ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದ ಒಡಿಶಾದ ವಯೋವೃದ್ಧ ಜೋಡಿಗೆ ಪ್ರೀತಿ ಅಂಕುರ; ಇಳಿವಯಸ್ಸಿನಲ್ಲಿ ಮದುವೆ
ಮಹಾಕಲಪದ ಬ್ಲಾಕ್‌ನ ಗೊಗುವಾ ಗ್ರಾಮದ 70 ವರ್ಷದ ಶಕ್ತಿಪಾದ ಮಿಶ್ರಾ ಮತ್ತು 65 ವರ್ಷದ ತೇಜಸ್ವಿನಿ ಮಂಡಲ್ ಅವರಿಗೆ ಇಳಿ ವಯಸ್ಸಿನಲ್ಲಿ ಪ್ರೇಮಾಂಕುರವಾಗಿದೆ. ಅದು ಹೇಗೆ ಎನ್ನುವುದನ್ನು ತಿಳಿಯಲು ಈ ಸ್ಟೋರಿಯನ್ನು ಓದಿ.
Published: 08th December 2022 03:50 PM | Last Updated: 08th December 2022 05:08 PM | A+A A-

ಶಕ್ತಿಪಾದ ಮಿಶ್ರಾ ಮತ್ತು ತೇಜಸ್ವಿನಿ
ಕೇಂದ್ರಪಾರ: ಮಹಾಕಲಪದ ಬ್ಲಾಕ್‌ನ ಗೊಗುವಾ ಗ್ರಾಮದ 70 ವರ್ಷದ ಶಕ್ತಿಪಾದ ಮಿಶ್ರಾ ಮತ್ತು 65 ವರ್ಷದ ತೇಜಸ್ವಿನಿ ಮಂಡಲ್ ಅವರಿಗೆ ಇಳಿ ವಯಸ್ಸಿನಲ್ಲಿ ಪ್ರೇಮಾಂಕುರವಾಗಿದೆ. ಅದು ಹೇಗೆ ಎನ್ನುವುದನ್ನು ತಿಳಿಯಲು ಈ ಸ್ಟೋರಿಯನ್ನು ಓದಿ.
ತೇಜಸ್ವಿನಿ ಅವರ ಗಂಡ ನಾಲ್ಕು ವರ್ಷಗಳ ಹಿಂದಷ್ಟೇ ಮೃತಪಟ್ಟಿದ್ದರು. ಇದರಿಂದಾಗಿ ತೇಜಸ್ವಿನಿ ಅವರು ಪಡುತ್ತಿರುವ ಕಷ್ಟಗಳನ್ನು ತಿಳಿದ ನಂತರ ತನ್ನ ಮಕ್ಕಳಿಂದಲೂ ನಿರ್ಲಕ್ಷ್ಯಕ್ಕೊಳಗಾಗಿದ್ದ ವೃದ್ಧ ಶಕ್ತಿಪಾದ ಎಂಬಾತ ತೇಜಸ್ವಿನಿಯವರಲ್ಲಿ ಪ್ರೀತಿಯನ್ನು ಕಂಡರು. ತೇಜಸ್ವಿನಿಗೆ ಮೂವರು ಪುತ್ರರು. ಅವರು ಆಕೆಯನ್ನು ಹಳ್ಳಿಯಲ್ಲೇ ಬಿಟ್ಟು ನಗರಗಳಿಗೆ ಹೋಗಿದ್ದರು. ತೇಜಸ್ವಿನಿ ಅವರು ಹಾತ್ ಗ್ರಾಮದಲ್ಲಿ ಮಣ್ಣಿನ ಮಡಕೆಗಳನ್ನು ಮಾರಾಟ ಮಾಡುವ ಮೂಲಕ ಜೀವ ಸಾಗಿಸುತ್ತಿದ್ದರು.
ಕೆಲವು ವರ್ಷಗಳಿಂದ ಸಂಗಾತಿಯನ್ನು ಹುಡುಕುತ್ತಿದ್ದ ಶಕ್ತಿಪಾದ ಅವರು ಕಳೆದ ವಾರ ತೇಜಸ್ವಿನಿ ಅವರನ್ನು ಮದುವೆಯಾಗುವಂತೆ ಕೇಳಿದ್ದರು. ಮತ್ತು ಅದಕ್ಕೆ ಆಕೆ ಒಪ್ಪಿಗೆ ನೀಡಿದರು. ಹೀಗಾಗಿ ಡಿಸೆಂಬರ್ 5 ರಂದು ಗ್ರಾಮದ ಜಗನ್ನಾಥ ದೇವಸ್ಥಾನದಲ್ಲಿ ಅರ್ಚಕರ ಸಮ್ಮುಖದಲ್ಲಿ ಇಬ್ಬರೂ ವಿವಾಹವಾದರು.
ತೇಜಸ್ವಿನಿ ನನ್ನ ಪ್ರಸ್ತಾಪವನ್ನು ಸಂತೋಷದಿಂದ ಒಪ್ಪಿಕೊಂಡರು ಮತ್ತು ನಾವು ಮದುವೆಯಾದೆವು ಎಂದು ಶಕ್ತಿಪಾದ ಹೇಳಿದರು.
ಇದನ್ನೂ ಓದಿ: 10.5 ವರ್ಷ, 65 ರಾಷ್ಟ್ರ: ಕೇರಳಕ್ಕೆ ಆಗಮಿಸಿದ ಅಮೆರಿಕ ದಂಪತಿಯ ಹನಿಮೂನ್ ಪ್ರವಾಸಕ್ಕೆ ಕೊನೆಯೇ ಇಲ್ಲ!
ಮದುವೆಯ ಛಾಯಾಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ದಂಪತಿಗೆ ಪ್ರೀತಿ ಮತ್ತು ಅಭಿನಂದನೆಗಳ ಸಂದೇಶಗಳ ಸುರಿಮಳೆಗೈಯುತ್ತಿದ್ದಾರೆ.
'ಸಮಾನ ಮನಸ್ಕಳನ್ನು ಮರುಮದುವೆ ಮಾಡಿಕೊಳ್ಳುವ ಮೂಲಕ ಶಕ್ತಿಪಾದ ಸರಿಯಾದ ಕೆಲಸವನ್ನು ಮಾಡಿದರು. ಈಗ ಶಕ್ತಿಪಾದ ಅವರ ನಿಧನದ ನಂತರ ಅವರ ಪತ್ನಿಯೇ ಅವರ ಆಸ್ತಿಗೆ ವಾರಸುದಾರರಾಗುತ್ತಾರೆ' ಎಂದು ಕೇಂದ್ರಪಾರದ ವಕೀಲ ಸುಭಾಷ್ ದಾಸ್ ಹೇಳಿದರು.
ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007 ರ ಸೆಕ್ಷನ್ 7 ಮತ್ತು 15 ರ ಪ್ರಕಾರ, ತಮ್ಮ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿದೆ. ಗಂಡುಮಕ್ಕಳಿಗೆ ತಮ್ಮ ತಂದೆ-ತಾಯಿಯನ್ನು ಹಿಂಸಿಸಲು ಅಥವಾ ಮನೆಯಿಂದ ಹೊರಹಾಕಲು ಯಾವುದೇ ಹಕ್ಕಿಲ್ಲ. ಹಿರಿಯ ನಾಗರಿಕರೂ ಸಹ ಅಗತ್ಯವಿದ್ದಲ್ಲಿ ವಯಸ್ಕ ಮಕ್ಕಳನ್ನು ಮನೆಯಿಂದ ಹೊರಹಾಕಲು ಕಾನೂನಿನ ಅಡಿಯಲ್ಲಿ ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾರೆ.