'ದಿ ಸೆಲೆಕ್ಟೆಡ್ ಬುಕ್': ಬೆಂಗಳೂರಿನ ಹಳೆಯ ಪುಸ್ತಕದ ಅಂಗಡಿಯ ಕಿರುಚಿತ್ರ!

ಒಂದು ಕಾಲದಲ್ಲಿ ಬೆಂಗಳೂರು ಪಿಂಚಣಿದಾರರ ಸ್ವರ್ಗ ಎನಿಸಿಕೊಂಡಿತ್ತು.ಆದರೆ, ಈಗ ಅದೆಲ್ಲ ಗತವೈಭವದಂತೆ ಭಾಸವಾಗುತ್ತಿದೆ. ಆದರೂ ಇಂದಿಗೂ ನಗರದ ಹಿಂದಿನ ಕಥೆ ಹೇಳುವ ಕೆಲವೊಂದು ಸ್ಥಳಗಳು ಮಹಾನಗರದಲ್ಲಿವೆ. ಅಂತಹ ಸ್ಥಳಗಳಲ್ಲಿ ಬ್ರಿಗೇಡ್ ರಸ್ತೆಯಲ್ಲಿರುವ ಸೆಲೆಕ್ಟ್ ಬುಕ್ ಸ್ಟೋರ್ ಕೂಡಾ ಒಂದಾಗಿದೆ. 

Published: 29th March 2021 09:27 AM  |   Last Updated: 29th March 2021 12:51 PM   |  A+A-


KKS_Murthy_in_a_still_from_the_film1

ಕೆಕೆಎಸ್ ಮೂರ್ತಿ

Posted By : Nagaraja AB
Source : The New Indian Express

ಬೆಂಗಳೂರು: ಒಂದು ಕಾಲದಲ್ಲಿ ಬೆಂಗಳೂರು ಪಿಂಚಣಿದಾರರ ಸ್ವರ್ಗ ಎನಿಸಿಕೊಂಡಿತ್ತು.ಆದರೆ, ಈಗ ಅದೆಲ್ಲ ಗತವೈಭವದಂತೆ ಭಾಸವಾಗುತ್ತಿದೆ. ಆದರೂ ಇಂದಿಗೂ ನಗರದ ಹಿಂದಿನ ಕಥೆ ಹೇಳುವ ಕೆಲವೊಂದು ಸ್ಥಳಗಳು ಮಹಾನಗರದಲ್ಲಿವೆ. ಅಂತಹ ಸ್ಥಳಗಳಲ್ಲಿ ಬ್ರಿಗೇಡ್ ರಸ್ತೆಯಲ್ಲಿರುವ ಸೆಲೆಕ್ಟ್ ಬುಕ್ ಸ್ಟೋರ್ ಕೂಡಾ ಒಂದಾಗಿದೆ. 

ಇದು ನಗರದ ಹಳೆಯ ಬುಕ್ ಸ್ಟೋರ್ ಆಗಿದ್ದು, ಇದರ ಕುರಿತು ಆದಿತ್ಯ ಸದಾಶಿವ ಕಿರುಚಿತ್ರವೊಂದನ್ನು ನಿರ್ಮಿಸಿದ್ದು, ಅದು ಮಾರ್ಚ್ 28 ರಂದು ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ವಕೀಲ ಕೆಬಿಕೆ ರಾವ್ ಅವರಿಂದ 1946ರಲ್ಲಿ ಈ ಬುಕ್ ಸ್ಟೋರ್  ಸ್ಥಾಪಿಸಲ್ಪಟ್ಟಿದೆ. ಈ ಕಿರುಚಿತ್ರದಲ್ಲಿ ಕೆಬಿಕೆ ರಾವ್ ಅವರ ಪುತ್ರ ಕೆಕೆಎಸ್ ಮೂರ್ತಿ, ಬುಕ್ ಸ್ಟೋರ್ ಬೆಳೆದ ಹಾದಿ ಕುರಿತು ಮಾತನಾಡಿದ್ದಾರೆ. 

ಈ ಸಾಕ್ಷ್ಯಚಿತ್ರ ತಯಾರಿಸಲು ಮೂರ್ತಿ ಅವರೊಂದಿಗೆ ಕೇವಲ ಒಂದೆರಡು ಅನೌಪಚಾರಿಕ ಸಭೆಗಳನ್ನು  ಮಾಡಿದ್ದಾಗಿ ಸದಾಶಿವ ಅವರು ಬಹಿರಂಗಪಡಿಸಿದ್ದಾರೆ. ಸದಾಶಿವ ಅವರ ಪ್ರೊಡಕ್ಷನ್ ಹೌಸ್, ವಿನಯಸ್ ಸ್ಟುಡಿಯೋಸ್ ನಿರ್ಮಿಸಿದ ಈ ಕಿರುಚಿತ್ರ ನಗರದ ಪರಂಪರೆ ಮತ್ತು ಸಂಸ್ಕೃತಿಯ ಒಂದು ತುಣುಕೊಂದನ್ನು ಸೆರೆ ಹಿಡಿಯುವ ಗುರಿಯನ್ನು ಹೊಂದಿದೆ.

ಪುಸ್ತಕದ ಅಂಗಡಿಯು ಸರಿಯಾಗಿ ಸಂಘಟಿತವಾಗಿಲ್ಲ. ನೀವು ಇಲ್ಲಿ ಕೋಬ್‌ವೆಬ್‌ಗಳನ್ನು ಸಹ ಕಾಣಬಹುದು ಆದರೂ, ಇಲ್ಲಿ ಅನೇಕ ಗ್ರಂಥಗಳು ಸಿಗುತ್ತವೆ. 92 ವರ್ಷದ ಮೂರ್ತಿ ಪ್ರಸ್ತುತ ಈ ಅಂಗಡಿಯನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ ಎಂದು ಸದಾಶಿವ ಹೇಳುತ್ತಾರೆ. 

ಒಂದು ಉದಾಹರಣೆಯನ್ನು ನೆನಪಿಸಿಕೊಳ್ಳುತ್ತಾ, ನಾಟಕಕಾರ ಆಂಟನ್ ಚೆಕೊವ್ ಅಂಗಡಿಯಿಂದ ನಾಲ್ಕು ಸಂಪುಟಗಳ ನಾಟಕವನ್ನು ಹೇಗೆ ಆರಿಸಿಕೊಂಡರು ಎಂಬುದನ್ನು ಹಂಚಿಕೊಂಡ ಮೂರ್ತಿ, ಈ ಪುಸ್ತಕಗಳಿಗೆ ಹಣ ಪಡೆದಿರಲಿಲ್ಲವಂತೆ ಈ ರೀತಿಯ ಔದಾರ್ಯದ ಮನುಷ್ಯರು ಇಂದಿನ ದಿನಗಳಲ್ಲಿ ಹುಡುಕುವುದು ಬಹಳ ಕಷ್ಟ.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp