ಬೆಂಗಳೂರು: ರೈಲಿನ ಹಳಿ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ-ಮಗಳನ್ನು ರಕ್ಷಿಸಿದ ಆರ್ ಪಿಎಫ್ ಪೊಲೀಸರು!
ಕೃಷ್ಣರಾಜಪುರಂ ರೈಲು ನಿಲ್ದಾಣದ ಬಳಿ ರೈಲು ಹಳಿಗಳಿಗೆ ಅಡ್ಡಲಾಗಿ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮತ್ತು ಆಕೆಯ ಮಗಳನ್ನು ರೈಲ್ವೆ ರಕ್ಷಣಾ ಪಡೆ ಕಾನ್ಸ್ಟೆಬಲ್ಗಳು ರಕ್ಷಿಸಿದ್ದಾರೆ.
Published: 26th April 2022 01:08 PM | Last Updated: 26th April 2022 02:05 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೃಷ್ಣರಾಜಪುರಂ ರೈಲು ನಿಲ್ದಾಣದ ಬಳಿ ರೈಲು ಹಳಿಗಳಿಗೆ ಅಡ್ಡಲಾಗಿ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮತ್ತು ಆಕೆಯ ಮಗಳನ್ನು ರೈಲ್ವೆ ರಕ್ಷಣಾ ಪಡೆ ಕಾನ್ಸ್ಟೆಬಲ್ಗಳು ರಕ್ಷಿಸಿದ್ದಾರೆ.
ತನ್ನ ಸೊಸೆಯ ಕಿರುಕುಳದಿಂದ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಗಿ 45 ವರ್ಷದ ಮಹಿಳೆ ಆರೋಪಿಸಿದ್ದಾರೆ. ಭಾನುವಾರ ಬೆಳಗ್ಗೆ 7.35ಕ್ಕೆ ಈ ಘಟನೆ ನಡೆದಿದ್ದು, ಎಸ್ಬಿಸಿ-ಮಾರಿಕುಪ್ಪಂ ಎಂಇಎಂಯು ರೈಲು ಬರಲು ಕೆಲವೇ ನಿಮಿಷಗಳ ಮೊದಲು ಬೀಟ್ ಕಾನ್ಸ್ಟೆಬಲ್ಗಳಾದ ಕುಲದೀಪ್ ಕುಮಾರ್ ಮತ್ತು ಹವಾ ಸಿಂಗ್ ನಿಲ್ದಾಣ ಮತ್ತು ರೈಲ್ವೇ ಹಳಿಗಳಲ್ಲಿ ಗಸ್ತು ತಿರುಗುತ್ತಿದ್ದಾಗ, ಇಬ್ಬರೂ ಅಡ್ಡಲಾಗಿ ಮಲಗಿರುವುದನ್ನು ಅವರು ಗಮನಿಸಿದರು. ತಾಯಿ ಮತ್ತು ಮಗಳ ತಲೆಯು ಒಂದು ಹಳಿ ಮೇಲಿತ್ತು. ತಾಯಿ ತನ್ನ 14 ವರ್ಷದ ಮಗಳನ್ನು ಬಲವಂತವಾಗಿ ರೈಲಿನ ಮೇಲೆ ಹಿಡಿದಿರುವುದು ಕಂಡುಬಂದಿತ್ತು ಎಂದು ಮೂಲಗಳು ತಿಳಿಸಿವೆ. ಈ ಇಬ್ಬರು ಬಿಹಾರದ ನಳಂದ ಗ್ರಾಮದವರಾಗಿದ್ದಾರೆ.
ಕಾನ್ಸ್ಟೇಬಲ್ಗಳು ಟ್ರ್ಯಾಕ್ನಿಂದ ಇಳಿಯುವಂತೆ ಮನವಿ ಮಾಡಿದರು, ಆದರೆ ಅವರಿಬ್ಬರು ನಿರಾಕರಿಸಿದರು. ಪೇದೆಗಳಉ ಮಾರಿಕುಪ್ಪಂ ರೈಲು (ರೈಲು ಸಂಖ್ಯೆ. 06396) ಸಮೀಪಿಸುತ್ತಿರುವುದನ್ನು ನೋಡಿದರು ಮತ್ತು ಇಬ್ಬರು ಚಲಿಸಲು ನಿರಾಕರಿಸಿದಾಗ, ಪೊಲೀಸರು ಅವರನ್ನು ಬಲವಂತವಾಗಿ ಎಳೆದೊಯ್ದು ಜೀವಗಳನ್ನು ಉಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಳಿಕ ಕೌನ್ಸೆಲಿಂಗ್ ಮಾಡಿ ವಿಚಾರಿಸಿದಾಗ ಮಹಿಳೆ ತಾನು ವಿಧವೆ ಎಂದು ಹೇಳಿದ್ದಾಳೆ. ತನ್ನ ಮಗನಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು ಆಕೆಯ ಸೊಸೆ, ಮನೆಯ ಸಣ್ಣ ವಿಷಯಗಳಿಗೆ ತನಗೆ ಮತ್ತು ಮಗಳಿಗೆ ಕಿರುಕುಳ ನೀಡುತ್ದಿದಳು, ಹೀಗಾಗಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತನ್ನ ಸೊಸೆ ವಿರುದ್ಧ ಪ್ರಕರಣ ದಾಖಲಿಸಲು ಮಹಿಳೆಗೆ ಸಹಾಯ ಮಾಡಲು ಆರ್ಪಿಎಫ್ ಬಯಸಿದ್ದರು, ಆದರೆ ಮಹಿಳೆ ದೂರು ದಾಖಲಿಸಲು ಬಯಸಲಿಲ್ಲ. ಕೌನ್ಸೆಲಿಂಗ್ಗಾಗಿ ಇಬ್ಬರನ್ನು ಎನ್ಜಿಒಗೆ ಹಸ್ತಾಂತರಿಸಲಾಗಿದೆ.