
ಕ್ರಿಸ್ಟೀನಾ- ಜಾನ್ಸನ್
ಕೊಚ್ಚಿ: ಕ್ರಿಸ್ಟೀನಾ ಸೆಮಸ್ ಕೈಟ್ ಲಿಥುವೇನಿಯಾ ಪ್ರಜೆ. ಆಕೆ ಪ್ರೀತಿಯಲ್ಲಿ ಬಿದ್ದಿದ್ದು ಕೇರಳದ ಅಲಪ್ಪುಳ ನಿವಾಸಿ ಜಾನ್ಸನ್ ವರ್ಗೀಸ್ ಜೊತೆ. ಅವರ ಪ್ರೇಮ ವಿವಾಹಕ್ಕೆ ತಡೆಗೋಡೆಯಾಗಿದ್ದು ಜಾತಿಯಲ್ಲ, ದೇಶವಲ್ಲ ಕಮ್ಯುನಿಸಂ ಸಿದ್ಧಾಂತ.
ಇದನ್ನೂ ಓದಿ: ಪುದುಚೆರಿ ಬಾಕ್ಸಿಂಗ್ ಟೂರ್ನಿಯಲ್ಲಿ ಪದಕ ಗೆದ್ದ ಕರ್ನಾಟಕದ ಸಿದ್ದಿ ಜನಾಂಗದ 7 ಮಂದಿ ಬಾಕ್ಸರ್ ಗಳು
ಜಾನ್ಸನ್ ವರ್ಗೀಸ್ ಆಲಪ್ಪುಳದ DYFI ನಾಯಕ. ಕ್ರಿಸ್ಟೀನಾರ ಪಾಲಕರಿಗೆ ಕಮ್ಯುನಿಸಂ ಎಂದರೆ ತುಂಬಾ ಭಯ. ದಶಕಗಳ ಹಿಂದೆ ಲಿಥುವೇನಿಯ ಸೋವಿಯತ್ ರಷ್ಯಾದ ಭಾಗವಾಗಿತ್ತು. ನಂತರ ಸ್ವತಂತ್ರಗೊಂಡಿತ್ತು.
ಇದನ್ನೂ ಓದಿ: ಗಾಯಗೊಂಡ ಡಾಲ್ಫಿನ್ ರಕ್ಷಣೆಗೆ ಮುಂದಾದ ಅಪ್ಪ ಮಗಳು; ಜನರಿಂದ ಮೆಚ್ಚುಗೆ
ಈ ಇತಿಹಾಸದ ಪರಿಣಾಮವಾಗಿ ಲಿಥುವೇನಿಯಾ ದೇಶದ ನಾಗರಿಕರು ಕಮ್ಯುನಿಸಂ ಎಂದರೆ ಭಯ ಬೀಳುತ್ತಾರೆ. ಹೀಗಾಗಿ ಕ್ರಿಸ್ಟೀನಾ ತಾನು ಕಮ್ಯುನಿಸ್ಟ್ ಸಿದ್ಧಾಂತದ ವ್ಯಕ್ತಿಯನ್ನು ಮದುವೆ ಆಗುತ್ತೇನೆಂದು ಹೇಳಿದಾಗ ಮನೆಯವರು ವಿರೋಧಿಸಿದ್ದರು.
ಇದನ್ನೂ ಓದಿ: ಕಾಶ್ಮೀರದಲ್ಲಿ ಮಂಜುಗಡ್ಡೆಯಿಂದ ನಿರ್ಮಿತ ಇಗ್ಲೂ ಕೆಫೆ: ಮಂಜುಗಡ್ಡೆಯ ಟೇಬಲ್ ಕುರ್ಚಿಗಳು
ಮನೆಯವರನ್ನು ಒಪ್ಪಿಸಲು ಕ್ರಿಸ್ಟೀನಾ ೩ ತಿಂಗಳು ಕಾಲ ಕಷ್ಟ ಪಟ್ಟಿದ್ದಾರೆ. ತಾವು ಇಷ್ಟಪಟ್ಟಿರುವ ಹುಡುಗ ಸೋವಿಯತ್ ಕಾಲದ ಕಮ್ಯುನಿಸ್ಟ್ ಅಲ್ಲ ಎಂದು ಅವರು ಮನೆಯವರನ್ನು ಒಪ್ಪಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಬೆಳಿಗ್ಗೆ 7 ರಿಂದ 10 ಗಂಟೆ ತನಕ ಪೊಲೀಸ್ ಠಾಣೆಯಲ್ಲಿ ಟೀಚರ್: 10 ರ ಮೇಲೆ ಸಬ್ ಇನ್ಸ್ ಪೆಕ್ಟರ್
ಕ್ರಿಸ್ಟೀನಾ ಎನ್ ಜಿ ಓ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಯುಕ್ತ ಆಲಪ್ಪುಳ ಕ್ಕೆ ಆಗಮಿಸಿದಾಗ ಅವರಿಗೆ ಜಾನ್ಸನ್ ಪರಿಚಯ ಆಗಿತ್ತು.
ಇದನ್ನೂ ಓದಿ: ಮದುವೆಯಾದ 6 ತಿಂಗಳಿಗೇ ಕೊರೊನಾದಿಂದ ಪತಿ ಸಾವು: ಕೋವಿಡ್ ಪರಿಹಾರ ನಿಧಿಗೆ 40 ಲಕ್ಷ ರೂ. ದೇಣಿಗೆ ನೀಡಿದ ವಿಧವೆ