
ರಾಯ್ಸನ್ ಜೋಸೆಫ್
ಕೊಚ್ಚಿ: ಕೊಚ್ಚಿ ಮೂಲದ ಟೂರ್ ಆಪರೇಟರ್ ಒಬ್ಬರು ತಮ್ಮ ಬಳಿ ಇರುವ 20 ಬಸ್ ಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಅದರಲ್ಲಿ ಅಚ್ಚರಿಯಿಲ್ಲ, ಆದರೆ ಆ ಮಾಲೀಕರು ತಮ್ಮ ಬಸ್ ಗಳನ್ನು ಕೆ.ಜಿ.ಗೆ 45 ರೂ. ಗಳಂತೆ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ದಿನಗೂಲಿ ಕಾರ್ಮಿಕನ ಮೂರನೇ ಮಗಳೂ ಎಂಬಿಬಿಎಸ್ ಸೇರ್ಪಡೆ
ರಾಯ್ಸನ್ ಜೋಸೆಫ್ ಎಂಬುವವರು ಟೂರಿಸ್ಟ್ ಬಸ್ ಬಿಜಿನೆಸ್ ನಡೆಸುತ್ತಿದ್ದರು. ಕಳೆದ ಒಂದೂವರೆ ವರ್ಷಗಳಲ್ಲಿ ಪ್ರಯಾಣ ನಿರ್ಬಂಧ ಹೇರಲಾಗಿರುವುದರಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದರು.
ಇದನ್ನೂ ಓದಿ: ಗುಡಿಸಲ ಮುಂದೆ ರಾಷ್ಟ್ರಧ್ವಜ ಹಾರಿಸಿದ ಕೇರಳ ವೃದ್ಧೆಗೆ ಭಾರತೀಯ ನೌಕಾದಳ ಗೌರವ
ಪ್ರವಾಸಿಗರ ಆಗಮನವೂ ಕಡಿಮೆಯಾಗಿರುವುದರಿಂದ ತೀವ್ರ ನಷ್ಟಕ್ಕೊಳಗಾಗಿ ಬ್ಯಾಂಕ್ ಸಾಲ ಮರಳಿಸಲು ಈಗ ಬಸ್ ಗಳನ್ನು ಗುಜರಿಗೆ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸೊಳ್ಳೆಗಳ ಸೀರಿಯಲ್ ಕಿಲ್ಲರ್ ಜೇಕಬ್: ಇಳಿ ವಯಸ್ಸಲ್ಲೂ ಸಮಾಜಪರ ಕಾಳಜಿ
ಅವರು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರುವಂತೆ ಕೆ.ಜಿ.ಗೆ 45 ರೂ. ಬೆಲೆ ನಿಗದಿ ಪಡಿಸಿದ ನಂತರ ಇದುವರೆಗೂ 10 ಬಸ್ ಗಳು ಮಾರಾಟವಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಟೂರಿಸ್ಟ್ ವಾಹನ ಮಾಲಕರ ಸಂಘ, ರಾಜ್ಯಾದ್ಯಂತ ಸುಮಾರು 2,000 ಟೂರಿಸ್ಟ್ ವಾಹನಗಳು ಗುಜರಿ ಸೇರಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ 1,000 ಬಸ್ಸುಗಳನ್ನು ಬ್ಯಾಂಕುಗಳು ಮತ್ತು ಸಾಲ ನೀಡಿದವರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪರಿಸರಸ್ನೇಹಿ ಕಾಗದ ಉತ್ಪಾದನೆ: ಶಿವಮೊಗ್ಗದ ಯುವಕ ಶೇಖ್ ಮೊಹಮದ್ ಸಾಧನೆ; 30 ದೇಶಗಳಿಗೆ ರಫ್ತು