
ಶವಸಂಸ್ಕಾರ ಮಾಡಲು ಹಿಂದೂ ಕುಟುಂಬಕ್ಕೆ ನೆರವಾದ ಮುಸ್ಲಿಂ ವ್ಯಕ್ತಿಗಳು
ವೆಲ್ಲೂರು: ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪೆರನಂಬಟ್ಟು ಎಂಬಲ್ಲಿ ಬುಧವಾರ ಸಂಜೆ ಮುಸ್ಲಿಂ ವ್ಯಕ್ತಿಗಳ ಗುಂಪೊಂದು ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸಹಾಯ ಮಾಡಿದ್ದಾರೆ.
ಮೃತರನ್ನು ದಿನೇಶ್(30) ಎಂದು ಗುರುತಿಸಲಾಗಿದ್ದು, ಕಳೆದ ಕೆಲವು ದಿನಗಳಿಂದ ಪೇರನಂಬಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಆಸ್ಪತ್ರೆಯ ಕಾರಿಡಾರ್ನಲ್ಲಿ ಮೃತಪಟ್ಟಿದ್ದರು.
ಇದನ್ನು ಓದಿ: ಮಕ್ಕಳಲ್ಲಿ ಸದ್ಗುಣ ಬೆಳೆಸಲು ಭಗವದ್ಗೀತೆ ಸಹಾಯ ಮಾಡುತ್ತದೆ: ಗುಜರಾತ್ ನ ಮುಸ್ಲಿಂ ಶಿಕ್ಷಕನ ಅಭಿಮತ
ದಿನೇಶ್ ಅವರ ಸಹೋದರ ಸುಧಾಕರ್ ಮತ್ತು ಅವರ ತಾಯಿ ಸೇರಿದಂತೆ ಅವರ ಕುಟುಂಬ ಸದಸ್ಯರ ಬಳಿ ಶವಸಂಸ್ಕಾರ ಮಾಡಲು ಹಣವಿರಲಿಲ್ಲ. ಮಜಿತೆ ಟ್ರಸ್ಟ್ನ ಮುಸ್ಲಿಂ ಸದಸ್ಯರು ಮೃತದೇಹವನ್ನು ಹೊತ್ತು ತಂದು ಅಂತ್ಯಸಂಸ್ಕಾರ ಮಾಡಲು ಮತ್ತು ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಯನ್ನು ನೆರವೇರಿಸಲು ಕುಟುಂಬಕ್ಕೆ ಸಹಾಯ ಮಾಡಿದರು.
ಈ ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.