ಮೈಸೂರು: ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟು ಅಂತ್ಯಸಂಸ್ಕಾರ ಮಾಡಿದ ಮುಸ್ಲಿಮರು
ರಾಜ್ಯ ಕೋಮು ಘರ್ಷಣೆ ಮತ್ತು ವಿಭಜಕ ರಾಜಕಾರಣದ ಬಿಸಿ ಬಿಸಿ ಚರ್ಚೆಗೆ ಸಾಕ್ಷಿಯಾಗುತ್ತಿರುವ ಸಮಯದಲ್ಲಿ ಮೈಸೂರಿನಲ್ಲಿ ಮುಸ್ಲಿಮರು 60 ವರ್ಷದ ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟು ಅಂತ್ಯ ಸಂಸ್ಕಾರ ನಡೆಸುವ ಮೂಲಕ...
Published: 24th April 2022 12:40 AM | Last Updated: 25th April 2022 03:20 PM | A+A A-

ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಮರು
ಮೈಸೂರು: ರಾಜ್ಯ ಕೋಮು ಘರ್ಷಣೆ ಮತ್ತು ವಿಭಜಕ ರಾಜಕಾರಣದ ಬಿಸಿ ಬಿಸಿ ಚರ್ಚೆಗೆ ಸಾಕ್ಷಿಯಾಗುತ್ತಿರುವ ಸಮಯದಲ್ಲಿ ಮೈಸೂರಿನಲ್ಲಿ ಮುಸ್ಲಿಮರು 60 ವರ್ಷದ ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟು ಅಂತ್ಯ ಸಂಸ್ಕಾರ ನಡೆಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ.
ಮುಸ್ಲಿಂ ಜನಸಂಖ್ಯೆಯ ಪ್ರಾಬಲ್ಯವಿರುವ ಗೌಸಿಯಾನಗರದ ನಿವಾಸಿಯಾಗಿದ್ದ ಹಿಂದೂ ಮಹಿಳೆ ಜಯಕ್ಕ(60) ಅವರು ಶುಕ್ರವಾರ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮಹಿಳೆ ಪತಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಜಯಕ್ಕನ ಮೃತದೇಹವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದ ಮುಸ್ಲಿಂ ಬಾಂಧವರು, ಅವರೇ ಗುಂಡಿ ತೆಗೆದು ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನಡೆಸಿದರು.
ಇದನ್ನು ಓದಿ: ಮಂಗಳೂರು ಮಸೀದಿಯೊಳಗೆ ದೇವಾಲಯ ಪತ್ತೆ ಪ್ರಕರಣ; ಕಾಮಗಾರಿಗೆ ಕೋರ್ಟ್ ತಡೆ, ಪ್ರವೇಶಕ್ಕೆ ನಿರ್ಬಂಧ!
ಜಯಕ್ಕ ಅವರು ತಮ್ಮ ಜೀವನದ ಬಹುಪಾಲು ಈ ಪ್ರದೇಶದಲ್ಲಿಯೇ ವಾಸಿಸುತ್ತಿದ್ದರು. ಆಕೆಯ ಕುಟುಂಬ ಇಲ್ಲಿರುವ ಏಕೈಕ ಹಿಂದೂ ಕುಟುಂಬವಾಗಿತ್ತು. ಆದರೆ ನಾವೆಲ್ಲರೂ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದೇವೆ. ನಾವು ಹಬ್ಬಗಳು ಮತ್ತು ಕುಟುಂಬ ಸಮಾರಂಭಗಳನ್ನು ಒಟ್ಟಿಗೆ ಆಚರಿಸುತ್ತೇವೆ. ಆಕೆಯ ಹಠಾತ್ ನಿಧನದ ಬಗ್ಗೆ ತಿಳಿದಾಗ ನಮಗೆ ಆಘಾತವಾಯಿತು. ಈ ಸಮಯದಲ್ಲಿ ನಾವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಅವರ ಶವಕ್ಕೆ ನಮ್ಮ ಹೆಗಲು ಕೊಡುವುದು ಮತ್ತು ಅವರಿಗೆ ಗೌರವಾನ್ವಿತ ವಿದಾಯ ಹೇಳುವುದು ಎಂದು ಹಿಂದೂ ಮಹಿಳೆಯ ಅಂತಿಮ ವಿಧಿವಿಧಾನದ ನೇತೃತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ತನ್ವೀರ್ ಪಾಷಾ ಹೇಳಿದ್ದಾರೆ.