆಗೆ ಕೊಡಗಿನ ದಂಪತಿಗಳು ವಿನೂತನ ಅಭಿಯಾನವನ್ನು ಆರಂಭಿಸಿದ್ದಾರೆ.

Published: 19th March 2021 02:48 PM  |   Last Updated: 19th March 2021 02:57 PM   |  A+A-


to protect non-migratory birds

ಪಕ್ಷಿಗಳ ರಕ್ಷಣೆಗೆ ವಿಶಿಷ್ಟ ವಿಧಾನ

Posted By : Srinivasamurthy VN
Source : The New Indian Express

ಮಡಿಕೇರಿ: ಬೇಸಿಗೆಯಲ್ಲಿ ಕರ್ನಾಟಕದಿಂದ ವಲಸೆ ಹೋಗದ ಪಕ್ಷಿಗಳ ರಕ್ಷಣೆಗೆ ಕೊಡಗಿನ ದಂಪತಿಗಳು ವಿನೂತನ ಅಭಿಯಾನವನ್ನು ಆರಂಭಿಸಿದ್ದಾರೆ.

ಪ್ರಸ್ತುತ ಬೇಸಿಗೆ ಕಾಲಿಟ್ಟಿದ್ದು ಬಿರು ಬೇಸಿಗೆಯಲ್ಲಿ ಪಕ್ಷಿಗಳು ಆಹಾರ ಮತ್ತು ನೀರಿಗಾಗಿ ಭವಣೆ ಪಡುತ್ತಿವೆ. ಕೆಲ ಜಾತಿಯ ಪಕ್ಷಿಗಳು ಆಹಾರ, ನೀರು ಮತ್ತು ಸಂತಾನೋತ್ಪತ್ತಿಗಾಗಿ ವಿವಿಧ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ಆದರೆ ಮತ್ತೆ ಕೆಲ ಜಾತಿಯ ಪಕ್ಷಿಗಳು ವಲಸೆ ಹೋಗದೇ ಕರ್ನಾಟಕದಲ್ಲೇ ತಮ್ಮ ಜೀವನ ಸಾಗಿಸುತ್ತವೆ. ಇಂತಹ ಪಕ್ಷಿಗಳಿಗಾಗಿಯೇ ಕೊಡಗಿನ ದಂಪತಿಗಳು ವಿಶಿಷ್ಠ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ತಮ್ಮ ಈ ವಿಶಿಷ್ಠ ಅಭಿಯಾನಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲು ಈ ದಂಪತಿಗಳು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿರುವ ಸೆಲ್ಫಿ ಸಂಸ್ಕೃತಿಯನ್ನು ಆಯುಧವಾಗಿ ಬಳಸಿ, ಈ ದಂಪತಿಗಳು ಈ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ಬಟ್ಟಲು ಇಟ್ಟು ಸೆಲ್ಫಿ ತೆಗೆದುಕೊಳ್ಳುವಂತೆ ಮನವಿ ಮಾಡುತ್ತಿವೆ.  

ಗೌತಮ್ ಕಿರಗಂದೂರು ಮತ್ತು ಅವರ ಪತ್ನಿ ಸುಮನಾ ಅವರು ಮಾರ್ಚ್ 10 ರಿಂದ ‘ಹಕ್ಕಿಗೊಂದು ಗುಟುಕು’ (ಪಕ್ಷಿಗಳಿಗೆ ಒಂದು ಹನಿ) ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದು ಮಕ್ಕಳು ಸೇರಿದಂತೆ ರಾಜ್ಯದಾದ್ಯಂತದ ಅನೇಕರನ್ನು ಆಕರ್ಷಿಸಿದ್ದು, ಉತ್ತಮ ಪ್ರತಿಕ್ರಿಯ ಪಡೆಯುತ್ತಿದೆ. ಸಾಮಾಜಿಕ ಕಾರ್ಯಗಳಿಗೆ ಹೆಸರುವಾಸಿಯಾದ ಈ ದಂಪತಿಗಳು ಜಿಲ್ಲೆಯಲ್ಲಿ ‘ನಮ್ಮ ಪ್ರತಿಷ್ಠಾನ’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಮೂಲಕ ವಿವಿಧ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗೌತಮ್ ಅವರು, 'ಪಕ್ಷಿಗಳು ಪರಿಸರ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿದೆ ಮತ್ತು ಅವು ಪರಿಸರದಲ್ಲಿ ಸಮತೋಲನವನ್ನು ಖಚಿತಪಡಿಸುತ್ತವೆ. ಪಕ್ಷಿ ಪ್ರಭೇದಗಳನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಅವಶ್ಯಕತೆಯಿದೆ. ಆದ್ದರಿಂದ, ಬೇಸಿಗೆಯಲ್ಲಿ ಪಕ್ಷಿಗಳನ್ನು ರಕ್ಷಿಸಲು, ನಾವು ಈ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ. ನಮ್ಮ ಈ ಉಪಕ್ರಮದಲ್ಲಿ ಭಾಗವಹಿಸುವವರಿಗೆ ಪಕ್ಷಿಗಳಿಗೆ ಆಹಾರವನ್ನು ನೀಡಲು DIY ವ್ಯವಸ್ಥೆಯನ್ನು ಸ್ಥಾಪಿಸುವಂತೆ ವಿನಂತಿಸಿದ್ದೇವೆ. ಈ ಕುರಿತಂತೆ ಸಲಹೆಗಳನ್ನೂ ನೀಡುತ್ತಿದ್ದೇವೆ. ನಿವಾಸಿಗಳು ಪಕ್ಷಿಗಳಿಗೆ ಸ್ವಲ್ಪ ನೀರು ಮತ್ತು ಧಾನ್ಯಗಳನ್ನು ಇಟ್ಟು... ನಂತರ ಈ ಸೆಟಪ್ ಜೊತೆಗೆ ಸೆಲ್ಫಿ ಕ್ಲಿಕ್ ಮಾಡಿ. ನಾವು ಮೂರು ಅತ್ಯುತ್ತಮ ಚಿತ್ರಗಳನ್ನು ಆರಿಸುತ್ತೇವೆ ಮತ್ತು ವಿಜೇತರನ್ನು ಬಹುಮಾನಗಳೊಂದಿಗೆ ಗೌರವಿಸುತ್ತೇವೆ ಎಂದು ಹೇಳಿದ್ದಾರೆ. 

ದಂಪತಿಗಳ ಈ ವಿಶಿಷ್ಠ ಅಭಿಯಾನ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೇವಲ ಕೊಡಗು ನಿವಾಸಿಗಳಷ್ಟೇ ಅಲ್ಲ, ದಾವಣಗೆರೆ, ಉತ್ತರ ಕನ್ನಡ, ಧಾರವಾಡ, ಬಳ್ಳಾರಿ, ಹಾಸನ, ಮತ್ತು ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ನಿವಾಸಿಗಳಿಂದಲೂ ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಂಪತಿಗಳ ಈ ಅಭಿಯಾನಕ್ಕೆ ಅಂತಾರಾಷ್ಟ್ರೀಯ ಕಿಕ್ ಬಾಕ್ಸರ್ ಗಿರೀಶ್ ಆರ್ ಗೌಡ ಬೆಂಬಲವನ್ನು ಸೂಚಿಸಿದ್ದಾರೆ. ಅಲ್ಲದೆ ಈ ಪ್ರಯತ್ನದಲ್ಲಿ ಹಲವಾರು ಚಾರಣಿಗರು ಸಹ ಭಾಗವಹಿಸುತ್ತಿದ್ದು, ಹಲವಾರು ಸ್ಥಳಗಳಲ್ಲಿ ಫೀಡರ್ಗಳನ್ನು ಸ್ಥಾಪಿಸುತ್ತಿದ್ದಾರೆ ಎಂದು ಗೌಮತ್ ಮಾಹಿತಿ ನೀಡಿದರು. 

ಕಳೆದ ವರ್ಷ, ಈ ದಂಪತಿಗಳು ತಮ್ಮ ವಿವಾಹ ಸಮಾರಂಭದಲ್ಲಿ ದೇಹ ದಾನ ಮಾಡಿ ಸಹಿ ಹಾಕಿ ಗಮನ ಸೆಳೆದಿದ್ದರು. ಕಡಿಮೆ ಶೆಲ್ಫ್-ಲೈಫ್ ಹೊಂದಿರುವ ವಿವಾಹ ಆಮಂತ್ರಣ ಪತ್ರಗಳನ್ನು ವಿತರಿಸುವ ಬದಲು, ಗುರುತಿಸದ ಬರಹಗಾರರ ಕೃತಿಗಳೊಂದಿಗೆ ಕನ್ನಡ ಪುಸ್ತಕಗಳನ್ನು ಮುದ್ರಿಸಿ ಅವುಗಳನ್ನು ವಿವಾಹ ಆಮಂತ್ರಣಗಳಾಗಿ ಹಂಚಿ ಸುದ್ದಿಗೆ ಗ್ರಾಸವಾಗಿದ್ದರು. ಅಂತೆಯೇ 1,000 ಕ್ಕೂ ಹೆಚ್ಚು ವಿವಿಧ ಸಸಿಗಳನ್ನು ವಿವಾಹದ ಅತಿಥಿಗಳಿಗೆ ವಿವಾಹದ ಉಡುಗೊರೆಯಾಗಿ ವಿತರಿಸಿದ್ದರು. 
 

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp