
ಡಾಲ್ಫಿನ್ ಜೊತೆ ವಿಲ್ ಫ್ರೆಡ್ ಮತ್ತು ಆಂಜೆಲ್
ಕೊಚ್ಚಿ: ಕೇರಳದ ಮೂಲಂಕುಳಿ ಬೀಚಿನಲ್ಲಿ ಈಜಾಡಲೆಂದು ತೆರಳಿದ್ದ ವಿಲ್ ಫ್ರೆಡ್ ಎಂಬುವವರಿಗೆ ಮರಳ ತೀರದಲ್ಲಿ ಡಾಲ್ಫಿನ್ ಕಂಡಿತ್ತು. ಗಾಯಗೊಂಡಿದ್ದ ಡಾಲ್ಫಿನ್ ನೋವಿನಿಂದ ನರಳುತ್ತಿತ್ತು.
ಇದನ್ನೂ ಓದಿ: ಕಾಶ್ಮೀರದಲ್ಲಿ ಮಂಜುಗಡ್ಡೆಯಿಂದ ನಿರ್ಮಿತ ಈಗ್ಲೂ ಕೆಫೆ: ಮಂಜುಗಡ್ಡೆಯ ಟೇಬಲ್ ಕುರ್ಚಿಗಳು
ಒಡನೆಯೇ ವಿಲ್ ಫ್ರೆಡ್ ಮತ್ತವರ ಪುತ್ರಿ ಆಂಜೆಲ್ ಡಾಲ್ಫಿನ್ ರಕ್ಷಣೆಗೆ ಮುಂದಾದರು. ಮೀನುಗಾರಿಕಾ ದೋಣಿ ತಗುಲಿದಕ್ಕೆ ಗಾಯವಾಗಿದೆ ಎಂಬುದು ವಿಲ್ ಫ್ರೆಡ್ ಊಹೆ.
ಗಾಯಗೊಂಡ ಡಾಲ್ಫಿನ್ ಇತರೆ ಮೀನುಗಳ ಭಯದಿಂದ ಸಮುದ್ರಕ್ಕೆ ಇಳಿಯದೆ ತೀರಕ್ಕೆ ಬಂದಿತ್ತು. ನಂತರ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸಮುದ್ರಕ್ಕೆ ಬಿಟ್ಟರೂ ಡಾಲ್ಫಿನ್ ಮತ್ತೆ ಮರಳಿ ತೀರಕ್ಕೆ ಬಂದುಬಿಡುತ್ತಿತ್ತು.
ಇದನ್ನೂ ಓದಿ: ಕೇರಳ: ದೇವಾಲಯಕ್ಕೆ ರಸ್ತೆ ನಿರ್ಮಿಸಲು ಮುಸ್ಲಿಮರಿಂದ ಭೂಮಿ ದಾನ!
ಅದಕ್ಕೆ ವಿಲ್ ಫ್ರೆಡ್ ಒಂದು ಉಪಾಯ ಹೂಡಿದರು. ಅವರು ಡಾಲ್ಫಿನ್ ಅನ್ನು ಒಂದು ಕೈಯಲ್ಲಿ ಹಿಡಿದುಕೊಂಡು 1 ಕಿ.ಮೀ. ವರೆಗೂ ಈಜಿದರು. ಅಷ್ಟು ದೂರ ಹೋದ ಮೇಲೆ ಅವರು ಡಾಲ್ಫಿನ್ ಅನ್ನು ಸಮುದ್ರಕ್ಕೆ ಬಿಟ್ಟರು.
ಡಾಲ್ಫಿನ್ ಮತ್ತೆ ಹಿಂತಿರುಗಿ ತೀರದ ಕಡೆ ಬರಲಿಲ್ಲ. ಈಜಿಕೊಂಡು ಸಮುದ್ರದಲ್ಲಿ ಮರೆಯಾಯಿತು. ಈಗ ಅಪ್ಪ ಮಗಳ ಡಾಲ್ಫಿನ್ ರಕ್ಷಣೆ ಘಟನೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ಬೆಳಿಗ್ಗೆ 7 ರಿಂದ 10 ಗಂಟೆ ತನಕ ಪೊಲೀಸ್ ಠಾಣೆಯಲ್ಲಿ ಟೀಚರ್: 10 ರ ಮೇಲೆ ಸಬ್ ಇನ್ಸ್ ಪೆಕ್ಟರ್