ಯುಪಿಎಸ್​ಸಿ ಪರೀಕ್ಷೆಯಲ್ಲಿ ವಿಜಯಪುರದ ನೇತ್ರಾ ಮೇಟಿ 326ನೇ ರ್ಯಾಂಕ್: ಅವರ ಯಶಸ್ಸಿನ ಗುಟ್ಟೇನು?

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವೆಗಳ (ಸಿಎಸ್‌ಇ) ಮುಖ್ಯ ಪರೀಕ್ಷೆ 2020 ರ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು ವಿಜಯಪುರದ ವಿವೇಕ್ ನಗರ ನಿವಾಸಿ ನೇತ್ರಾ ಮೇಟಿ ದೇಶಕ್ಕೆ 326ನೇ ರ್ಯಾಂಕ್ ಗಳಿಸುವ ಮೂಲಕ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ.
ನೇತ್ರಾ ಮೇಟಿ
ನೇತ್ರಾ ಮೇಟಿ

ವಿಜಯಪುರ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವೆಗಳ (ಸಿಎಸ್‌ಇ) ಮುಖ್ಯ ಪರೀಕ್ಷೆ 2020 ರ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು ವಿಜಯಪುರದ ವಿವೇಕ್ ನಗರ ನಿವಾಸಿ ನೇತ್ರಾ ಮೇಟಿ ದೇಶಕ್ಕೆ 326ನೇ ರ್ಯಾಂಕ್ ಗಳಿಸುವ ಮೂಲಕ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ.

ಏಳನೇ ಪ್ರಯತ್ನದಲ್ಲಿ ಯಶಸ್ಸು: 7ನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯನ್ನು ತೇರ್ಗಡೆ ಮಾಡಿರುವ ನೇತ್ರಾ ಮೇಟಿ ಈ ಹಿಂದೆ ಎರಡು ಬಾರಿ ಸಂದರ್ಶನ ಮಟ್ಟಕ್ಕೆ ಹೋಗಿದ್ದರು. ಇದೀಗ ಕೊನೆಗೂ ಸಂದರ್ಶನ ಮಟ್ಟದಲ್ಲಿ ತೇರ್ಗಡೆ ಹೊಂದಿ ಜಯಗಳಿಸಿದ್ದು ಅವರ ಮುಖದಲ್ಲಿ ನಗು ಮೂಡಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ನಾಲ್ಕೈದು ವರ್ಷಗಳಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಪ್ರಯತ್ನಿಸುತ್ತಲೇ ಇದ್ದೆ, ಇಂದು ಫಲ ಸಿಕ್ಕಿದ್ದು ಖುಷಿಯಾಗಿದೆ. ನನ್ನ ತಂದೆ-ತಾಯಿ, ಮಾರ್ಗದರ್ಶಕರು ಎಲ್ಲರೂ ಸಹಕಾರ, ಬೆಂಬಲ ನೀಡಿದ್ದು ರ್ಯಾಂಕ್ ಬರಲು ಸಹಾಯವಾಯಿತು ಎಂದಿದ್ದಾರೆ.

ನೇತ್ರ ಮೇಟಿಯವರ ಸಲಹೆಯೇನು: ಸಾಮಾನ್ಯವಾಗಿ ಯುಪಿಎಸ್ ಸಿ ಪರೀಕ್ಷೆ ಕಷ್ಟವಾಗಿರುತ್ತದೆ. ಇದಕ್ಕೆ ನಿರಂತರ ಪ್ರಯತ್ನ ಬೇಕು, ಒಂದು ವಾರ-ಒಂದು ತಿಂಗಳಿಗೆ ಮುಗಿಯುವ ಪ್ರಯತ್ನವಲ್ಲ, ಪ್ರತಿದಿನ ಕೂಡ ಪರೀಕ್ಷೆ ತಯಾರಿಗೆ ಮುಖ್ಯವಾಗುತ್ತದೆ. ಪ್ರಾಥಮಿಕ, ಮುಖ್ಯ ಮತ್ತು ಸಂದರ್ಶನ ಮೂರೂ ಪರೀಕ್ಷೆಗಳಿಗೆ ನಿರಂತರ ಶ್ರಮ ಬೇಕಾಗುತ್ತದೆ. ಸಾಮಾನ್ಯ ಜ್ಞಾನ, ವರ್ತಮಾನಗಳ ಬಗ್ಗೆ ಚೆನ್ನಾಗಿ ತಿಳಿದಿರಬೇಕು, ಪ್ರತಿಯೊಂದು ಹಂತಕ್ಕೂ ಅದರದ್ದೇ ಆದ ಕಾರ್ಯತಂತ್ರವಿರುತ್ತದೆ, ಅದನ್ನು ನಾವು ಯೋಜನೆ ಮಾಡಿಕೊಂಡು ಮುಂದುವರಿಯಬೇಕು ಎನ್ನುತ್ತಾರೆ.

ಕಳೆದ ವರ್ಷ ಕೋವಿಡ್-19ನಿಂದ ಸಂದರ್ಶನ ಸರಿಯಾಗಿ ನಡೆದಿರಲಿಲ್ಲ, ನನಗೂ ತಯಾರಿ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ, ಈ ವರ್ಷ ಸಾಧ್ಯವಾಗಿದ್ದು ಕೊನೆಗೂ ಖುಷಿಯಾಗಿದೆ. ಪ್ರತಿದಿನ ನಾನು 6ರಿಂದ 8 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಇದು ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ತೇರ್ಗಡೆ ಹೊಂದಲು ಸಹಾಯವಾಯಿತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com