
ಶೇಖ್ ಮೊಹಮದ್ ಇಡ್ರೀಸ್
ಶಿವಮೊಗ್ಗ: ಹೊಸಹಳ್ಳಿ ಗ್ರಾಮದ ನಿವಾಸಿ 30 ವರ್ಷದ ಶೇಖ್ ಮೊಹಮದ್ ಇಡ್ರೀಸ್ ಎಂಬ ಯುವಕ ಪರಿಸರ ಸ್ನೇಹಿ ವಿಧಾನಗಳನ್ನು ಬಳಸಿ ಕಾಗದ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಪುದುಚೆರಿ ಬಾಕ್ಸಿಂಗ್ ಟೂರ್ನಿಯಲ್ಲಿ ಪದಕ ಗೆದ್ದ ಕರ್ನಾಟಕದ ಸಿದ್ದಿ ಜನಾಂಗದ 7 ಮಂದಿ ಬಾಕ್ಸರ್ ಗಳು

ಬಿಎಸ್ಸಿ ಪದವೀಧರರಾಗಿರುವ ಇಡ್ರೀಸ್ ಅವರು ಸಸ್ಯ ತ್ಯಾಜ್ಯ, ಆನೆ ತ್ಯಾಜ್ಯ ಮತ್ತಿತರ ವಸ್ತುಗಳನ್ನು ಬಳಸಿ ಕಾಗದವನ್ನು ಉತ್ಪಾದಿಸುತ್ತಿದ್ದಾರೆ. ತಮ್ಮ ಉತ್ಪನ್ನಕ್ಕೆ ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ ವಿದೇಶಗಳಿಂದಲೂ ಆರ್ಡರ್ ಗಳು ಬರುತ್ತಿರುವುದಾಗಿ ಇಡ್ರೀಸ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಲಿಥುವೇನಿಯಾ ಯುವತಿ- ಕೇರಳ DYFI ಯುವಕ ಪ್ರೇಮವಿವಾಹ: ಕಮ್ಯುನಿಸಂ ಭಯವಿದ್ದ ಪಾಲಕರನ್ನು ಒಪ್ಪಿಸಿದ ಯುವತಿ
ಕಾಗದವನ್ನು ಹೇಗೆ ತಯಾರಿಸುತ್ತಾರೆ ಎನ್ನುವ ಕುತೂಹಲವೇ ಅವರನ್ನು ಈಗ ಸಂಶೋಧಕ/ ಉದ್ಯಮಿ ಸ್ಥಾನದಲ್ಲಿ ತಂದು ನಿಲ್ಲಿಸಿದೆ. ಶುರುವಿನಲ್ಲಿ ಸಸ್ಯ ತ್ಯಾಜ್ಯದಿಂದ 10 ಪೇಪರ್ ಶೀಟುಗಳನ್ನು ತಯಾರಿಸಿದ್ದರು. ಅವನ್ನು ವಿದೇಶಗಳಲ್ಲಿ ನೆಲೆಸಿದ್ದ ಕಲಾವಿದ ಗೆಳೆಯರಿಗೆ ಕಳಿಸಿದ್ದರು. ನಂತರ ಬೇಡಿಕೆ ಹೆಚ್ಚಾಗತೊಡಗಿತು.
ಇದನ್ನೂ ಓದಿ: ಕಾಶ್ಮೀರದಲ್ಲಿ ಮಂಜುಗಡ್ಡೆಯಿಂದ ನಿರ್ಮಿತ ಇಗ್ಲೂ ಕೆಫೆ: ಮಂಜುಗಡ್ಡೆಯ ಟೇಬಲ್ ಕುರ್ಚಿಗಳು
ಇಂದು ಇಡ್ರೀಸ್ ಅವರು ಹತ್ತಿ, ಪೈನಾಪಲ್, ಬಾಳೆಗಿಡ, ಅಕ್ಕಿ ಹೊಟ್ಟು ಸೇರಿದಂತೆ ಒಟ್ಟು 50 ಬಗೆಯ ಸಸ್ಯ ತ್ಯಾಜ್ಯದಿಂದ ಕಾಗದವನ್ನು ತಯಾರಿಸಬಲ್ಲರು. ಅವರು ತಯಾರಿಸುವ ಕಾಗದಗಳು 30 ದೇಶಗಳಿಗೆ ರಫ್ತಾಗುತ್ತವೆ.
ಇದನ್ನೂ ಓದಿ: ಕೇರಳ: ಗಾಯಗೊಂಡ ಡಾಲ್ಫಿನ್ ರಕ್ಷಣೆಗೆ ಮುಂದಾದ ಅಪ್ಪ ಮಗಳು; ಜನರಿಂದ ಮೆಚ್ಚುಗೆ