ಪಶ್ಚಿಮ ಬಂಗಾಳ ಚುನಾವಣೆ: ದಿನಗೂಲಿ ನೌಕರನ ಪತ್ನಿ, ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ ಈಗ ಸಾಲ್ಟೋರಾ ಕ್ಷೇತ್ರದ ಶಾಸಕಿ!

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋತರೂ ಕೂಡ ಟಿಎಂಸಿ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಮಧ್ಯೆ ಓರ್ವ ಮಹಿಳಾ ಅಭ್ಯರ್ಥಿ ಅಲ್ಲಿ ಜಯ ಗಳಿಸಿದ್ದು ವಿಶೇಷ ಸುದ್ದಿಯಾಗಿದೆ. ಅದು ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ, ಇವರ ಗೆಲುವು ಐತಿಹಾಸಿಕ ಎಂದು ರಾಜ್ಯದ ಜನ ಬಣ್ಣಿಸುತ್ತಿದ್ದಾರೆ.
ಚಂದನಾ ಬೌರಿ
ಚಂದನಾ ಬೌರಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋತರೂ ಕೂಡ ಟಿಎಂಸಿ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಮಧ್ಯೆ ಓರ್ವ ಮಹಿಳಾ ಅಭ್ಯರ್ಥಿ ಅಲ್ಲಿ ಜಯ ಗಳಿಸಿದ್ದು ವಿಶೇಷ ಸುದ್ದಿಯಾಗಿದೆ. ಅದು ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ, ಇವರ ಗೆಲುವು ಐತಿಹಾಸಿಕ ಎಂದು ರಾಜ್ಯದ ಜನ ಬಣ್ಣಿಸುತ್ತಿದ್ದಾರೆ.

ಏನು ಕಾರಣ: ಚಂದನಾ ರಾಜಕೀಯ ಕುಟುಂಬದಿಂದ ಶ್ರೀಮಂತ ಮನೆತನದವರೇನಲ್ಲ, ಕೂಲಿ ಕಾರ್ಮಿಕನ ಪತ್ನಿ. 30 ವರ್ಷದ ಚಂದನಾ ಈ ಬಾರಿ ಸಾಲ್ಟೋರಾ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಟಿಎಂಸಿ ನಾಯಕ ಸಂತೋಷ್ ಕುಮಾರ್ ಮೊಂಡಲ್ ವಿರುದ್ಧ ಸ್ಪರ್ಧಿಸಿ 4 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಚಂದನಾ ಜಯ ಗಳಿಸುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಅವರಿಗೆ ಶುಭಾಶಯ, ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದ್ದು ಹಲವು ರೀತಿಯಲ್ಲಿ ಅವರ ಗೆಲುವನ್ನು ಬಣ್ಣಿಸುತ್ತಿದ್ದಾರೆ.

ಅಫಿಡವಿಟ್ಟಿನಲ್ಲಿ ಏನಿದೆ ವಿವರ?: ಚುನಾವಣೆಗೆ ಮುನ್ನ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದ ವೇಳೆ ಅಫಿಡವಿಟ್ಟಿನಲ್ಲಿ ಚಂದನಾ, ತಮ್ಮ ಒಟ್ಟು ಆಸ್ತಿ ಮೊತ್ತ 31 ಸಾವಿರದ 985 ರೂಪಾಯಿ ಹಾಗೂ ತಮ್ಮ ಪತಿಯ ಆಸ್ತಿಯ ಮೊತ್ತ 30 ಸಾವಿರದ 311 ರೂಪಾಯಿ ಎಂದು ನಮೂದಿಸಿದ್ದರು. ಚಂದನಾರ ಪತಿ ಕಲ್ಲು ಕೆಲಸ ಮಾಡುವ ದಿನಗೂಲಿ ನೌಕರ, ಚಂದನಾ ಮೂರು ಮಕ್ಕಳ ತಾಯಿ, ಪತಿ ಮತ್ತು ಪತ್ನಿ ಕಷ್ಟಪಟ್ಟು ಹಸು ಮತ್ತು ಆಡುಗಳನ್ನು ಕೂಡ ಸಾಕುತ್ತಿದ್ದಾರೆ.

ಈ ಹಿಂದೆ ಮಾರ್ಚ್ ತಿಂಗಳಲ್ಲಿ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಚಂದನಾ, ಟಿಕೆಟ್ ನೀಡುವುದಾಗಿ ಘೋಷಣೆ ಮಾಡುವವರೆಗೂ ನನಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಾರೆ ಎಂದು ಗೊತ್ತಿರಲಿಲ್ಲ. ಆನ್ ಲೈನ್ ನಲ್ಲಿ ನಾಮಪತ್ರ ಸಲ್ಲಿಕೆಗೆ ಹೆಸರನ್ನು ನೀಡಿ ಎಂದು ಹಲವರು ನನಗೆ ಪ್ರೋತ್ಸಾಹ ನೀಡಿದರು ಎಂದಿದ್ದರು. ಈಗ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬರುತ್ತೇನೆ ಎಂದು ಖಂಡಿತಾ ಭಾವಿಸಿರಲಿಲ್ಲ ಎಂದು ಖುಷಿಯಿಂದ ಹೇಳುತ್ತಾರೆ.

ಹಲವರು ಟ್ವಿಟ್ಟರ್ ನಲ್ಲಿ ಚಂದನಾರ ಗೆಲುವನ್ನು ಬಣ್ಣಿಸಿದ್ದು ಹೀಗೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com