
ಗ್ರಾಮದ ವಿದ್ಯಾರ್ಥಿಗಳಿಗೆ ತರಬೇತಿ
ಪಾಟ್ನಾ: ಬಿಹಾರದ ಗಯಾದಲ್ಲಿರುವ ಒಂದು ಗ್ರಾಮ ಐಐಟಿ ಆಕಾಂಕ್ಷಿಗಳ ಕಾಶಿ ಎನ್ನುವ ಹೆಸರಿಗೆ ಪಾತ್ರವಾಗಿದೆ. 'ಪತ್ವಾ ತೊಲಿ' (Patwa Toli) ಎಂಬ ಹೆಸರಿನ ಈ ಗ್ರಾಮದಲ್ಲಿ ಐಐಟಿ ಪದವೀಧರರು ಸೇರಿಕೊಂಡು ತರಬೇತಿ ನೀಡುತ್ತಿದ್ದಾರೆ.
ಇದನ್ನೂ ಓದಿ: ಕಾಫಿನಾಡು ಕೊಡಗಿನಲ್ಲಿ ಜೇನಿನ ಸವಿರುಚಿ: ವಿಶೇಷಚೇತನರಿಗೆ ಜೇನು ಸಾಕಣೆ ತರಬೇತಿ
ಐಐಟಿ ಪದವೀಧರರು ನಡೆಸುತ್ತಿರುವ ಈ ತರಗತಿ ಉಚಿತ ಎನ್ನುವುದು ವಿಶೇಷ. ಐಐಟಿ ಪದವೀಧರರು ಸೇರಿಕೊಂಡು 'ವೃಕ್ಷ್' (Vriksh) ಎನ್ನುವ ಸಂಘಟನೆಯನ್ನು ಪ್ರಾರಂಭಿಸಿದ್ದಾರೆ. ಅದರಡಿ ತರಗತಿಅಗಳು, ಆನ್ ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: ಐಟಿ ಕಂಪನಿ ಸೀನಿಯರ್ ಉದ್ಯೋಗಿಗಳಿಗೆ ದುಬಾರಿ BMW ಕಾರ್ ಉಡುಗೊರೆ ನೀಡಿದ ಸಿಇಒ
ಬಡ ಕುಟುಂಬದ 200 ಮಂದಿ ವಿದ್ಯಾರ್ಥಿಗಳಿಗೆ ಐಐಟಿ ಕೋಚಿಂಗ್ ನೀಡಲಾಗುತ್ತಿದೆ. ಕಳೆದ ವರ್ಷ ಇದೇ ಗ್ರಾಮದ 16 ಮಂದಿ ಅಭ್ಯರ್ಥಿಗಳು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.
ಇದನ್ನೂ ಓದಿ: ಉರಿಯುತ್ತಿರುವ ಮನೆಯಿಂದ ಮಗುವನ್ನು ರಕ್ಷಿಸಿದ ಪೊಲೀಸ್ ಕಾನ್ಸ್ ಟೇಬಲ್: ಸಾಹಸಕ್ಕೆ ಸಿಎಂ ಮೆಚ್ಚುಗೆ
ಜಿಲ್ಲಾಡಳಿತದ ಸಹಾಯದಿಂದ ಗ್ರಂಥಾಲಯವನ್ನೂ ಸ್ಥಾಪಿಸಲಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದಲೂ ಐಐಟಿ ಆಕಾಂಕ್ಷಿಗಳು ದೇಶದ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಐಐಟಿಗೆ ಪ್ರವೇಶಪಡೆಯಲು ಪತ್ವಾ ತೊಲಿಗೆ ಬರುತ್ತಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್: ಪಾಳುಬಿದ್ದ ಕಲ್ಲಿದ್ದಲು ಗಣಿ ಈಗ ಮೀನು ಸಾಕಾಣಿಕೆಯ ಸ್ವರ್ಗ