ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕ ಶೌಚಾಲಯ ಬೇಡಿಕೆ ಮುಂದಿಟ್ಟು ಟ್ವಿಟರ್ ಅಭಿಯಾನ ಆರಂಭಿಸಿದ ಎಸ್ ಐ!
ಈ ಹಿಂದೆ ಸಾಮಾಜಿಕ ಕಾರ್ಯಗಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದ್ದ ಬೆಂಗಳೂರಿನ ಸಬ್ ಇನ್ಸ್ ಪೆಕ್ಟರ್ ಒಬ್ಬರು ಇದೀಗ ಬೆಂಗಳೂರು- ತುಮಕೂರು ಹೆದ್ದಾರಿಯ ಗೊರಗುಂಟೆಪಾಳ್ಯ ಜಂಕ್ಷನ್ ನಲ್ಲಿ ತಾಜ್ ವಿವಾಂತ ಎದುರುಗಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಮುಂದಾಗಿದ್ದಾರೆ.
Published: 20th April 2022 07:54 PM | Last Updated: 04th May 2022 02:13 PM | A+A A-

ವಲಸೆ ಕಾರ್ಮಿಕ ಬಾಲಕನೊಬ್ಬನಿಗೆ ಬೋಧಿಸುತ್ತಿರುವ ಎಸ್ ಐ ಶಾಂತಪ್ಪ ಜಡೆಮ್ಮನವರ್
ಬೆಂಗಳೂರು: ಈ ಹಿಂದೆ ಸಾಮಾಜಿಕ ಕಾರ್ಯಗಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದ್ದ ಬೆಂಗಳೂರಿನ ಸಬ್ ಇನ್ಸ್ ಪೆಕ್ಟರ್ ಒಬ್ಬರು ಇದೀಗ ಬೆಂಗಳೂರು- ತುಮಕೂರು ಹೆದ್ದಾರಿಯ ಗೊರಗುಂಟೆಪಾಳ್ಯ ಜಂಕ್ಷನ್ ನಲ್ಲಿ ತಾಜ್ ವಿವಾಂತ ಎದುರುಗಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಮುಂದಾಗಿದ್ದಾರೆ.
ಪ್ರಸ್ತುತ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ ಜಡೆಮ್ಮನವರ್ , ಸೂಕ್ತ ಶೌಚಾಲಯವಿಲ್ಲದೆ ಸಂಕಷ್ಟಪಡುತ್ತಿರುವ ಮಹಿಳೆಯರಿಗಾಗಿ ಗೊರಗುಂಟೆಪಾಳ್ಯ ಜಂಕ್ಷನ್ ನಲ್ಲಿ ಕಂಪರ್ಟ್ ಆಗಿರುವ ನಿರ್ಮಿಸಲು ಬಯಸಿದ್ದಾರೆ. ತನ್ನ ತಾಯಿ ಶೌಚಕ್ಕೆ ಹೋಗಲು ಬಯಸಿದಾಗ ಆಕೆಗೆ ಸಹಾಯ ಮಾಡಲು ಆಗಿರಲಿಲ್ಲ. ಇದೇ ಕಾರಣದಿಂದ ಪ್ರಚೋದಿತರಾಗಿ ಇದೀಗ ಜಂಕ್ಷನ್ ನಲ್ಲಿ ನಿಲ್ದಾಣವೊಂದನ್ನು ನಿರ್ಮಿಸುವ ಯೋಚನೆ ಮಾಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಶಾಂತಪ್ಪ ಜಡೆಮ್ಮನವರ್, ತಾನೂ ವಲಸೆ ಕಾರ್ಮಿಕ ಕುಟುಂಬದಿಂದ ಬಂದಿದ್ದು, ಮಹಿಳೆಯರು ಎದುರಿಸುವ ಕಷ್ಟಗಳನ್ನು ನೋಡಿದ್ದೇನೆ. ಬಳ್ಳಾರಿ ಬಳಿಯ ತಮ್ಮ ಊರಿಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದಾಗ ಅದೇ ಜಂಕ್ಷನ್ ನಲ್ಲಿ ಶೌಚಕ್ಕೆ ಹೋಗಲು ತನ್ನ ತಾಯಿ ಪಟ್ಟ ಸಂಕಷ್ಟವೇ ಈ ನಿಲ್ದಾಣ ಸ್ಥಾಪಿಸಲು ಕಾರಣವಾಗಿದೆ. ಅಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ತನ್ನ ತಾಯಿಗೆ ಸಹಾಯ ಮಾಡಲು ಆಗಲಿಲ್ಲ, ನಂತರ ತನ್ನ ತಾಯಿಯಂತೆಯೇ ಸಂಕಷ್ಟಪಡುವ ಮಹಿಳೆಯರ ಸಮಸ್ಯೆ ನಿವಾರಿಸಲು ಮುಂದಾಗಿರುವುದಾಗಿ ತಿಳಿಸಿದರು.
ಇದಕ್ಕಾಗಿ ಅವರು ಹಣ ಸಂಗ್ರಹಿಸಲು ಟ್ವೀಟರ್ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಶಾಸಕ ಮುನಿರತ್ನ ನೆರವಾಗಿ ಹೇಳಿ 50 ದಿನ ಕಳೆದರೂ ಅವರಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಅಂತಿಮವಾಗಿ ತನ್ನ ಸ್ವಂತ ಖರ್ಚಿನಿಂದ ಪೊರ್ಟಬಲ್ ಶೌಚಾಲಯ ನಿರ್ಮಿಸಿದ್ದಾರೆ. ಆದಾಗ್ಯೂ, ಕೆಲವರು ಇದನ್ನು ತಡೆಹಿಡಿದಿದ್ದಾರೆ.
ಶೌಚಾಲಯ ನಿರ್ಮಾಣಕ್ಕಾಗಿ ಸಹಕರಿಸುವಂತೆ ಸಾಮಾಜಿಕ ಮಾಧ್ಯಮ ಮೂಲಕ ಕೇಳಿಕೊಳ್ಳುತ್ತೇನೆ. ಪೊಲೀಸ್ ಇಲಾಖೆಯ ಸಿಬ್ಬಂದಿಯಾಗಿ ಎಲ್ಲರ ಬಳಿ ಇದನ್ನು ನಾನು ಮನವಿ ಮಾಡುತ್ತೇನೆ. ವಯೋವೃದ್ಧ ತಾಯಿಯನ್ನು ಸಾರ್ವಜನಿಕ ಶೌಚಾಲಯಕ್ಕೆ ಕರೆದೊಯ್ಯಲು ಆಗಿರಲಿಲ್ಲ. ಈ ರೀತಿಯ ಸಮಸ್ಯೆಯನ್ನು ಇತರ ಮಹಿಳೆಯರು ಎದುರಿಸಬಾರದು ಎಂಬುದು ತಮ್ಮ ಉದ್ದೇಶ ಎಂದಿದ್ದಾರೆ.
2016ರ ಬ್ಯಾಚಿನ ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಆಯ್ಕೆಯಾಗಿರುವ ಜಡೆಮ್ಮನವರ್, ಬಳ್ಳಾರಿಯ ಕುಗ್ರಾಮದಿಂದ ಬಂದಿದ್ದಾರೆ. ಅವರು ವಿಜ್ಞಾನದಲ್ಲಿ ಪದವೀಧರರಾಗಿದ್ದು, ಈ ಹಿಂದೆ ಅಶೋಕ ನಗರ ಹಾಗೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ.