ಪ್ರೊಫೆಸರ್ ಶಾರದಾ ಶ್ರೀನಿವಾಸನ್ ಗೆ ವರ್ಷದ ಮಹಿಳಾ ಇಂಜಿನಿಯರ್ ಪ್ರಶಸ್ತಿ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಶಾರದಾ ಶ್ರೀನಿವಾಸನ್ ಅವರು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ನೀಡುವ 2021ನೇ ಸಾಲಿನ ವರ್ಷದ ಮಹಿಳಾ ಎಂಜಿನಿಯರ್ ಪ್ರಶಸ್ತಿಗೆ ಆಯ್ಕೆಯಾದ ಮೂವರು...
Published: 27th October 2021 01:39 PM | Last Updated: 27th October 2021 03:45 PM | A+A A-

ಶಾರದಾ ಶ್ರೀನಿವಾಸನ್
ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಶಾರದಾ ಶ್ರೀನಿವಾಸನ್ ಅವರು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ನೀಡುವ 2021ನೇ ಸಾಲಿನ ವರ್ಷದ ಮಹಿಳಾ ಎಂಜಿನಿಯರ್ ಪ್ರಶಸ್ತಿಗೆ ಆಯ್ಕೆಯಾದ ಮೂವರು ಮಹಿಳೆಯರಲ್ಲಿ ಒಬ್ಬರಾಗಿದ್ದು, ಈ ಮೂಲಕ ಅವರ ಸಾಧನೆಗಳ ಪಟ್ಟಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ಭಾರತದಲ್ಲಿ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಿಗೆ ಅದ್ಭುತ ಕೊಡುಗೆ ನೀಡಿದ ಮಹಿಳೆಯರಿಗೆ ಅಕಾಡೆಮಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಶಾರದಾ ಶ್ರೀನಿವಾಸನ್ ಅವರು ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಪುರಾತತ್ತ್ವ ಶಾಸ್ತ್ರದ ಕ್ಷೇತ್ರಕ್ಕೆ, ವಿಶೇಷವಾಗಿ ಪುರಾತತ್ತ್ವ ಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಪುರಾತನ ಲೋಹಶಾಸ್ತ್ರ ಮತ್ತು ಗಣಿಗಾರಿಕೆಯಲ್ಲಿನ ಅವರ ಪ್ರಮುಖ ಪ್ರಗತಿಗಳನ್ನು ಗುರುತಿಸಿ ಡಿಸೆಂಬರ್‌ನಲ್ಲಿ ಅವರನ್ನು ಗೌರವಿಸಲಾಗುತ್ತಿದೆ.