ಇಂದು ಜಾಗತಿಕ ಅರ್ಥ್ ಹವರ್ ಆಚರಣೆ: ಏನಿದರ ವಿಶೇಷತೆ? ಇಲ್ಲಿದೆ ವಿವರ...

ಇಂದು (ಮಾರ್ಚ್ 27 ರ ಶನಿವಾರ) ವಿಶ್ವಾದ್ಯಂತ ಅರ್ಥ್ ಹವರ್ ದಿನವನ್ನು ಆಚರಿಸಲಾಗುತ್ತದೆ. 

Published: 27th March 2021 04:30 PM  |   Last Updated: 27th March 2021 04:42 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : Online Desk

ಇಂದು (ಮಾರ್ಚ್ 27 ಶನಿವಾರ) ವಿಶ್ವಾದ್ಯಂತ ಅರ್ಥ್ ಹವರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನ ರಾತ್ರಿ ರಾತ್ರಿ 8: 30ಕ್ಕೆ ಈ ಆಚರಣೆ ಇರಲಿದ್ದು ಈ ಪ್ರಯುಕ್ತ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಒಂದು ಗಂಟೆಯ ಕಾಲ ಮನೆಯ ವಿದ್ಯುತ್ ದೀಪಗಳನ್ನು ಆರಿಸಲು ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ. 

ದಿನೇ ದಿನೇ ಏರುತ್ತಿರುವ ಜಾಗತಿಕ ತಾಪಮಾನದ ಸಂಬಂಧ ಜನರಲ್ಲಿ ಜಾಗೃತಿ ಉಂಟುಮಾಡುವುದಕ್ಕಾಗಿ ಅರ್ಥ್ ಹವರ್ ಆರಚಣೆಗೆ ಬಂದಿದೆ.

ಈ ಬಾರಿ ಕೋವಿಡ್ -19 ಸುರಕ್ಷತಾ ನಿಯಮಗಳು ವಿಶ್ವದ ಹಲವಾರು ಭಾಗಗಳಲ್ಲಿ ಜಾರಿಯಲ್ಲಿರುವುದರಿಂದ , ಅನೇಕ ದೇಶಗಳು ಆನ್‌ಲೈನ್ ಅರ್ಥ್ ಹವರ್ ಅನ್ನು ಆನ್‌ಲೈನ್‌ನಲ್ಲಿ ಆಚರಿಸಲಿವೆ,

ಅರ್ಥ್ ಅವರ್ ಇತಿಹಾಸ:

2007 ರಲ್ಲಿ ಸಿಡ್ನಿಯಲ್ಲಿ ಡಬ್ಲ್ಯುಡಬ್ಲ್ಯುಎಫ್ (ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್) ಮತ್ತು ಪಾರ್ಟ್ನರ್ ಗಳಿಂದ ಈ ಅರ್ಥ್ ಹವರ್ ಪ್ರಾರಂಭವಾಗಿತ್ತು. ಈ ಸಂಸ್ಥೆ ಸಾರ್ವಜನಿಕರಲ್ಲಿ ಸ್ವಯಂಪ್ರೇರಿತವಾಗಿ ಒಂದು ಗಂಟೆ ಕಾಲ ಮನೆಯ ವಿದ್ಯುತ್ ದೀಪ ಆರಿಸುವ ಬಗ್ಗೆ ಹೊಸ ಕಲ್ಪನೆ ಮೂಡಿಸಿತ್ತು. ಇದೀಗ ಅರ್ಥ್ ಹವರ್ ವಿಶ್ವದ ಅತಿದೊಡ್ಡ ತಳಮಟ್ಟದ ಪರಿಸರ ಚಳುವಳಿಗಳಲ್ಲಿ ಒಂದಾಗಿದೆ.

ವಾರ್ಷಿಕವಾಗಿ ಮಾರ್ಚ್‌ನ ಕೊನೆಯ ಶನಿವಾರದಂದು ನಡೆಯುವ ಅರ್ಥ್ ಹವರ್ ನಲ್ಲಿ 180 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳು ಭಾಗವಹಿಸುತ್ತವೆ. ಲಕ್ಷಾಂತರ ಜನರು ನಮ್ಮ ಜಗತ್ತಿಗೆ ಗೌರವವನ್ನು ವ್ಯಕ್ತಪಡಿಸಲು ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸುತ್ತಾರೆ. 2007 ರಿಂದ ಪ್ರತಿವರ್ಷ, ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು ಲಕ್ಷಾಂತರ ಜನರು ಜಾಗತಿಕ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ.

ಅರ್ಥ್ ಹವರ್ ಎಂದರೇನು:

ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಅಥವಾ ಡಬ್ಲ್ಯುಡಬ್ಲ್ಯುಎಫ್ ಮಾರ್ಚ್ 2007 ರಲ್ಲಿ ಪ್ರಾರಂಭಿಸಿದ ಜಾಗತಿಕ ಚಳುವಳಿಯೇ ಅರ್ಥ್ ಹವರ್ ಇದೊಂದು ವಾರ್ಷಿಕ ಪರಿಸರ ಸಂರಕ್ಷಣಾ ಘಟನೆಗಳಲ್ಲಿ ಪ್ರಮುಖವಾಗಿದೆ.

ಅರ್ಥ್ ಹವರ್ ಸಮಯದಲ್ಲಿ, ಜಾಗತಿಕವಾಗಿ ಸುಮಾರು 2.2 ಮಿಲಿಯನ್ ಜನರು ತಮ್ಮ ಮನೆಗಳ ವಿದ್ಯುತ್ ದೀಪಗಳನ್ನು ಒಗ್ಗಟ್ಟಿನ ಸಂಕೇತವಾಗಿ ಆಫ್ ಮಾಡಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆಯ ಬಗ್ಗೆ ಕ್ರಮ ತೆಗೆದುಕೊಳ್ಳುವ ಅಗತ್ಯವನ್ನು ಇದು ತೋರ್ಪಡಿಸುತ್ತದೆ. ಅಲ್ಲದೆ ಸಾರ್ವಜನಿಕ ವೇದಿಕೆಯಲ್ಲಿ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp