ಸಕಾರಾತ್ಮಕ ಚಿಂತನೆ, ಶಾಂತ ಚಿತ್ತದಿಂದ ಕೊರೋನಾವನ್ನು ಗೆದ್ದ ವೃದ್ದ ದಂಪತಿ!

ಸರಿಯಾದ ರೋಗನಿರ್ಣಯ, ಸಮಯೋಚಿತ ಚಿಕಿತ್ಸೆ ಮತ್ತು ಸಕಾರಾತ್ಮಕ ಮನೋಭಾವದಿಂದ, ಕೋವಿಡ್-ಪಾಸಿಟಿವ್ ಇದ್ದ ವೃದ್ದರೂ ಸಹ ಜಯಿಸಬಹುದು ಎನ್ನಲು ಈ ವೃದ್ದ ದಂಪತಿಗಳು ಸಾಕ್ಷಿ.
ವಸಂತ್ ಮತ್ತು ಲಕ್ಷ್ಮಿ ದಂಪತಿ
ವಸಂತ್ ಮತ್ತು ಲಕ್ಷ್ಮಿ ದಂಪತಿ

ಬೆಂಗಳೂರು/ಮಂಗಳೂರು: ಸರಿಯಾದ ರೋಗನಿರ್ಣಯ, ಸಮಯೋಚಿತ ಚಿಕಿತ್ಸೆ ಮತ್ತು ಸಕಾರಾತ್ಮಕ ಮನೋಭಾವದಿಂದ, ಕೋವಿಡ್-ಪಾಸಿಟಿವ್ ಇದ್ದ ವೃದ್ದರೂ ಸಹ ಜಯಿಸಬಹುದು ಎನ್ನಲು ಈ ವೃದ್ದ ದಂಪತಿಗಳು ಸಾಕ್ಷಿ.

ಎತಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸೇವೆ ಸಲ್ಲಿಸಿದ ಮಾಜಿ ಸೇನಾಧಿಕಾರಿ 95 ವರ್ಷದ ಬೆಂಗಳೂರಿನ ಆರ್ ವಸಂತ್ ಮತ್ತು ಅವರ ಪತ್ನಿ 90 ವರ್ಷದ ಲಕ್ಷ್ಮಿ ದೇವಿ, ಮಂಗಳೂರಿನ 95 ರ ಪ್ರಾಯದ ಆಲಿಸ್ ಪಿಂಟೊ ಕೊರೋನಾದಿಂದ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಕೋವಿಡ್‌ಗೆ ಪಾಸಿಟಿವ್ ವರದಿ ಪಡೆದಿದ್ದ ಬೆಂಗಳೂರು ದಂಪತಿಗಳು ಶುಕ್ರವಾರ ಸಂಜೆ ಬೌರಿಂಗ್ ಆಸ್ಪತ್ರೆಯಿಂದ ಬಿಡುಗಡೆಯಾದರು. ಉತ್ತರಹಳ್ಳಿಯಲ್ಲಿ ಸ್ವಂತ ಮನೆ ಹೊಂದಿರುವ ವಸಂತ್ ಮತ್ತು ಲಕ್ಷ್ಮಿ ಅತಿಸಾರ ಮತ್ತು ಜ್ವರದ ಲಕ್ಷಣಗಳನ್ನು ಹೊಂದಿದ್ದರು. ಅವರು ಪರೀಕ್ಷೆಗೆ ಒಳಪಟ್ಟಾಗ ಕೊರೋನಾ ದೃಢವಾಗಿತ್ತು. ಆಗ ಅವರ ಕುಟುಂಬ ಸದಸ್ಯರು ದಂಪತೊಗಳಿಗೆ ಕೊರೋನಾ ಬಂದಿರುವ ವಿಷಯ ತಿಳಿಸದಿರಲು ನಿರ್ಧರಿಸಿದ್ದರು ಮತ್ತು ವೈರಲ್ ಸೋಂಕಿಗೆ ತುತ್ತಾಗಿರುವ ಅವರಿಗೆ ಔಷಧ, ಚಿಕಿತ್ಸೆ ಅಗತ್ಯವಿತ್ತು.

ಕೋವಿಡ್ ವಿರುದ್ಧ ಹೋರಾಡಲು ಶಾಂತ ಮನಸ್ಥಿತಿ ಬೇಕು

ದಂಪತಿಗಳಿಗೆ ದಿನದಿನಕ್ಕೆ ಕೊರೋನಾ ಲಕ್ಷಣ ಉಲ್ಬಣವಾದಂತೆ ಅವರ ಆಮ್ಲಜನಕದ ಮಟ್ಟವು ಇಳಿಕೆಯಾಗಲು ತೊಡಗಿತು. ಆಗ ಅವರಿಗೆ ಕೋವಿಡ್ ಇದೆ ಮತ್ತು ಆಸ್ಪತ್ರೆಗೆ ಸೇರಿಸಬೇಕಾಗಿದೆ ಎಂದು ತಿಳಿಸಲಾಯಿತು. ದಂಪತಿಯ ಮೊಮ್ಮಗ ಹರೀಶ್ ಎಸ್ ಬಂಡಗರ್ “ಅವರ ಆಮ್ಲಜನಕದ ಮಟ್ಟ 75 ಕ್ಕಿಂತ ಕಡಿಮೆಯಾಗಿದೆ. ಅವರ ವಯಸ್ಸಿನ ಕಾರಣದಿಂದಾಗಿ ಇದು ಭಯಾನಕ ಸ್ಥಿತಿಯಾಗಿತ್ತು. ನಮಗೆ ಎರಡು ದಿನಗಳವರೆಗೆ ಆಮ್ಲಜನಕ ಬೆಡ್ ಸಿಕ್ಕಿರಲಿಲ್ಲ. ಆದಾಗ್ಯೂ, ಕೆಲವು ಸ್ವಯಂಸೇವಕರ ಮೂಲಕ, ನಾವು ಬೌರಿಂಗ್ ಆಸ್ಪತ್ರೆಯಲ್ಲಿ ಬೆಡ್ ಗಳನ್ನು ಪಡೆದೆವು.

"ನಾವು ಅಲ್ಲಿಗೆ ಹೋದಾಗ, ಐದು ಕೋವಿಡ್ ಸಾವುಗಳನ್ನು ನೋಡಿದೆವು. ಅವರನ್ನು ಆಸ್ಪತ್ರೆಗೆ ದಾಖಲಿಸಲು ನನಗೆ ಭಯವಾಗಿತ್ತು. ಆದರೆ ನನಗೆ ಬೇರೆ ಆಯ್ಕೆ ಇರಲಿಲ್ಲ. ಈಗ ಅವರು ವಾರಿಯರ್ ಗಳಾಗಿ ಬಿಡುಗಡೆಯಾಗಿದ್ದಾರೆ" ಎಂದರು.

“ನಾವು ಕೋವಿಡ್‌ ಬಂದಿದೆ ಎಂದು ತಿಳಿದುಬಂದಾಗ ನಮಗಾಗಲೇ ಹೆಚ್ಚಿನ ವಯಸ್ಸಾಗಿದೆ ನಾವಿದನ್ನು ಎದುರಿಸಲು ಸಾಧ್ಯವೆ ಎನ್ನುವುದು ಗೊತ್ತಿರಲಿಲ್ಲ.ಆದರೆ ನನ್ನ ಹೆಂಡತಿ ಮತ್ತು ನಾನು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಲು ನಿರ್ಧರಿಸಿದೆವು. ನಾವು ಎಲ್ಲಾ ಔಷಧಿಗಳನ್ನು ಚಿಕಿತ್ಸೆಯನ್ನು ತೆಗೆದುಕೊಂಡಿದ್ದೇವೆ ಮತ್ತು ಪ್ರತಿದಿನ ನಾವು ಚೇತರಿಸಿಕೊಳ್ಳಬೇಕೆಂದು ಆಶಿಸಿದ್ದೆವು. . ನಾವು ಕೋವಿಡ್ ವಿರುದ್ಧ ಹೋರಾಡಬಹುದೆಂದು ನಾವು ಆಲೋಚಿಸುತ್ತಲಿದ್ದೆವು. ಅದು ಸಹ ಶಾಂತ ಮನಸ್ಥಿತಿಯಲ್ಲಿದ್ದೆವು

"ಆಸ್ಪತ್ರೆಯ ಸಿಬ್ಬಂದಿ ಸ್ನೇಹಪರರಾಗಿದ್ದರು ಮತ್ತು ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು. ನಮಗೆ ಸ್ಟೀರಾಯ್ಡ್ ಗಳನ್ನು ನೀಡಲಾಗಿತ್ತು.ಮತ್ತು ನಾವು ಚೇತರಿಸಿಕೊಂಡಿದ್ದೇವೆ. ನನ್ನ ಹೆಂಡತಿಗೆ ಇನ್ನೊಂದು ವಾರ ಆಮ್ಲಜನಕದ ಅಗತ್ಯವಿದ್ದಾಗ ನಾನು ಹೆಚ್ಚು ಆರೋಗ್ಯವಂತನಾಗಿದ್ದೆ. ಈಗ ಆಕೆ ಸಹ ಉತ್ತಮವಾಗಿದ್ದಾಳೆ.ಉತ್ತಮ ಸಕಾರಾತ್ಮಕ ಮನೋಭಾವದಿಂದ ನಾವು ರೋಗಗಳನ್ನು ಎದಿರಿಸಬಹುದು" ಎಂದು ವಸಂತ್ ಹೇಳಿದ್ದಾರೆ.

ಕಳೆದ ತಿಂಗಳು ಕೋವಿಡ್-ಪಾಸಿಟಿವ್ ಅನ್ನು ಪರೀಕ್ಷಿಸಿದ ಆಲಿಸ್ ಪಿಂಟೊ ಅವರ ಪ್ರಕರಣದಲ್ಲಿ, ಆಕೆಯ ಶ್ವಾಸಕೋಶಕ್ಕೆ ಶೇಕಡಾ 60 ರಷ್ಟು ಸೋಂಕು ತಗುಲಿದೆಯೆಂದು ವೈದ್ಯರು ಘೋಷಿಸಿದ್ದರು. ಆದರೆ ಕುಟುಂಬದ ಸಂಪೂರ್ಣ ಸಮರ್ಪಣೆ, ಅವರ ಸಕಾರಾತ್ಮಕ ವರ್ತನೆ ಮತ್ತು ವೈದ್ಯರ ಬೆಂಬಲದಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಪಾಸಿಟಿವ್ ವರದಿ ಪಡೆದ ಆಕೆಯ ಮಗ ಆಗ್ನೆಲ್ ಪಿಂಟೊ, "ಏಪ್ರಿಲ್‌ನಲ್ಲಿ ತನ್ನ ತಾಯಿಗೆ ಸೋಂಕು ತಗುಲಿತು ಮತ್ತು 14 ದಿನಗಳ ನಂತರ ಅವಳು ಚೇತರಿಸಿಕೊಂಡಳು" ಎಂದಿದ್ದಾರೆ.

"ಆರು ದಿನಗಳವರೆಗೆ ಅವಳು ಜ್ವರದಿಂದ ಬಳಲುತ್ತಿದ್ದಳು ಮತ್ತು ನಾವು ಅವಳನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದೆವು. ಅವಳಿಗೆ ಸಕ್ಕರೆ ಖಾಯಿಲೆ ಇತ್ತು.ಅದಕ್ಕಾಗಿ ನಾವು ಆರಂಭದಲ್ಲಿ ಚಿಂತೆಗೆ ಬಿದ್ದೆವು,. ಏಪ್ರಿಲ್ 15 ರಿಂದ 21 ರವರೆಗೆ ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ಅವರು ಕೇವಲ ಒಂದು ಗಂಟೆ ಆಕ್ಸಿಜನ್ ಬೆಂಬಲ ಪಡೆದಿದ್ದರು,ನಾವು ಅವಳ ಸ್ಯಾಚುರೇಶನ್ ಮಟ್ಟವನ್ನು ಗಮನಿಸುತ್ತಿದ್ದೇವೆ. " ಎಂದು ಅವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com