ಸಾವಿರಾರು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ಮಾಡಿದ 'ಗೋಪಾಲಕನ' ಯಶೋಗಾಥೆ!
ಯಾವುದೇ ಪೂರ್ವ ಔಪಚಾರಿಕ ಶಿಕ್ಷಣ ಪಡೆಯದ 35 ವರ್ಷದ ರಮೇಶ್ ಬಲ್ಲಿದ್ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಸಾವಿರಾರು ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಮಾಡಿದ್ದಾರೆ.
Published: 13th February 2022 09:59 AM | Last Updated: 14th February 2022 03:01 PM | A+A A-

ರಮೇಶ್ ಬಲ್ಲಿಡ್
ಮೈಸೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೋಟಿಗುಡ್ಡ ಎಂಬ ಕುಗ್ರಾಮದ ಸಾವಿರಾರು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಯಾವುದೇ ಪೂರ್ವ ಔಪಚಾರಿಕ ಶಿಕ್ಷಣ ಪಡೆಯದ 35 ವರ್ಷದ ರಮೇಶ್ ಬಲ್ಲಿದ್ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಸಾವಿರಾರು ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಮಾಡಿದ್ದಾರೆ. ಮಕ್ಕಳ ಕುಟುಂಬಗಳನ್ನು ಬೆಂಬಲಿಸಿ ಅವರ ಸಾಮರ್ಥ್ಯ ತೆಗೆಯಲು ನೆರವಾಗಿದ್ದಾರೆ.
ಇದುವರೆಗೆ ಅವರು ಗ್ರಾಮೀಣ ಕರ್ನಾಟಕ ಮತ್ತು ದೇಶದಾದ್ಯಂತ ಸುಮಾರು 4.85 ಲಕ್ಷ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಗೋಪಾಲಕನಿಂದ ಗ್ರಾಮೀಣ ಬದಲಾವಣೆ ಮಾಡುವವರವರೆಗಿನ ಅವರ ಪ್ರಯಾಣವು ತುಂಬಾ ಸ್ಪೂರ್ತಿದಾಯಕ ಮತ್ತು ಕುತೂಹಲಕಾರಿಯಾಗಿದೆ, ಅದು ಅನೇಕರ ಜೀವನವನ್ನು ಪರಿವರ್ತಿಸಿದೆ.
ರಮೇಶ್ ಬಲ್ಲಿದ್ ತಮ್ಮ ಕುಟುಂಬನ್ನು ಪೋಷಿಸಲು ಚಿಕ್ಕ ವಯಸ್ಸಿನಲ್ಲಿ ಎಮ್ಮೆ ಮೇಯಿಸುತ್ತಿದ್ದಾರೆ, ರಮೇಶ್ 16 ವರ್ಷದವನಾಗಿದ್ದಾಗ, ಹೆಡ್ ಹೆಲ್ಡ್ ಹೈ ಫೌಂಡೇಶನ್ ಮತ್ತು ಎನ್‌ಜಿಒ ಸಮೂಹ ನಡೆಸುವ ‘ಫೌಂಡೇಶನ್ ಫಾರ್ ಲೈಫ್’ ತರಬೇತಿ ಕಾರ್ಯಕ್ರಮದ ಪೈಲಟ್ ಬ್ಯಾಚ್‌ಗೆ ಸೇರಿಕೊಂಡರು, ಇದು ಅವರ ಜೀವನವನ್ನು ಪರಿವರ್ತನೆಗೆ ಕಾರಣವಾಯಿತು.
ಹೆಡ್ ಹೆಲ್ಡ್ ಹೈ ಫೌಂಡೇಶನ್, ಗ್ರಾಮೀಣ ಯುವಕರಿಗೆ ವೃತ್ತಿ ಮಾರ್ಗದರ್ಶನ, ತರಬೇತಿ ಮತ್ತು ಆರ್ಥಿಕ ಭದ್ರತೆಗಾಗಿ ಸಂಪನ್ಮೂಲಗಳೊಂದಿಗೆ ಸಬಲೀಕರಣ ಮಾಡುವ ಎನ್‌ಜಿಒ ಆಗಿದ್ದು, ಇದು ರಮೇಶ್‌ಗೆ ಅಗತ್ಯವಾದ ತರಬೇತಿಯನ್ನು ನೀಡಿತು.
ರಮೇಶ್ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವಲ್ಲಿ ಪಾರಮ್ಯ ಮೆರೆದರು, ಕೇವಲ ಆರು ತಿಂಗಳಲ್ಲಿ ಸಾಫ್ಟ್ ಸ್ಕಿಲ್‌ಗಳನ್ನು ಅಭಿವೃದ್ಧಿಪಡಿಸಿದರು. ತರಬೇತಿಯ ನಂತರ, ರಮೇಶ್ ಎಮ್ಮೆಗಳನ್ನು ಮೇಯಿಸುವುದರ ಜೊತೆಗೆ ಡೇಟಾ ಎಂಟ್ರಿ ಮತ್ತು ಗ್ರಾಮೀಣ ಬಿಪಿಒಗಳಲ್ಲಿ ಕೆಲಸ ಮಾಡುತ್ತಿದ್ದರು.
ಮೊದಲು ಕೊಪ್ಪಳದ ಕೆಎಸ್ ಆಸ್ಪತ್ರೆಯಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಅವರು ಎನ್‌ಜಿಒ ಸಮೂಹದೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಹೆಡ್ ಹೆಲ್ಡ್ ಹೈ ಫೌಂಡೇಶನ್‌ನ ತಂಡದ ಸದಸ್ಯರಾಗಿ ಮತ್ತು ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.
ತರಬೇತಿಗೆ ಹಾಜರಾಗಲು ನನ್ನನ್ನು ಪ್ರೇರೇಪಿಸಿದ 9 ವರ್ಷ ವಯಸ್ಸಿನ ನನ್ನ ಕಿರಿಯ ಸಹೋದರ ಹನುಮಂತ ಬಲ್ಲಾಡ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಇಂಗ್ಲಿಷ್ ಕಲಿಯಲು ಮತ್ತು ವಿಭಿನ್ನ ಕೌಶಲ್ಯಗಳೊಂದಿಗೆ ನನ್ನನ್ನು ಸಜ್ಜುಗೊಳಿಸಲು ದೂರವಿದ್ದಾಗ ನನ್ನ ಬದಲಿಗೆ, ಅವರು ನನ್ನ ಕುಟುಂಬವನ್ನು ಬೆಂಬಲಿಸಲು ಎಮ್ಮೆ ಸಾಕಾಣಿಕೆಯನ್ನು ಕೈಗೊಂಡರು ಎಂದು ರಮೇಶ್ ಸ್ಮರಿಸಿದರು.
ಏಳು ವರ್ಷಗಳ ನಂತರ, ರಮೇಶ್, ಹೆಡ್ ಹೆಲ್ಡ್ ಹೈ ಫೌಂಡೇಶನ್‌ನಲ್ಲಿ ತರಬೇತಿ ಕಾರ್ಯಕ್ರಮಕ್ಕೆ ತಮ್ಮ ಸಹೋದರ ಹನುಮಂತನನ್ನು ಸೇರಿಸಿದರು. ಆದರೆ ಅದೇ ವರ್ಷ ಹನುಮಂತ ಹಠಾತ್ತನೆ ನಿಧನ ಹೊಂದಿದ್ದು ರಮೇಶ್ ರನ್ನು ಆಘಾತಕ್ಕೊಳಗಾಗಿಸಿತ್ತು.
ಸಹೋದರ ಹನುಮಂತ ಸಾವಿನ ನಂತರ ನನ್ನ ಜೀವನದಲ್ಲಿ ಮಹತ್ವದ ಬದಲಾವಣೆಯಾಗಿತ್ತು, ನನಗಾಗಿ ಅವರು ಅನೇಕ ತ್ಯಾಗ ಮಾಡಿದ್ದರು, ಮಹತ್ವದ ಜವಾಬ್ದಾರಿ ತೆಗೆದುಕೊಂಡಿದ್ದರು.
ಆದ್ದರಿಂದ ನನ್ನ ಸಹೋದರನಿಗೆ ಗೌರವಾರ್ಥವಾಗಿ ನಾನು ನನ್ನ ಹಳ್ಳಿಗೆ ಹಿಂತಿರುಗಿ ಕೃಷಿಯಲ್ಲಿ ಸಮಯವನ್ನು ತೊಡಗಿಸಿಕೊಂಡಿದ್ದೇನೆ, ಜೊತೆಗೆ ನನ್ನ ಹಳ್ಳಿಯ ಮಕ್ಕಳು ಮತ್ತು ಯುವಕರನ್ನು ಔಪಚಾರಿಕ ಶಿಕ್ಷಣವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ರಮೇಶ್ ಹೇಳಿದ್ದಾರೆ.
ಅಂದಿನಿಂದ ಇಂದಿನವರೆಗೆ ಹಿಂತಿರುಗಿ ನೋಡಿಲ್ಲ. ರಮೇಶ್ ಅವರನ್ನು ಅನೇಕ ಶಿಕ್ಷಣ ಸಂಸ್ಥೆಗಳಿಗೆ ಅತಿಥಿ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಲಾಗುತ್ತದೆ, ಅಲ್ಲಿ ಅವರು ಪ್ರೇರಕ ಭಾಷಣಗಳನ್ನು ನೀಡುತ್ತಾರೆ, ಜೊತೆಗೆ ಗೋಪಾಲಕರಿಂದ ಪ್ರೇರಕ ಭಾಷಣಕಾರರವರೆಗಿನ ಅವರ ಪ್ರಯಾಣವನ್ನು ಹಂಚಿಕೊಳ್ಳುತ್ತಾರೆ. ಅವರು ತಮ್ಮ ತಾಲೂಕಿನ ಪ್ರತಿಯೊಂದು ಸರ್ಕಾರಿ ಶಾಲೆಗೆ ಭೇಟಿ ನೀಡುತ್ತಾರೆ, ಯುವಕರನ್ನು ಸಜ್ಜುಗೊಳಿಸುತ್ತಾರೆ.ಸಮಾಜದಲ್ಲಿ ಪರಿವರ್ತನೆ ತರುವುದರ ಮೂಲಕ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.
2007 ರಲ್ಲಿ ನಾವು ಬೆಂಗಳೂರಿನಲ್ಲಿ ನಡೆಸಿದ ಮೊದಲ ತರಬೇತಿ ಬ್ಯಾಚ್‌ನಲ್ಲಿ ರಮೇಶ್ ಇದ್ದರು. ಅಂದಿನಿಂದ, ನಮ್ಮ ಫೌಂಡೇಶನ್ 20,000 ಕ್ಕೂ ಹೆಚ್ಚು ಯುವಕರನ್ನು ದೇಶದ ಗ್ರಾಮೀಣ ಭಾಗಗಳಲ್ಲಿ ‘ಮೇಕ್ ಇಂಡಿಯಾ ಕೇಪಬಲ್’ ಕಾರ್ಯಕ್ರಮದ ಮೂಲಕ ರವಾನಿಸಿದೆ. ಯುವಕರ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಈ ಕಾರ್ಯಕ್ರಮವು ಜೀವನದಲ್ಲಿ ಅವರ ದೃಷ್ಟಿಕೋನವನ್ನು ಪರಿವರ್ತಿಸಲು ಯುವಕರಿಗೆ ಪ್ರೇರೇಪಿಸುತ್ತದೆ ಎಂದು ಹೆಡ್ ಹೆಲ್ಡ್ ಹೈ ಫೌಂಡೇಶನ್ ನ ಸಿಇಒ ಪಂಕಜ್ ಸಿಂಗ್ ಠಾಕೂರ್ ಹೇಳಿದ್ದಾರೆ.