ಹಣವಿಲ್ಲದೆ ಪ್ರಯಾಣಿಸಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ: ಜನರಿಂದ ಭಾರೀ ಮೆಚ್ಚುಗೆಗೆ ಪಾತ್ರನಾದ ಕೊಡಗು ಯುುವಕ!
ಕೊಡಗು ಮೂಲದ ಯುವಕನೊಬ್ಬ ಒಂದು ರುಪಾಯಿ ಖರ್ಚು ಮಾಡದೆ ಸ್ಥಳೀಯ ಜನರ ಸಹಕಾರ, ನೆರವಿನೊಂದಿಗೆ ಪ್ರಯಾಣಿಸಿ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಿ ಭಾರೀ ಜನಪ್ರಿಯತೆ ಗಳಿಸುತ್ತಿದ್ದಾನೆ.
Published: 29th April 2022 12:12 PM | Last Updated: 29th April 2022 01:36 PM | A+A A-

ವಿನಯ್ ಕುಮಾರ್
ಮಡಿಕೇರಿ: ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಜನರು ನಂತರ ಅಲ್ಲಿನ ವೈಶಿಷ್ಟ್ಯತೆಗಳ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಜನರು, ಸ್ನೇಹಿತರಿಗೆ ಮಾಹಿತಿ ನೀಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಕೊಡಗು ಮೂಲದ ಯುವಕನೊಬ್ಬ ಒಂದು ರುಪಾಯಿ ಖರ್ಚು ಮಾಡದೆ ಸ್ಥಳೀಯ ಜನರ ಸಹಕಾರ, ನೆರವಿನೊಂದಿಗೆ ಪ್ರಯಾಣಿಸಿ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಿ ಭಾರೀ ಜನಪ್ರಿಯತೆ ಗಳಿಸುತ್ತಿದ್ದಾನೆ.
ಕೊಡಗು ಮೂಲಕ ಯುವಕ ವಿನಯ್ ಕುಮಾರ್ ಎಂ.ಕಾಮ್ ಪದವೀದರರಾಗಿದ್ದು, ಕಂಪನಿಯೊಂದರಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದಾರೆ, ಪ್ರಸ್ತುತ ವಿನಯ್ ಅವರು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದು, ವಾರಾಂತ್ಯದ ದಿನಗಳಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದರು. ಈ ವೇಳೆ ಒಂದು ರೂಪಾಯಿ ಹಣ ಖರ್ಚು ಮಾಡದೆ ಪ್ರವಾಸ ಕೈಗೊಳ್ಳಬೇಕೆಂಬ ಬಯಕೆ ಇವರಲ್ಲಿ ಹುಟ್ಟಿದೆ.
ಇದನ್ನೂ ಓದಿ: ಚನ್ನಗಿರಿ: ಮನೆಗೆ 'ಶ್ರೀ ನರೇಂದ್ರ ಮೋದಿ ನಿಲಯ' ಹೆಸರಿಟ್ಟ ಅಭಿಮಾನಿ!
ಹಣವಿಲ್ಲದೆ ದೇಶ ಸುತ್ತುವುದೇ ವಿನಯ್ ಆಸೆಯಾಗಿದ್ದು, ತಮ್ಮ ಆಸೆಯಂತೆ ನಯಾ ಪೈಸೆ ಖರ್ಚು ಮಾಡದೆ ದೇಶ ಸುತ್ತು ಆರಂಬಿಸಿದ್ದಾರೆ. ಇದರ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹಾಕುತ್ತಿದ್ದು, ವಿಡಿಯೋಗೆ ಜನರಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಭಾರೀ ಮೊತ್ತದ ಹಣದೊಂದಿಗೆ ಎಲ್ಲರೂ ಪ್ರಯಾಣಿಸುತ್ತಾರೆ. ಆದರೆ, ಹಣವಿಲ್ಲದೆ ಪ್ರಯಾಣಿಸುವುದನ್ನು ನಾನು ಬಯಸಿದ್ದೆ. ಕಂಡ ಕನಸ್ಸಿನಂತೆಯೇ ಮೊದಲ ಪ್ರಯಾಣ ಶೃಂಗೇರಿಯಿಂದ ಆರಂಭವಾಗಿತ್ತು. ವ್ಯಕ್ತಿಯೊಬ್ಬರು ಒಂದು ರೂಪಾಯಿಯನ್ನೂ ಪಡೆಯದೆಯೇ ನನ್ನನ್ನು ಶೃಂಗೇರಿಗೆ ಕರೆದುಕೊಂಡು ಹೋಗಿದ್ದರು. ಮಡಿಕೇರಿಯಿಂದ ಶನಿವಾರ ಬೆಳಿಗ್ಗೆ ಹೊರಟು ಹೆದ್ದಾರಿ ತಲುಪಿದ್ದೆ. ನಂತರ ಅಲ್ಲಿಂದ ಬೈಕ್, ಟ್ರಕ್, ಕಾರು, ಟ್ಯಾಕ್ಸಿ ಹಾಗೂ ಎಲೆಕ್ಟ್ರಿಕ್ ಬೈಕ್ ಗಳಲ್ಲಿ ತೆರಳುತ್ತಿದ್ದ ಜನರಿಂದ ಡ್ರಾಪ್ ಪಡೆದುಕೊಂಡು ಶೃಂಗೇರಿ ತಲುಪಿದ್ದೆ.
ಇದನ್ನೂ ಓದಿ: ಮೈಸೂರು: ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟು ಅಂತ್ಯಸಂಸ್ಕಾರ ಮಾಡಿದ ಮುಸ್ಲಿಮರು
ಶಂಗೇರಿಯಿಂದ ಹುಟ್ಟೂರಿಗೆ ಮರಳುವಾಗಲೂ ಜನರಿಂದ ಡ್ರಾಪ್ ಪಡೆದುಕೊಂಡಿದೆ ಈ ಮಧ್ಯೆ ಉಚಿತವಾಗಿಯೇ ಉಪಾಹಾರ, ಊಟವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ. ಇದರ ವಿಡಿಯೋ ಇಲ್ಲಿನ ನಾಗರಿಕರ ಆತಿಥ್ಯ ಮತ್ತು ಸ್ವಾಗತದ ಸ್ವಭಾವವನ್ನು ಎಷ್ಟರ ಮಟ್ಟಿಗೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ವಿನಯ್ ಅವರು ಹೇಳಿದ್ದಾರೆ.