'ಜನತಾ ಕರ್ಫ್ಯೂ'ಗೆ ಒಂದು ವರ್ಷ: ಗರ್ಭಿಣಿ ಪತ್ನಿಯ ಕನಸು ನನಸು ಮಾಡಲು 1,200 ಕಿ.ಮೀ ದೂರ ಸ್ಕೂಟರ್ ನಲ್ಲಿ ಪಯಣಿಸಿದ ಜಾರ್ಖಂಡ್ ವ್ಯಕ್ತಿ!

ಜಾರ್ಖಂಡ್ ನಿಂದ ಮಧ್ಯ ಪ್ರದೇಶದ ಗ್ವಾಲಿಯರ್ ಗೆ 1,200 ಕಿಲೋ ಮೀಟರ್ ನಷ್ಟು ದೂರವನ್ನು ಸ್ಕೂಟರ್ ನಲ್ಲಿ ತನ್ನ ಗರ್ಭಿಣಿ ಪತ್ನಿಯನ್ನು ಕೂರಿಸಿಕೊಂಡು ಬಂದು ಆಕೆ ಶಿಕ್ಷಕಿಯಾಗುವ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡಿದ ವ್ಯಕ್ತಿ ಇದೀಗ ತಮ್ಮ ದಿನನಿತ್ಯದ ಊಟಕ್ಕೆ ಪರದಾಡುತ್ತಿದ್ದಾರೆ.

Published: 22nd March 2021 12:14 PM  |   Last Updated: 22nd March 2021 01:26 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ರಾಂಚಿ: ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಜಾರ್ಖಂಡ್ ನಿಂದ ಮಧ್ಯ ಪ್ರದೇಶದ ಗ್ವಾಲಿಯರ್ ಗೆ 1,200 ಕಿಲೋ ಮೀಟರ್ ನಷ್ಟು ದೂರವನ್ನು ಸ್ಕೂಟರ್ ನಲ್ಲಿ ತನ್ನ ಗರ್ಭಿಣಿ ಪತ್ನಿಯನ್ನು ಕೂರಿಸಿಕೊಂಡು ಬಂದು ಆಕೆ ಶಿಕ್ಷಕಿಯಾಗುವ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡಿದ ಗೊಡ್ಡಾ ನಿವಾಸಿ ಧನಂಜಯ್ ಕುಮಾರ್ ಹೆಂಬ್ರೊಮ್ ಇದೀಗ ತಮ್ಮ ದಿನನಿತ್ಯದ ಊಟಕ್ಕೆ ಪರದಾಡುತ್ತಿದ್ದಾರೆ.

ಜಾರ್ಖಂಡ್ ನ ಗೊಡ್ಡಾದಲ್ಲಿ ರೆಸ್ಟೋರೆಂಟ್ ವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿರುವ 27 ವರ್ಷದ ಧನಂಜಯ್ ತನ್ನ 22 ವರ್ಷದ ಪತ್ನಿ ಸೋನಿ ಹೆಂಬ್ರೊಮ್ ಮತ್ತು ಮೂರು ತಿಂಗಳ ಮಗುವಿನ ಅಗತ್ಯಗಳನ್ನು ಪೂರೈಸಲು ಪರದಾಡುತ್ತಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ತನ್ನ ಆದಾಯ ಹೆಚ್ಚಿಸಲು ಬೇರೆ ಆಯ್ಕೆಗಳು ಕಾಣಿಸದಿದ್ದಾಗ ಧನಂಜಯ್ ಕಳೆದ ಮಾರ್ಚ್ 14ರಂದು ಅಹಮದಾಬಾದ್ ಗೆ ಹೋಗಿ ಖಾಸಗಿ ನೂಲು ಕಾರ್ಖಾನೆಯಲ್ಲಿ ಕೆಲಸ ಮಾಡಲು ನಿರ್ಧರಿಸಿದರು. 

ಆರಂಭದಲ್ಲಿ, ನಾನು ಎಂದಿಗೂ ನನ್ನ ಕುಟುಂಬವನ್ನು ಬಿಟ್ಟು ಹೋಗುವುದಿಲ್ಲ ಎಂದು ಭಾವಿಸಿ ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ಅಡುಗೆ ಕೆಲಸವನ್ನು ತೆಗೆದುಕೊಂಡೆ. ಆದರೆ ನಂತರ, ನಾನು ಇಲ್ಲಿ ಬರುತ್ತಿರುವ ಸಂಬಳದೊಂದಿಗೆ ಕುಟುಂಬವನ್ನು ನಿರ್ವಹಿಸುವುದು ತುಂಬಾ ಕಷ್ಟ ಎಂದು ಅರಿತುಕೊಂಡೆ. ಜಾರ್ಖಂಡ್‌ನಲ್ಲಿನ ಶುಲ್ಕಕ್ಕಿಂತ ಕಡಿಮೆ ಇರುವುದರಿಂದ ನನ್ನ ಪತ್ನಿ ಸೋನಿ, 2019 ರಲ್ಲಿ ಎಂಪಿ ಸೆಕೆಂಡರಿ ಎಜುಕೇಶನ್ ಬೋರ್ಡ್‌ಗೆ ಸೇರಿಕೊಂಡರು. ಧನಂಜಯ್, ಗುಜರಾತ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಅಡುಗೆಯವನಾಗಿ ಕೆಲಸ ಮಾಡಿ ಉಳಿತಾಯದಲ್ಲಿ 30 ಸಾವಿರ ರೂಪಾಯಿಯನ್ನು ಮನೆಗೆ ಪತ್ನಿಗೆ ಕಳುಹಿಸಿಕೊಟ್ಟಿದ್ದರು.

ಸೆಪ್ಟೆಂಬರ್ ನಲ್ಲಿ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಿದಾಗ, ಸೋನಿ ತನ್ನ ಬಳಿಯಿದ್ದ ಚಿನ್ನವನ್ನು ಅಡವಿಟ್ಟರು. ಆದರೆ ರೈಲು ಅಥವಾ ಬಸ್ ಟಿಕೆಟ್‌ಗೆ ಇದು ಸಾಕಾಗುವುದಿಲ್ಲ ಎಂದು ತಿಳಿದ ದಂಪತಿ, ಕೊನೆಗೆ ತಮ್ಮ ಸ್ಕೂಟರ್ ನಲ್ಲಿ ಪ್ರಯಾಣ ಬೆಳೆಸಿದರು.

ದುರದೃಷ್ಟವಶಾತ್, ಸೋನಿಗೆ ಇಂಗ್ಲಿಷ್ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಸ್ಥಳೀಯ ಶಾಸಕ ದೀಪಿಕಾ ಪಾಂಡೆಯವರು ದಂಪತಿಯ ಪ್ರಯಾಣ ವೆಚ್ಚವನ್ನು ಭರಿಸಿದ ನಂತರ ದಂಪತಿ ಇತ್ತೀಚೆಗೆ ಮರು ಪರೀಕ್ಷೆಗೆ ಗ್ವಾಲಿಯರ್‌ಗೆ ತೆರಳಿದ್ದರು. ಈ ಬಾರಿ ನನ್ನ ಪತ್ನಿಗೆ ಡಿಪ್ಲೊಮಾ ಪರೀಕ್ಷೆ ತೇರ್ಗಡೆ ಮಾಡುವ ಭರವಸೆಯಿದೆ ಎನ್ನುತ್ತಾರೆ ಧನಂಜಯ್.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp