ಕಸಮುಕ್ತ ತಾಲ್ಲೂಕಿಗೆ ಕಾರ್ಕಳ ಬ್ರಿಗೇಡ್ ಪಣ: ಸ್ವಚ್ಛತಾ ಅಭಿಯಾನ
ಕಾರ್ಕಳದ ರಸ್ತೆಗಳು, ಪ್ರವಾಸಿ ತಾಣಗಳು, ಪರ್ವತಗಳು, ನದಿ ದಡಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇತರ ಜೈವಿಕವಾಗಿ ಕರಗದ ವಸ್ತುಗಳನ್ನು ಅಜಾಗರೂಕತೆಯಿಂದ ಎಸೆಯುವುದರಿಂದ ತನ್ನ ಸಹಜ ಸೌಂದರ್ಯವನ್ನು ಕಳೆದುಕೊಂಡಿತ್ತು. ಇಲ್ಲಿನ ಸೌಂದರ್ಯವನ್ನು ಮರುಕಳಿಸಲು ಕೆಲವರು ಪಣತೊಟ್ಟು ಪರಿಸರ ಸ್ವಚ್ಛತೆ ಕಾಪಾಡಲು ಮುಂದಾಗಿದ್ದಾರೆ.
Published: 24th April 2022 11:33 AM | Last Updated: 25th April 2022 03:16 PM | A+A A-

ಕಾರ್ಕಳ ಬ್ರಿಗೇಡ್
ಉಡುಪಿ: ಕಾರ್ಕಳದ ರಸ್ತೆಗಳು, ಪ್ರವಾಸಿ ತಾಣಗಳು, ಪರ್ವತಗಳು, ನದಿ ದಡಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇತರ ಜೈವಿಕವಾಗಿ ಕರಗದ ವಸ್ತುಗಳನ್ನು ಅಜಾಗರೂಕತೆಯಿಂದ ಎಸೆಯುವುದರಿಂದ ತನ್ನ ಸಹಜ ಸೌಂದರ್ಯವನ್ನು ಕಳೆದುಕೊಂಡಿತ್ತು. ಇಲ್ಲಿನ ಸೌಂದರ್ಯವನ್ನು ಮರುಕಳಿಸಲು ಕೆಲವರು ಪಣತೊಟ್ಟು ಪರಿಸರ ಸ್ವಚ್ಛತೆ ಕಾಪಾಡಲು ಮುಂದಾಗಿದ್ದಾರೆ.
ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾರ್ಕಳ ತಾಲ್ಲೂಕು ಹಲವು ಪ್ರವಾಸಿಗರನ್ನು, ಯಾತ್ರಿಕರನ್ನು ಕೈಬೀಸಿ ಕರೆಯುವ ಜಾಗ. ಆದರೆ ಇಲ್ಲಿಗೆ ಬರುವವರು ಮನಸಾರೆ, ಸಿಕ್ಕಿದಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ಗಳನ್ನು ಎಸೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ 2019ರಲ್ಲಿ ಯುವಕರು ಮತ್ತು ಸಾಮಾಜಿಕ ಕಾಳಜಿಯ ಬದ್ಧತೆ ಹೊಂದಿರುವವರ ಗುಂಪು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಲು ಮುಂದೆ ಬಂತು. ಕಾರ್ಕಳದ ಸೌಂದರ್ಯವನ್ನು ಮರುಕಳಿಸಲು ಮುಂದೆಬಂದರು.
ಮುಂದಿನ ಮೂರು ವರ್ಷಗಳಲ್ಲಿ 112 ವಾರಗಳಲ್ಲಿ 224 ಗಂಟೆಗಳಲ್ಲಿ ಕಾರ್ಕಳ ತಾಲ್ಲೂಕು ಮಟ್ಟು ಪಟ್ಟಣವನ್ನು ಸ್ವಚ್ಛಗೊಳಿಸಲು ಮುಂದಾದರು.ಕಾರ್ಕಳ ತಾಲೂಕನ್ನು ಕಸಮುಕ್ತವಾಗಿಸಲು ಸಮಾನ ಮನಸ್ಕ ನಾಗರಿಕರ ಸಮೂಹ ಸ್ವಚ್ಛ ಕಾರ್ಕಳ ಬ್ರಿಗೇಡ್ನ ಸ್ವಯಂಸೇವಕರು ಶ್ರಮಿಸುತ್ತಿದ್ದಾರೆ. ಅವರು ಪ್ರತಿ ಭಾನುವಾರ ಬೆಳಿಗ್ಗೆ 6.30 ರಿಂದ 8.30 ರವರೆಗೆ ಸಾರ್ವಜನಿಕ ರಸ್ತೆಗಳು, ಹೆದ್ದಾರಿಗಳು ಮತ್ತು ಕಾಡುಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸುತ್ತಾರೆ. ಸ್ವಯಂಸೇವಕರು ತಮ್ಮ ಪಟ್ಟಣ ಮತ್ತು ತಾಲೂಕನ್ನು ಕಸದ ಹಾವಳಿಯಿಂದ ಮುಕ್ತಗೊಳಿಸಲು ವರ್ಷಕ್ಕೆ 100 ಗಂಟೆಗಳ ಕಾಲ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ.
ತಂಡವು ಇದುವರೆಗೆ 112 ಸ್ವಚ್ಛತಾ ಆಂದೋಲನಗಳನ್ನು ಆಯೋಜಿಸಿದೆ. ಸುಮಾರು 500 ಟನ್ ಕಸವನ್ನು ತೆಗೆದುಹಾಕಿದೆ. ಮೊದಲಿನಿಂದಲೂ ವೆಚ್ಚ-ಪರಿಣಾಮಕಾರಿ ಮತ್ತು ಪರಿಣಾಮಕಾರಿ ಡಸ್ಟ್ಬಿನ್ಗಳನ್ನು ನಿರ್ಮಿಸಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ಮತ್ತು ಸುತ್ತಮುತ್ತಲಿನ 100 ಕ್ಕೂ ಹೆಚ್ಚು ಕೈಯಿಂದ ಮಾಡಿದ ಡಸ್ಟ್ಬಿನ್ಗಳನ್ನು ಸ್ಥಾಪಿಸಿದ್ದಾರೆ. ಶಾಲೆಗಳು, ಆಟೋರಿಕ್ಷಾ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಅನೇಕ ಡಸ್ಟ್ಬಿನ್ಗಳನ್ನು ಅಳವಡಿಸಲಾಗಿದೆ.
ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ಮತ್ತು ಯುವ ಬ್ರಿಗೇಡ್ ತಂದ ಸ್ವಚ್ಛ ಕ್ರಾಂತಿ ಕಾರ್ಕಳದಲ್ಲಿ ಪರಿವರ್ತನೆ ತರಲು ತಂಡಕ್ಕೆ ಸ್ಫೂರ್ತಿ ನೀಡಿತು ಎಂದು ಸ್ವಚ್ಛ ಕಾರ್ಕಳ ಬ್ರಿಗೇಡ್ನ ಸದಸ್ಯ ಎಂ.ಕೆ.ವಿಪುಲ್ತೇಜ್ ನ್ಯೂ ಸಂಡೆ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಸ್ವಚ್ಛತಾ ಅಭಿಯಾನದ ಹಿಂದಿನ ದಿನವಾದ ಶನಿವಾರ, ಗುಂಪಿನ ಸದಸ್ಯರಿಗೆ ಕೈಗವಸುಗಳು, ಕಸ ಸಂಗ್ರಹ ಚೀಲಗಳು, ಶುಚಿಗೊಳಿಸುವ ಉಪಕರಣಗಳು, ಪ್ರಥಮ ಚಿಕಿತ್ಸಾ ಕಿಟ್ಗಳು, ಡಸ್ಟ್ಬಿನ್ಗಳು, ಜಾಗೃತಿ ಪೋಸ್ಟರ್ಗಳು ಮತ್ತು ಭಾನುವಾರದ ಸ್ವಚ್ಛತಾ ಅಭಿಯಾನಕ್ಕೆ ಅಗತ್ಯವಿರುವ ಇತರ ವಸ್ತುಗಳನ್ನು ಪಡೆಯುವಂತಹ ಕೆಲಸಗಳನ್ನು ವಹಿಸಲಾಗುತ್ತದೆ ಎಂದು ತಿಳಿಸಿದರು.
ಪೊಲೀಸರು, ಮಾಜಿ ಸೈನಿಕರು, ಪ್ರಾಧ್ಯಾಪಕರು, ಶಿಕ್ಷಕರು, ವಕೀಲರು, ವೈದ್ಯರು, ಎಂಜಿನಿಯರ್ಗಳು, ವಾಣಿಜ್ಯೋದ್ಯಮಿಗಳು, ವಿದ್ಯಾರ್ಥಿಗಳು, ಕೃಷಿಕರು, ಛಾಯಾಗ್ರಾಹಕರು, ಸ್ವಚ್ಛ ಕಾರ್ಕಳ ಬ್ರಿಗೇಡ್ನ ಸ್ವಯಂಸೇವಕರಾಗಿ ಕೆಲಸ ಮಾಡುವ ಇತರ ವೃತ್ತಿಪರರು ಇದ್ದಾರೆ. ಶ್ರೀಮಂತ ಭಾರತೀಯ ಪರಂಪರೆ, ತುಳು ಸಂಸ್ಕೃತಿ, ಸ್ವಚ್ಛ ಭಾರತದ ಮಹತ್ವ ಮತ್ತು ಪರಿಸರ ಸಂರಕ್ಷಣೆಯನ್ನು ಬಿಂಬಿಸುವ ಸಂದೇಶಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಳೆಯ ಮತ್ತು ಶಿಥಿಲಗೊಂಡ ಗೋಡೆಗಳನ್ನು ಪರಿವರ್ತಿಸುವ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸುಂದರಗೊಳಿಸುವ ಕಾರ್ಯಕ್ರಮವನ್ನು ಬ್ರಿಗೇಡ್ ಪ್ರಾರಂಭಿಸಿದೆ.