ಕೆಎಎಸ್ ಕನಸನ್ನು ನನಸಾಗಿಸಿಕೊಳ್ಳಲು ಜಮೀನಿನಲ್ಲಿ ಕೆಲಸ ಮಾಡಿ ಹಣ ಹೊಂದಿಸುತ್ತಿರುವ ಬುಡಕಟ್ಟು ಯುವತಿ!

ಕಾಡಿನ ಅಂಚಿನಿಂದ ಬಂದಿದ್ದರೂ ಮತ್ತು ಬುಡಕಟ್ಟು ಸಂಪ್ರದಾಯದ ಮಂದಿ ವಿರೋಧಿಸಿದ್ದರೂ 22 ವರ್ಷದ ಬುಡಕಟ್ಟು ಯುವತಿಯೊಬ್ಬರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಯಾಗುವ ಕನಸಿನ ಹಿಂದೆ ಬಿದ್ದಿದ್ದಾರೆ.

Published: 30th March 2021 11:30 AM  |   Last Updated: 30th March 2021 12:52 PM   |  A+A-


ಬುಡಕಟ್ಟು ಯುವತಿ ಅನುರಾಧಾ

Posted By : Raghavendra Adiga
Source : The New Indian Express

ಮೈಸೂರು: ಕಾಡಿನ ಅಂಚಿನಿಂದ ಬಂದಿದ್ದರೂ ಮತ್ತು ಬುಡಕಟ್ಟು ಸಂಪ್ರದಾಯದ ಮಂದಿ ವಿರೋಧಿಸಿದ್ದರೂ 22 ವರ್ಷದ ಬುಡಕಟ್ಟು ಯುವತಿಯೊಬ್ಬರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಯಾಗುವ ಕನಸಿನ ಹಿಂದೆ ಬಿದ್ದಿದ್ದಾರೆ.

ಅನುರಾಧಾ, ತನ್ನ ಕೋಚಿಂಗ್ ತರಗತಿಗಳಿಗೆ ಸಾಕಷ್ಟು ಹಣವಿಲ್ಲದ ಕಾರಣ ಮುಂದಿನ ಹಾದಿ ಕಠಿಣವಾಗಿದ್ದು ಈ ಪರಿಣಾಮ ಅವರೀಗ ತನ್ನ ತರಬೇತಿಗಾಗಿ ಸಾಕಷ್ಟು ಹಣ ಒಟ್ಟುಗೂಡಿಸಲು ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನ ಡಿಬಿ ಕುಪ್ಪೆ ಬಳಿಯ ತಿಮ್ಮನಹೋಸಹಳ್ಳಿ ಕುಗ್ರಾಮದಿಂದ ಬಂದ ಅನುರಾಧಾ ಉನ್ನತ ಶಿಕ್ಷಣವನ್ನು ಪಡೆದ ಅಪರೂಪದ ಬುಡಕಟ್ಟು ಮಹಿಳೆಯರಲ್ಲಿ ಒಬ್ಬರು. ಇವರು ತಾಯಿಯೊಂದಿಗೆ ಬೆಳೆದಿದ್ದು ಚಿಕ್ಕ ವಯಸ್ಸಿನಲ್ಲೇ ವಿಧವೆಯಾಗಿಯೂ ಮಗಳು ಉತ್ತಮ ಶಿಕ್ಷಣ ಪಡೆಯಲು ಶ್ರಮಿಸಿದ್ದಾರೆ.

ತನ್ನ ಬುಡಕಟ್ಟು ಸಮುದಾಯದ ಇತರೆ ಬಾಲಕಿಯರು ಶಿಕ್ಷಣ ಪಡೆಯಲು ಸಾಧ್ಯವಾಗದೆ ಕಷ್ಟದ ಜೀವನ ನಡೆಸುವುದನ್ನು ಕಂಡಾಗ ತನಗೆ ಕೆಎಎಸ್ ಮಾಡುವ ಕನಸು ಚಿಗುರಿತು ಎಂದು ಅನುರಾಧಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಾಗಿರುವ ಯುವಕರಿಗಾಗಿ ಸಮಾಜ ಕಲ್ಯಾಣ ಇಲಾಖೆಯು ಪರೀಕ್ಷಾ ಪೂರ್ವ ತರಬೇತಿ ಕೇಂದ್ರ (ಪಿಇಟಿಸಿ) ಕಾರ್ಯಕ್ರಮವನ್ನು ಹೊಂದಿದೆ ,ಐಎಎಸ್ ಮತ್ತು ಕೆಎಎಸ್ ನಂತಹ, ಪರೀಕ್ಷೆಗೆ ಅಲ್ಲಿ ಸಿದ್ದತೆ ನಡೆಸಬಹುದು. . "ಈ ವರ್ಷ, ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿತ್ತು ಮತ್ತು ಕೊನೆಯ ದಿನಾಂಕ ಡಿಸೆಂಬರ್‌ನಲ್ಲಿತ್ತು. ನಾನು ಅದರ ಬಗ್ಗೆ ತಡವಾಗಿ ತಿಳಿದುಕೊಂಡೆ ಮತ್ತು ಮೇಲಾಗಿ, ಸಾಂಕ್ರಾಮಿಕ ರೋಗದಿಂದಾಗಿ ನಮ್ಮ ಗುರಿ ಪೂರೈಸಲು ನಾವು ಹೆಣಗಾಡುವಂತಾಯಿತು." ಅವರು ಹೇಳಿದ್ದಾರೆ.

ಅನುರಾಧಾ ತಮ್ಮ ತರಬೇತಿಗಾಗಿ ಅನೇಕ ಖಾಸಗಿ ತರಬೇತಿ ಕೇಂದ್ರಗಳನ್ನು ಸಂಪರ್ಕಿಸಿದರು, ಆದರೆ ಶುಲ್ಕವನ್ನು ಭರಿಸಲಾಗಲಿಲ್ಲ. “ಅವರು ವಾಸ್ತವ್ಯದ ಹೊರತಾಗಿ ಕೋಚಿಂಗ್‌ಗಾಗಿ 60,000 ರೂ. ಕೇಳುತ್ತಾರೆ. ನಾನು ಜಮೀನಿನಲ್ಲಿ ಕೆಲಸ ಮಾಡುವ ವೇತನದಿಂದ ಹಣವನ್ನು ಉಳಿಸುವುದು ಕಷ್ಟ, ಆದರೆ ನನಗೆ ಬೇರೆ ದಾರಿಯಿಲ್ಲ. ನಾನು ಉತ್ತಮ ಸಂಬಳ ಪಡೆಯುವ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದೇನೆ, ಆದರೆ ಇಲ್ಲಿಯವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ."

ಅನುರಾಧದಂತಹ ಬುಡಕಟ್ಟು ಯುವತಿ ಸ್ನಾತಕೋತ್ತರ ಪದವಿಯನ್ನು ಪಡೆಯುವುದು ದೊಡ್ಡ ಸಾಧನೆ ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಕಲಾ ಒಕ್ಕೂಟದ ಶರಣೇಂದ್ರ ಹೇಳಿದ್ದಾರೆ.. “ಯಾವುದೇ ಕಷ್ಟದಲ್ಲಿಯೂ ತನ್ನ ಕನಸನ್ನು ಮುಂದುವರಿಸಲು ಆಕೆಗೆ ಸಹಾಯ ನಿರಾಕರಿಸಬಾರದು. ನಮ್ಮ ಸಮುದಾಯದಿಂದ ಅಂತಯಾ ಯುವತಿಯರು ಆಡಳಿತಾಧಿಕಾರಿಗಳಗಿ ಯಶಸ್ವಿಯಾದರೆ  ಅದು ಇತರ ಹೆಣ್ಣು ಮಕ್ಕಳಿಗೆ ಸ್ಪೂರ್ತಿದಾಯಕವಾಗಲಿದೆ.ಆಕೆಯ ಕೋಚಿಂಗ್‌ಗೆ ಧನಸಹಾಯ ನೀಡಲು ಅಧಿಕಾರಿಗಳು ಮುಂದೆ ಬರಬೇಕು, ” ಅವರು ಹೇಳಿದ್ದಾರೆ.

ಬುಡಕಟ್ಟು ಕಲ್ಯಾಣ ಇಲಾಖೆಯ ಸಮಗ್ರ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮ ಸಂಯೋಜಕರಾದ ಪ್ರಕಾಶ್ ಅವರನ್ನು ಟಿಎನ್‌ಐಇ ಸಂಪರ್ಕಿಸಿದಾಗ, ಅವರು ಬಯಸಿದ ನಗರದಲ್ಲಿ ಆಕೆಯ ವಸತಿ ಸೌಕರ್ಯವನ್ನು ಇಲಾಖೆ ನೋಡಿಕೊಳ್ಳಲಿದೆ ಎಂದು ಹೇಳಿದರು, ಆದರೆ ಇದಾಗಲೇ ಅಂತಿಮ ಗಡುವು ಮುಗಿದಿರುವ ಕಾರಣ ಪಿಇಟಿಸಿ ಕಾರ್ಯಕ್ರಮಕ್ಕೆ ಪ್ರವೇಶಿಸಲು ಅವರಿಗೆ ಸಾಧ್ಯವಾಗದಿರಬಹುದು ಎಂದು ಅವರು ಹೇಳಿದ್ದಾರೆ. .

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp