ಅಂತಾರಾಷ್ಟ್ರೀಯ ನೃತ್ಯ ದಿನ ವಿಶೇಷ: ಜಗತ್ತಿನ ಟಾಪ್ 5 ಅತ್ಯಂತ ಜನಪ್ರಿಯ ನೃತ್ಯ ಪ್ರಕಾರಗಳು!
ಪ್ರಪಂಚದಾದ್ಯಂತ ಪ್ರತಿ ವರ್ಷ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ. ಮಾನವ ನಾಗರಿಕತೆಯ ತಳಹದಿಯಿಂದಲೂ ನೃತ್ಯವು ಅವರ ಜೀವನದ ಒಂದು ಭಾಗವಾಗಿದೆ.
Published: 30th April 2022 04:39 PM | Last Updated: 30th April 2022 05:20 PM | A+A A-

ಸಂಗ್ರಹ ಚಿತ್ರ
ಪ್ರಪಂಚದಾದ್ಯಂತ ಪ್ರತಿ ವರ್ಷ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ. ಮಾನವ ನಾಗರಿಕತೆಯ ತಳಹದಿಯಿಂದಲೂ ನೃತ್ಯವು ಮಾನವನ ಜೀವನದ ಒಂದು ಭಾಗವಾಗಿದೆ. ಅಂದಿನಿಂದ ಇದು ಪ್ರಪಂಚದಾದ್ಯಂತದ ವಿವಿಧ ಸಮುದಾಯಗಳಲ್ಲಿ ವಿಭಿನ್ನ ರೂಪಗಳಲ್ಲಿ ಹೊರಹೊಮ್ಮಿದೆ. ಜೊತೆಗೆ ವಿಕಸನಗೊಂಡಿದ್ದು ಅಂತಿಮವಾಗಿ ಪ್ರಸಿದ್ಧ ನೃತ್ಯ ಶೈಲಿಗಳು ಮತ್ತು ರೂಪಗಳಿಗೆ ಜನ್ಮ ನೀಡಿದೆ. ಜಾಗತಿಕವಾಗಿ, ಪ್ರತಿಯೊಂದು ಸಂಸ್ಕೃತಿಯ ಭಾಗವಾಗಿರುವ ನೃತ್ಯವು ಆಧ್ಯಾತ್ಮಿಕತೆಗೆ ಮತ್ತು ಮಾನಸಿಕ, ದೈಹಿಕ ಆರೋಗ್ಯದ ಚಿಕಿತ್ಸಕ ಚಟುವಟಿಕೆಯಾಗಿದೆ.
ಪ್ರಪಂಚದಾದ್ಯಂತ ಐದು ಅತ್ಯಂತ ಜನಪ್ರಿಯ ನೃತ್ಯ ಪ್ರಕಾರಗಳ ಪಟ್ಟಿ ಇಲ್ಲಿದೆ!
ಕಥಕ್
ಕಥಕ್ ಒಂದು ಪ್ರಸಿದ್ಧ ನೃತ್ಯ ಶೈಲಿಯಾಗಿದ್ದು, ಇದು ದೀರ್ಘಕಾಲದಿಂದಲೂ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಇದು ಭಾರತೀಯ ಸಾಂಪ್ರದಾಯಿಕ ನೃತ್ಯ ರಚನೆಗಳಲ್ಲಿ ಒಂದಾಗಿದೆ. ಕಥಕ್ ಪದವನ್ನು ಭಾರತೀಯ ವೈದಿಕ ಭಾಷೆಯಾದ ಸಂಸ್ಕೃತದ ಎರಡು ವಿಭಿನ್ನ ಅಭಿವ್ಯಕ್ತಿಗಳಿಂದ ತೆಗೆದುಕೊಳ್ಳಲಾಗಿದೆ. 'ಕಥಾ' ಮತ್ತು ಕಥಾಕರ್. ಇದರಲ್ಲಿ ಕಥಾವು ಕಥೆಯನ್ನು ಸೂಚಿಸುತ್ತದೆ. ಕಥಾಕರ್ ಎಂದರೆ ಕಥೆ ಹೇಳುವುದು. ಕಥಕ್ ಎಂದು ಕರೆಯಲ್ಪಡುವ ಉತ್ತರ ಭಾರತದ ಸಾಂಪ್ರದಾಯಿಕ ಕಥಾರ್ಸ್ ರಿಂದ ಪ್ರಾರಂಭವಾಗಿದೆ. ಕಥಾರ್ ಗಳು ತಮ್ಮ ಕಣ್ಣುಗಳು, ಮುಖ, ಕೈ ಮತ್ತು ಪಾದಗಳ ಮೂಲಕ ಅಭಿವ್ಯಕ್ತಗಳನ್ನು ವ್ಯಕ್ತಪಡಿಸುತ್ತಾರೆ.
ಸಾಲ್ಸಾ
ಸಾಲ್ಸಾ ನೃತ್ಯವು 1960ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಹುಟ್ಟಿಕೊಂಡಿತು. ಸಾಲ್ಸಾ ಎಂಬುದು ಪಾಶ್ಚಿಮಾತ್ಯ ನೃತ್ಯ ಶೈಲಿಯಾಗಿದ್ದು, ಇದನ್ನು ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳು ಜೊತೆಯಾಗಿ ಪ್ರದರ್ಶಿಸುತ್ತಾರೆ. ಕಲಾವಿದನ ಸಾಹಸದಿಂದ ಪಲ್ಲಟಗಳನ್ನು ಪಡೆಯುತ್ತದೆ. ಒಬ್ಬರು ಮತ್ತೊಬ್ಬರನ್ನು ಎತ್ತಿ ಆಡುವ ನೃತ್ಯವಾಗಿದೆ.
ಬ್ಯಾಲೆ
ಬ್ಯಾಲೆ ನೃತ್ಯವು ಮೂಲತಃ ಹದಿನೈದನೇ ಶತಮಾನದಲ್ಲಿ ಇಟಲಿಯಲ್ಲಿ ಪ್ರಾರಂಭವಾಯಿತು. ನಂತರ ಇದು ಫ್ರಾನ್ಸ್ ಮತ್ತು ರಷ್ಯಾದಲ್ಲಿ ನೃತ್ಯ ರೂಪವಾಗಿ ಮಾರ್ಪಟ್ಟಿತು. ಪರಿಪೂರ್ಣ ಬ್ಯಾಲೆ ನರ್ತಕಿಯಾಗಲು ಅಪಾರ ಪ್ರಮಾಣದ ಶ್ರಮ ಮತ್ತು ವರ್ಷಗಳನ್ನು ತೆಗೆದುಕೊಳ್ಳುತ್ತದೆ. 'ಬ್ಯಾಲೆ' ಎಂಬ ಪದವು ನೃತ್ಯವನ್ನು ಸೂಚಿಸುತ್ತದೆ. ಈ ನೃತ್ಯ ರೂಪವು ಲಘು ಶಾಸ್ತ್ರೀಯ ಸಂಗೀತದೊಂದಿಗೆ ನೃತ್ಯ ಸಂಯೋಜನೆ ಮತ್ತು ಕಲೆಯ ಸಂಯೋಜನೆಯಾಗಿದೆ.
ಬೆಲ್ಲಿ ಡ್ಯಾನ್ಸ್
ಈ ನೃತ್ಯ ಶೈಲಿಯು ಈಜಿಪ್ಟ್ನಲ್ಲಿ ಹುಟ್ಟಿಕೊಂಡಿದೆ. ನೃತ್ಯದ ಅಭಿವ್ಯಕ್ತಿಶೀಲ ಶೈಲಿಯಾಗಿರುವುದರಿಂದ, ಇದು ಮಧ್ಯಪ್ರಾಚ್ಯದ ನೃತ್ಯವಾಗಿದೆ. ವೇಷಭೂಷಣಗಳು ಮತ್ತು ಅದರೊಂದಿಗೆ ಬರುವ ನೃತ್ಯದ ಶೈಲಿಯಿಂದಾಗಿ ಇದು ಜನಪ್ರಿಯವಾಗಿದೆ. ಪ್ರಸಿದ್ಧ ಲ್ಯಾಟಿನ್ ಸೂಪರ್ಸ್ಟಾರ್ ಷಕೀರಾ ಎಂಬುವರು ಸಂಗೀತದ ವೀಡಿಯೊಗಳಲ್ಲಿ ಈ ನೃತ್ಯ ಪ್ರಕಾರದಲ್ಲಿ ತೊಡಗಿಸಿಕೊಂಡ ನಂತರ ಈ ನೃತ್ಯದ ರೂಪವು ಬೆಳಕಿಗೆ ಬಂದಿತು.
ಹಿಪ್-ಹಾಪ್
ಹಿಪ್-ಹಾಪ್ ಎಂಬುದು ನೃತ್ಯ ಶೈಲಿಯ ಒಂದು ರೂಪವಾಗಿದ್ದು, ಇದು ವ್ಯಕ್ತಿಗಳು ಹಿಪ್-ಹಾಪ್ ಸಂಗೀತದೊಂದಿಗೆ ಪ್ರದರ್ಶಿಸಲಾಗುತ್ತದೆ. ಇದನ್ನು ಬ್ರೇಕ್-ಡ್ಯಾನ್ಸ್ ಎಂದು ಕರೆಯಲಾಗುತ್ತದೆ. ಇದು 1970ರಲ್ಲಿ ಪ್ರಾರಂಭವಾಯಿತು. ಅಮೆರಿಕಾದ ನೃತ್ಯ ತಂಡಗಳು ಇದನ್ನು ಪ್ರಸಿದ್ಧಗೊಳಿಸಿದವು. ಈ ನೃತ್ಯ ಶೈಲಿಯು ಪ್ರಸ್ತುತ ದಿನಗಳಲ್ಲಿ ಅತ್ಯಂತ ಜನಪ್ರಿಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ.