ಕೋವಿಡ್-19 ನಡುವೆ ರೆಸಿಡೆಂಟ್ ವೆಲ್‌ಫೇರ್ ಗ್ರೂಪ್ ನಿಂದ ಬೆಂಗಳೂರಿನಲ್ಲಿ ಉಚಿತ ಕಾರು ಪ್ರಯಾಣ, ಆಂಬ್ಯುಲೆನ್ಸ್ ಸೇವೆ!

ಸದ್ಯ ಎಲ್ಲೆಡೆ ವ್ಯಾಪಕವಾಗುತ್ತಿರುವ ಕೋವಿಡ್-19 ಸಾಂಕ್ರಾಮಿಕದ ವೇಳೆ ಆಂಬ್ಯುಲೆನ್ಸ್, ಟ್ಯಾಕ್ಸಿ ಪಡೆಯಲು ಸಾರ್ವಜನಿಕರು  ಹರ ಸಾಹಸ ಪಡುತ್ತಿರುವಂತೆಯೇ, 60 ಕ್ಕೂ ಹೆಚ್ಚು ನಿವಾಸಿಗಳ ಕಲ್ಯಾಣ ಸಂಸ್ಥೆಗಳ ಸಂಘಟನೆಯಾದ ಕನಕಪುರ ರಸ್ತೆಯ ಚೇಂಜ್ ಮೇಕರ್ಸ್  ನಿವಾಸಿಗಳ ರಕ್ಷಣೆಗೆ ಬಂದಿದೆ.
ಚೇಂಜ್ ಮೇಕರ್ ತಂಡ
ಚೇಂಜ್ ಮೇಕರ್ ತಂಡ

ಬೆಂಗಳೂರು: ಸದ್ಯ ಎಲ್ಲೆಡೆ ವ್ಯಾಪಕವಾಗುತ್ತಿರುವ ಕೋವಿಡ್-19 ಸಾಂಕ್ರಾಮಿಕದ ವೇಳೆ ಆಂಬ್ಯುಲೆನ್ಸ್, ಟ್ಯಾಕ್ಸಿ ಪಡೆಯಲು ಸಾರ್ವಜನಿಕರು  ಹರ ಸಾಹಸ ಪಡುತ್ತಿರುವಂತೆಯೇ, 60 ಕ್ಕೂ ಹೆಚ್ಚು ನಿವಾಸಿಗಳ ಕಲ್ಯಾಣ ಸಂಸ್ಥೆಗಳ ಸಂಘಟನೆಯಾದ ಕನಕಪುರ ರಸ್ತೆಯ ಚೇಂಜ್ ಮೇಕರ್ಸ್  ನಿವಾಸಿಗಳ ರಕ್ಷಣೆಗೆ ಬಂದಿದೆ. ಚಿಕಿತ್ಸೆಗಾಗಿ ನಿವಾಸಿಗಳು ಎಲ್ಲಿಗಾದರೂ ತೆರಳಬೇಕಾದರೆ ಉಚಿತವಾಗಿ ಕಾರಿನ ಸೌಲಭ್ಯ ಒದಗಿಸುತ್ತದೆ. ಕಳೆದ ವರ್ಷದಂತೆ ಈ ವರ್ಷವೂ ಪ್ರಸಿದ್ಧ ಅಂಬುಲೆನ್ಸ್ ಸೇವೆಯನ್ನು ಆರಂಭಿಸುತ್ತಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕನಕಪುರ ರಸ್ತೆಯ ಚೆಂಗ್ ಮೇಕರ್ ಸಂಸ್ಥೆ ಅಧ್ಯಕ್ಷ ಅಬ್ದುಲ್ ಅಲೀಂ, ಕೋವಿಡ್ ಪ್ರಕರಣಗಳ ಏರಿಕೆ ನಡುವೆಯೂ ನಮ್ಮ ಸದಸ್ಯರಾದ ಸುಮಾರು 30 ಸಾವಿರ ನಿವಾಸಿಗಳಿಗೆ ನೆರವು ನೀಡಲು ನಾವು ಬಯಸುತ್ತೇವೆ. ಸತ್ಯ ಸಾಯಿ ಟೂರಿಸ್ಟ್ ಸರ್ವೀಸ್ ಮೂಲಕ ಇನ್ನೋವಾ ಕಾರಿನ ವ್ಯವಸ್ಥೆ ಮಾಡಿದ್ದೇವೆ. ಡೀಸೆಲ್ ಮತ್ತು ಡ್ರೈವರ್ ಚಾರ್ಜ್ ನ್ನು ನಮ್ಮ ಗುಂಪು ಭರಿಸುತ್ತದೆ ಎಂದರು.

ಇದರ ಹಿಂದಿನ ತಾರ್ತಿಕತೆಯನ್ನು ವಿವರಿಸಿದ ಅಲೀಂ, ಸಾರ್ವಜನಿಕ ಸದಸ್ಯರು ಕೋವಿಡ್-19 ಕುಟುಂಬದ ಸದಸ್ಯರನ್ನು ಕರೆದೊಯ್ಯಲು ತಮ್ಮ ಸ್ವಂತ ಕಾರನ್ನು ಬಳಸಿರುತ್ತಾರೆ.ಅದನ್ನು ಇತರರ ಬಳಸಿದಾಗ ದೊಡ್ಡ ಅಪಾಯವಿರುತ್ತದೆ. ಇದಕ್ಕೆ ಪರ್ಯಾಯವಾಗಿ ನಾವು ಕಾರಿನ ಸೌಲಭ್ಯ ನೀಡುತ್ತೇವೆ. ಕಾರನ್ನು ಸಂಪೂರ್ಣವಾಗಿ ಸ್ಯಾನಿಟೈಸರ್ಸ್ ಮಾಡುವುದರಿಂದ ಸುರಕ್ಷಿತವಾಗಿದ್ದು, ಪ್ರಯಾಣಿಸುವ ಎಲ್ಲರಿಗೂ ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು.

ಕಳೆದ ವರ್ಷ ತನ್ನ ನಿವಾಸಿಗಳಿಗೆ ಪ್ರಸಿದ್ಧ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಾಗುತಿತ್ತು. ಆದರೆ, ಕೊರೋನಾ ಕೇಸ್ ಗಳು ಕಡಿಮೆಯಾಗಿದ್ದರಿಂದ ಎರಡು ತಿಂಗಳ ಹಿಂದೆ ಸ್ಥಗಿತಗೊಳಿಸಿದ್ದೇವು. ಒಂದು ವಾರದೊಳಗೆ ಮತ್ತೆ ಅದನ್ನು ಆರಂಭಿಸುತ್ತೇವೆ. ಜೆ.ಕೆ. ಆಂಬ್ಯುಲೆನ್ಸ್ ನಿಂದ ಒದಗಿಸುವ ಆಂಬ್ಯುಲೆನ್ಸ್ ನಿರ್ವಹಣೆಗೆ ಸುಮಾರು 2.4 ಲಕ್ಷ ವೆಚ್ಚ ನಮ್ಮ ಮೇಲೆ ಬೀಳುತ್ತದೆ. ಕಳೆದ ವರ್ಷದಂತೆ ಈ ವರ್ಷವೂ ಡೀಸೆಲ್ ಮತ್ತು ಡ್ರೈವರ್ ಗಾಗಿ ಪ್ರತಿ ಕುಟುಂಬದಿಂದ 60 ರೂ. ಸಂಗ್ರಹಿಸುತ್ತೇವೆ. ವಾರದಲ್ಲಿ ಎಲ್ಲ ವೇಳೆಯಲ್ಲೂ ಲಭ್ಯವಿರುವಂತಹ ಮೂರು ವೈದ್ಯಕೀಯ ಸಿಬ್ಬಂದಿ ಹಾಗೂ 2 ಡ್ರೈವರ್ ಗಳನ್ನು ಹೊಂದಿರುವುದಾಗಿ ಅವರು ತಿಳಿಸಿದರು.

ಆಂಬ್ಯುಲೆನ್ಸ್ ನಲ್ಲಿ ಒಂದು ವೆಂಟಿಲೇಟರ್, ಕಾರ್ಡಿಯಕ್ ಮಾನಿಟರ್, ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಮತ್ತಿತರ ವೈದ್ಯಕೀಯ
ಉಪಕರಣಗಳಿರುತ್ತವೆ. ತುರ್ತು ಪರಿಸ್ಥಿತಿ ಅಥವಾ ಬೇರೆ ಯಾರಾದರೂ ಈ ಆಂಬ್ಯುಲೆನ್ಸ್ ಬುಕ್ ಮಾಡಿದರೆ ಮತ್ತೊಂದು ಆಂಬ್ಯುಲೆನ್ಸ್  ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಬ್ದುಲ್ ಅಲೀಂ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com