ಕನ್ಯಾಕುಮಾರಿ ಟು ಕಾಶ್ಮೀರ: ಕೋವಿಡ್ ವಾರಿಯರ್ ಗಳ ಗೌರವಾರ್ಥ ಕನ್ನಡಿಗನಿಂದ ಪಾದಯಾತ್ರೆ

ಕೋವಿಡ್ ವಾರಿಯರ್ ಗಳ ತ್ಯಾಗಮತ್ತು ಪ್ರಯತ್ನಗಳನ್ನು ಪ್ರಶಸ್ತಿ ನೀಡುವುದು, ಕಲಾಕೃತಿ ರಚನೆ ಸೇರಿ ಅನೇಕ ವಿಧದಲ್ಲಿ ಸರ್ಕಾರ  ಹಾಗೂ ಸರ್ಕಾರೇತರ ಸಂಸ್ಥೆಗಳು ಗುರುತಿಸಿವೆ. ಆದರೆ ಮೈಸೂರಿನ ಈ 33 ವರ್ಷದ ವ್ಯಕ್ತಿ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಕೋವಿಡ್ ವಾರಿಯರ್ ಗಳಿಗೆ ಅದ್ಭುತ ಗೌರವ ಸಲ್ಲಿಸಲು ನಿರ್ಧರಿಸಿದ್ದು 'ವಾಕ್ ಫಾರ್ ಹ್ಯುಮಾನಿಟಿ' ಎಂಬ ನೂತನ ಪ್ರಯತ್

Published: 23rd March 2021 10:43 AM  |   Last Updated: 23rd March 2021 10:43 AM   |  A+A-


ಭರತ್ ಪಿಎನ್

Posted By : Raghavendra Adiga
Source : The New Indian Express

ಮೈಸೂರು: ಕೋವಿಡ್ ವಾರಿಯರ್ ಗಳ ತ್ಯಾಗಮತ್ತು ಪ್ರಯತ್ನಗಳನ್ನು ಪ್ರಶಸ್ತಿ ನೀಡುವುದು, ಕಲಾಕೃತಿ ರಚನೆ ಸೇರಿ ಅನೇಕ ವಿಧದಲ್ಲಿ ಸರ್ಕಾರ  ಹಾಗೂ ಸರ್ಕಾರೇತರ ಸಂಸ್ಥೆಗಳು ಗುರುತಿಸಿವೆ. ಆದರೆ ಮೈಸೂರಿನ ಈ 33 ವರ್ಷದ ವ್ಯಕ್ತಿ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಕೋವಿಡ್ ವಾರಿಯರ್ ಗಳಿಗೆ ಅದ್ಭುತ ಗೌರವ ಸಲ್ಲಿಸಲು ನಿರ್ಧರಿಸಿದ್ದು 'ವಾಕ್ ಫಾರ್ ಹ್ಯುಮಾನಿಟಿ' ಎಂಬ ನೂತನ ಪ್ರಯತ್ನ ಪ್ರಾರಂಬಿಸಿದ್ದಾರೆ.

ಮೈಸೂರಿನವರಾದ ಭರತ್ ಪಿ ಎನ್, ಕೋವಿಡ್ ಮುಂಚೂಣಿ ವಾರಿಯರ್ ಗಳ ಶ್ರಮ ಮತ್ತು ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸಲು, 4,000 ಕಿ.ಮೀ. ಕಾಲ್ನಡಿಗೆ ಪ್ರಾರಂಭಿಸಿದ್ದಾರೆ. ಭರತ್ ಅವರು ಡಿಸೆಂಬರ್ 11, 2020 ರಂದು ಕನ್ಯಾಕುಮಾರಿಯಿಂದ ಹೊರಟು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿನ ದಾಲ್ ಸರೋವರವನ್ನು ತಲುಪಲು 4,000 ಕಿ.ಮೀ. ಕಾಲ್ನಡಿಗೆ ಗೆ ಮುಂದಾಗಿದ್ದಾರೆ..ತನ್ನ 99 ದಿನಗಳ ಪ್ರಯಾಣದಲ್ಲಿ ಭರತ್ ದೇಶದ ಹನ್ನೊಂದು ರಾಜ್ಯಗಳನ್ನು ಒಳಗೊಂಡ ಹೆದ್ದಾರಿಗಳಲ್ಲಿ ಪ್ರತಿದಿನ 45-50 ಕಿ.ಮೀ ನಡೆಯ;ಲಿದ್ದಾರೆ.

ತನ್ನ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಭರತ್ ಮೈಸೂರಿನಲ್ಲಿ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು.ಆದರೆ ಕೋವಿಡ್ ಮತ್ತು ನಂತರದ ಲಾಕ್‌ಡೌನ್ ಅವರನ್ನು ಮನೆಗೆ ಹಿಂತಿರುಗುವಂತೆ ಮಾಡಿತ್ತು. "ಈ ಸಮಯದಲ್ಲಿ, ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ಎಷ್ಟು ಮುಂಚೂಣಿ ಕಾರ್ಯಕರ್ತರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆಂದು ನಾನು ಅರಿತುಕೊಂಡೆ. ಸಮಾಜದಿಂಡ ನಾವು ಪಡೆದದ್ದನ್ನು ಪುನಃ ಅ ಸಮಾಜಕೆ ಮರಳಿಸುವುದಕ್ಕೆ ನೀಡುವ ಮಹತ್ವವನ್ನು ನಾನು ಅರಿತುಕೊಂಡೆ ಮತ್ತು ಎಲ್ಲಾ ಕೋವಿಡ್ ವಾರಿಯರ್ ಗಳ ಗೌರವಾರ್ಥವಾಗಿ ಈ ಕಾರ್ಯಕ್ರಮ ಕೈಗೊಂಡಿದ್ದೇನೆ, ಕೇವಲ ಮುಂಚೂಣಿ ಕಾರ್ಯಕರ್ತರು ಮಾತ್ರವಲ್ಲ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ ಪ್ರತಿಯೊಬ್ಬರಿಗೂ ನನ್ನ ಗೌರವ ಸಲ್ಲಿಸಬೇಕಿದೆ. . ಆದ್ದರಿಂದ, ನಾನು ಇದನ್ನು ವಾಕ್ ಫಾರ್ ಹ್ಯುಮಾನಿಟಿ ಎಂದು ಕರೆಯುತ್ತೇನೆ." ಭರತ್ ಹೇಳಿದ್ದಾರೆ.

ದಾರಿಯುದ್ದಕ್ಕೂ, ಭರತ್ ಪರಿಸರ ಸಂರಕ್ಷಣೆ,ಗಿಡಗಳ ಪ್ರಾಮುಖ್ಯತೆ ಮತ್ತು ಫಿಟ್‌ನೆಸ್ ಬಗ್ಗೆ ಜಾಗೃತಿ ಮೂಡಿಸಿದರು. "ನಾನು ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಮರವನ್ನು ಹುಡುಕಬೇಕಾಗಿತ್ತು. ಆದ್ದರಿಂದ, ನನ್ನ ಪ್ರಯಾಣದ ಸಮಯದಲ್ಲಿ ಹೊಸ ತಂಡ ಮತ್ತು ಜನರನ್ನು ಭೇಟಿ ಮಾಡಲು ನನಗೆ ಅವಕಾಶ ಸಿಕ್ಕಾಗಲೆಲ್ಲಾ, ನಾನು ಗಿಡಗಳ ಬಗ್ಗೆ ಜಾಗೃತಿ ಮೂಡಿಸಿದೆ, ಮತ್ತು 150 ಕ್ಕೂ ಹೆಚ್ಚು ಸಸಿಗಳನ್ನು ವಿವಿಧ ಸ್ಥಳಗಳಲ್ಲಿ ನೆಟ್ಟಿದ್ದೇನೆ."

ಭರತ್ ಒಬ್ಬಂಟಿಯಾಗಿ ಪ್ರಯಾಣ ಕೈಗೊಂಡಿದ್ದರೂ ಸಹ ಹಲವಾರು ಸ್ನೇಹಿತರು ಮತ್ತು ಹಿತೈಷಿಗಳು ತಮ್ಮ ಬೆಂಬಲವನ್ನು ಅವರಿಗೆ ನೀಡಿದ್ದಾರೆ./ಅದು ಅವರಲ್ಲಿ ವಿಶ್ವಾಸವನ್ನು ಮೂಡಿಸಿದೆ ಎಂದು ಭರತ್ ಹೇಳಿದ್ದಾರೆ. 

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp