ಮಡಿಕೇರಿ: ಗ್ರಾಮ ಪಂಚಾಯಿತಿ ಸದಸ್ಯನಿಂದ ಬುಡಕಟ್ಟು ಮಕ್ಕಳಿಗೆ ಕಂಪ್ಯೂಟರ್ ತರಗತಿ!

ಕೊಡಗಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಬುಡಕಟ್ಟು ಜನಾಂಗದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗ್ರಾಮದಲ್ಲಿರುವ ಡಿಜಿಟಲ್ ಲೈಬ್ರರಿಯಲ್ಲಿ ವಾರಕ್ಕೊಮ್ಮೆ ಕಂಪ್ಯೂಟರ್ ತರಗತಿ ನಡೆಯುತ್ತಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

Published: 05th April 2022 03:22 PM  |   Last Updated: 05th April 2022 04:53 PM   |  A+A-


computer

ಮಕ್ಕಳಿಗೆ ಕಂಪ್ಯೂಟರ್ ತರಗತಿ

The New Indian Express

ಮಡಿಕೇರಿ: ಕೊಡಗಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಬುಡಕಟ್ಟು ಜನಾಂಗದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗ್ರಾಮದಲ್ಲಿರುವ ಡಿಜಿಟಲ್ ಲೈಬ್ರರಿಯಲ್ಲಿ ವಾರಕ್ಕೊಮ್ಮೆ ಕಂಪ್ಯೂಟರ್ ತರಗತಿ ನಡೆಯುತ್ತಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

‘ಪ್ರತಿಯೊಂದು ಪಂಚಾಯಿತಿಗಳು ರಸ್ತೆಗಳ ಅಭಿವೃದ್ಧಿ ಹಾಗೂ ಇತರೆ ಮೂಲಸೌಕರ್ಯ ಕಾಮಗಾರಿಗಳ ಬಗ್ಗೆ ಯೋಜನೆ ರೂಪಿಸುತ್ತವೆ. ಆದರೆ ನಾನು ಗ್ರಾಮೀಣ ಭಾಗದ ಮಕ್ಕಳಿಗಾಗಿ ಏನಾದರೂ ಮಾಡಬೇಕು ಎಂದು ಯೋಚಿಸುತ್ತಿದೆ. ನಂತರ ಪಂಚಾಯತ್ ಪಿಡಿಒ ಮತ್ತು ಇತರ ಸದಸ್ಯರ ಬೆಂಬಲದೊಂದಿಗೆ ಈ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಕಂಪ್ಯೂಟರ್ ತರಗತಿಗಳನ್ನು ಪ್ರಾರಂಭಿಸುವ ಯೋಜನೆ ರೂಪಿಸಿದೆ’ ಎಂದು ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿರುವ ಕೆ.ಬಾಡಗ ಗ್ರಾಮದ ಗ್ರಾ.ಪಂ.ಸದಸ್ಯ ಮುಕ್ಕಾಟೀರ ರಿತೇಶ್ ಬಿಡ್ಡಪ್ಪ ಅವರು ಹೇಳಿದ್ದಾರೆ.

"ಪಂಚಾಯಿತಿ ಡಿಜಿಟಲ್ ಲೈಬ್ರರಿ ಸುಸಜ್ಜಿತವಾಗಿದೆ ಮತ್ತು ಎರಡು ವಾರಗಳ ಹಿಂದೆ ಇಲ್ಲಿ ಕಂಪ್ಯೂಟರ್ ತರಗತಿಗಳು ಪ್ರಾರಂಭವಾಯಿತು. ನಾನು ಪ್ರತಿ ಶನಿವಾರ ಕಂಪ್ಯೂಟರ್‌ ಬೇಸಿಕ್ ಕುರಿತು ತರಗತಿಗಳನ್ನು ತೆಗೆದುಕೊಳ್ಳುತ್ತೇನೆ" ಎಂದು ಅವರು ವಿವರಿಸಿದರು.

ಇದನ್ನು ಓದಿ: ಕೊಡಗು: ಹುಲಿ ಹತ್ಯೆ ಪ್ರಕರಣದಲ್ಲಿ ಏಳು ಆರೋಪಿಗಳ ಬಂಧನ, ಮೃತದೇಹ ವಶಕ್ಕೆ

ಈ ಪ್ರದೇಶವು ಹಿಂದುಳಿದ ವರ್ಗಗಳ ಮತ್ತು ಬುಡಕಟ್ಟು ಸಮುದಾಯದ ಅನೇಕ ಮಕ್ಕಳನ್ನು ಹೊಂದಿರುವುದರಿಂದ, ಮಕ್ಕಳಿಗೆ ಕಂಪ್ಯೂಟರ್‌ ತರಗತಿ ವರದಾನವಾಗಿದೆ. ಪ್ರಸ್ತುತ, ರಿತೇಶ್ ಗ್ರಾಮದ ಆರು ಮತ್ತು ಏಳನೇ ತರಗತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. "ಆರು ತಿಂಗಳ ಬೇಸಿಕ್ ತರಬೇತಿಯ ನಂತರ, ನಾನು ಮತ್ತೊಂದು ಬ್ಯಾಚ್ ಆರಂಭವಾಗಲಿದೆ" ಎಂದು ಅವರು ಹೇಳಿದ್ದಾರೆ.

"ಗ್ರಾಮ ಪಂಚಾಯ್ತಿಗಳು ಕೇವಲ ಮೂಲಸೌಕರ್ಯ ಕಾರ್ಯಗಳಿಗೆ ಸೀಮಿತವಾಗಬಾರದು. ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಇತರ ಕ್ರಮಗಳ ಬಗ್ಗೆಯೂ ಯೋಚಿಸಬಹುದು" ಎಂದು ರಿತೇಶ್ ತಿಳಿಸಿದ್ದಾರೆ.


Stay up to date on all the latest ವಿಶೇಷ news
Poll
BS yediyurappa

ಬಿಜೆಪಿ ಸಂಸದೀಯ ಮಂಡಳಿಗೆ ಬಿ.ಎಸ್. ಯಡಿಯೂರಪ್ಪ ಸೇರ್ಪಡೆಯಿಂದ 2023 ರ ಕರ್ನಾಟಕ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುವುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp