
ಘಟನೆಯ ದೃಶ್ಯ
ಜೈಪುರ: ಕೋಮು ಸೌಹಾರ್ದತೆ ಕದಡಿರುವ ಪ್ರದೇಶವಾದ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ಹೃದಯತಟ್ಟುವ ಘಟನೆ ವರದಿಯಾಗಿದೆ. ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ಮನೆಯೊಂದರಿಂದ ಮಗುವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ದೃಷ್ಟಿಗಿಂತ ದೂರದೃಷ್ಟಿ ಮುಖ್ಯ: ಅಂಧತ್ವವನ್ನು ಮೀರಿ ಬೆಳೆದ ಸಾಧಕಿ ವಿದ್ಯಾ
ದುಷ್ಕರ್ಮಿಗಳ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ಮನೆಯೊಂದರಿಂದ ಮಗು ಅಳುತ್ತಿರುವ ಸದ್ದು ಕೇಳಿಬಂದಿತ್ತು.
ಇದನ್ನೂ ಓದಿ: ಬೆಂಗಳೂರು: ಚಿನ್ನದ ಕಾರ್ ಟ್ಯಾಕ್ಸಿ: ಬುಕ್ ಮಾಡೋಕೆ 7 ಲಕ್ಷ ರೂ.!
ಮಗುವಿನ ಅಳು ಸದ್ದು ಕೇಳಿಯೂ ಸ್ಥಳದಲ್ಲಿದ್ದ ಜನರು ಯಾರೊಬ್ಬರೂ ಒಳನುಗ್ಗಲು ಮನಸ್ಸು ಮಾಡಲಿಲ್ಲ. ಈ ಸಂದರ್ಭದಲ್ಲಿ ನೇತ್ರೇಶ್ ಶರ್ಮಾ ಎಂಬ ಕಾನ್ಸ್ ಟೇಬಲ್ ಒಳ ನುಗ್ಗಿ ತಮ್ಮ ಜೀವದ ಹಂಗನ್ನು ತೊರೆದು ಬೆಂಕಿ ನಡುವೆ ಮಗುವನ್ನು ಹೊರತಂದು ಸಾಹಸ ಮೆರೆದಿದ್ದಾರೆ.
ಇದನ್ನೂ ಓದಿ: ಪ್ರೀತಿಯ ಪ್ರತಿಮೆ: ಈ ದೇವಾಲಯದಲ್ಲಿ ಶ್ವಾನವೇ ದೇವರು!
ಅಷ್ಟೇ ಅಲ್ಲದೆ ಬೆಂಕಿ ಹತ್ತಿದ್ದ ಮನೆಯೊಲಗೆ ಸಿಲುಕಿಕೊಂಡಿದ್ದ ಮೂವರು ಮಹಿಳೆಯರನ್ನೂ ಅವರು ಸುರಕ್ಷಿತವಾಗಿ ಕರೆತಂದಿದ್ದಾರೆ. ಶರ್ಮಾ ಅವರ ಕಾರ್ಯಕ್ಕೆ ಸಿ.ಎಂ ಅಶೋಕ್ ಗೆಹ್ಲೋಟ್ ಅವರೇ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್: ಪಾಳುಬಿದ್ದ ಕಲ್ಲಿದ್ದಲು ಗಣಿ ಈಗ ಮೀನು ಸಾಕಾಣಿಕೆಯ ಸ್ವರ್ಗ