'ಮೈಸೂರು ಪೊಲೀಸ್ ಬ್ಯಾಂಡ್' ಗೆ 160ಕ್ಕೂ ಅಧಿಕ ವರ್ಷಗಳ ಶ್ರೀಮಂತ ಇತಿಹಾಸ!
ವಿಶಿಷ್ಠ ಮಾಧುರ್ಯದ 'ಮೈಸೂರು ಪೊಲೀಸ್ ಬ್ಯಾಂಡ್' ಗೆ 160 ಕ್ಕೂ ಅಧಿಕ ವರ್ಷದ ಶ್ರೀಮಂತ ಇತಿಹಾಸವಿದೆ.ಆದರೆ, ಸಿಬ್ಬಂದಿ ನೇಮಕಾತಿ ಕೊರತೆ, ಸಂಗೀತ ಗುಣಮಟ್ಟದ ಹಾನಿಯಿಂದಾಗಿ ಇದರ ಶಕ್ತಿ ಕ್ಷೀಣಿಸುತ್ತಿದೆ.
Published: 14th February 2022 08:41 PM | Last Updated: 15th February 2022 01:29 PM | A+A A-

ಮೈಸೂರು ಪೊಲೀಸ್ ಬ್ಯಾಂಡ್
ಬೆಂಗಳೂರು: ವಿಶಿಷ್ಠ ಮಾಧುರ್ಯದ 'ಮೈಸೂರು ಪೊಲೀಸ್ ಬ್ಯಾಂಡ್' ಗೆ 160 ಕ್ಕೂ ಅಧಿಕ ವರ್ಷದ ಶ್ರೀಮಂತ ಇತಿಹಾಸವಿದೆ. 2008ರಲ್ಲಿ ಅಂದಿನ ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಕರ್ನರ್ ವೊಂದರಲ್ಲಿ ಮೈಸೂರು ಪೊಲೀಸ್ ಬ್ಯಾಂಡ್ ತಂಡ ನುಡಿಸುತ್ತಿದ್ದ ಸಂಗೀತವನ್ನು 20 ನಿಮಿಷಗಳ ಕಾಲ ಆಲಿಸಿದ್ದರು.
ಮೈಸೂರು ಪೊಲೀಸ್ ಬ್ಯಾಂಡ್ ಗೆ ಸುಮಾರು 160 ವರ್ಷಗಳ ಶ್ರಿಮಂತ ಇತಿಹಾಸವಿದೆ. ಆದರೆ, ಸಿಬ್ಬಂದಿ ನೇಮಕಾತಿ ಕೊರತೆ, ಸಂಗೀತ ಗುಣಮಟ್ಟದ ಹಾನಿಯಿಂದಾಗಿ ಇದರ ಶಕ್ತಿ ಕ್ಷೀಣಿಸುತ್ತಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೋಮವಾರ ರಾಜ್ಯ ವಿಧಾನಮಂಡಲ ಅಧಿವೇಶನವನ್ನುದ್ದೇಶಿಸಿ ಭಾಷಣ ಕಾರ್ಯಕ್ರಮದಲ್ಲಿ ಬೆಂಗಳೂರಿನ ತಂಡ ಪಾಲ್ಗೊಂಡಿತ್ತು. ಪಾಶ್ಚಿಮಾತ್ಯ ಸಂಗೀತದೊಂದಿಗೆ ಮೈಸೂರು ವಾಸುದೇವಚಾರ್, ಮುತ್ತಯ ಭಗವತ ಅವರಿಂದ ಹಿಡಿದು ಪುರಂದರ ದಾಸರು ಮತ್ತು ಕನಕದಾಸರ ಗೀತೆ ಸಂಯೋಜನೆಗಳನ್ನು ನುಡಿಸಿದರು.
1860ರಲ್ಲಿ ಚಾಮರಾಜೇಂದ್ರ ಒಡೆಯರ್ ಅವರಿಂದ ಮೈಸೂರು ಪೊಲೀಸ್ ಬ್ಯಾಂಡ್ ಆರಂಭವಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ಇದರಲ್ಲಿ ಕರ್ನಾಟಿಕ್ ಸಂಗೀತಯನ್ನು ಸೇರಿಸಲಾಯಿತು.
ಏಕಕಾಲದಲ್ಲಿ 27 ವಿವಿಧ ಕರ್ನಾಟಿಕ್, 30 ಪಾಶ್ಚಿಮಾತ್ಯ ವಾದ್ಯಗಳಿಂದ ಸಂಗೀತ: ಸುಮಾರು 27 ವಿವಿಧ ಪ್ರಕಾರದ ಕರ್ನಾಟಿಕ್ ವಾದ್ಯಗಳು ಮತ್ತು ಸುಮಾರು 30 ಪಾಶ್ಚಿಮಾತ್ಯ ವಾದ್ಯಗಳನ್ನು ಏಕಕಾಲದಲ್ಲಿ ನುಡಿಸಲಾಗುತ್ತದೆ. ಇದರಿಂದ ವಿಶಿಷ್ಠ ಸಂಗೀತ ಆಲಿಸಬಹುದಾಗಿದೆ. ಇದರಲ್ಲಿ ಕ್ಲಾರಿನೆಟ್ಸ್, ಪಿಕೊಲೊಗಳು, ಬಾಸೂನ್, ಸ್ಯಾಕ್ಸೊಫೋನ್, ಅಲ್ಟ್ರಾ ಸ್ಯಾಕ್ಸೊಪೋನ್, ಫ್ರೆಂಚ್ ಹಾರನ್ ಮತ್ತಿತರ ವಾದ್ಯಗಳನ್ನು ಇದು ಒಳಗೊಂಡಿದೆ.
ಅಸಿಸ್ಟೆಂಟ್ ಬ್ಯಾಂಡ್ ಮಾಸ್ಟರ್ ಆರ್ ಮೋಹನ್, ಕ್ಲಾರಿನೆಟ್ ಮತ್ತು ವೀಣೆ ಎರಡನ್ನೂ ನುಡಿಸುತ್ತಾರೆ. ತಮ್ಮ ತಂದೆ ಡಿ. ರಾಮಪ್ಪ ಮತ್ತು ತಾತ ಆರ್. ದಾಸಪ್ಪ ಕ್ಲಾರಿನೆಟ್ ಮತ್ತು ಟ್ರೊಮ್ ಬೊನ್ ಬಳಸುತ್ತಿದ್ದಾಗಿ ಅವರು ತಿಳಿಸಿದರು. ಗೃಹ ಇಲಾಖೆಯಿಂದ ನೇಮಕವಾಗಿರುವ ಮೋಹನ್ ಅವರಿಗೆ ಸುಮಾರು 30 ವರ್ಷಗಳ ಅನುಭವವಿದೆ.
ಸಂಗೀತ ನುಡಿಸುವವರ ಸಂಖ್ಯೆ 56ಕ್ಕೆ ಇಳಿಕೆಯಾಗಿದೆ. ಇದರಲ್ಲಿ ಕಳೆದ ವರ್ಷ ನೇಮಕವಾದ 11 ಮಂದಿ ಹೊಸಬರು ಇದ್ದಾರೆ. ಅದಕ್ಕೂ ಹಿಂದೆ ಸುಮಾರು 15 ವರ್ಷಗಳಿಂದ ನೇಮಕಾತಿ ಮಾಡಿರಲಿಲ್ಲ. ಐದು ವರ್ಷಕ್ಕೆ ಒಮ್ಮೆ ರಾಜ್ಯ ಸರ್ಕಾರ ಸಿಬ್ಬಂದಿ ನೇಮಕ ಮಾಡಬೇಕಿದೆ. ನಂತರ ತಂಡದಲ್ಲಿನ ಹಿರಿಯ ಹೊಸಬರಿಗೆ ತರಬೇತಿ ನೀಡಲು ಸಾಧ್ಯವಾಗುತ್ತದೆ ಎಂದು ಮೋಹನ್ ತಿಳಿಸಿದರು.
ಸದಸ್ಯರ ಕೊರತೆಯಿಂದ ಸಂಗೀತದ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. (ಕರ್ನಾಟಿಕ್) ವಾದ್ಯದಲ್ಲಿ ಸಿನಿಯರ್ ಗ್ರೇಡ್ ಆಗಿರುವವರು ಅರ್ಜಿ ಸಲ್ಲಿಸಲು ಅರ್ಹರರು. ಪಾಶ್ಚಿಮಾತ್ಯಕ್ಕೆ ಸಂಗೀತಕ್ಕೆ ಟ್ರಿನಿಟಿ ಲಂಡನ್ ಪರೀಕ್ಷೆಯಲ್ಲಿ ಗ್ರೇಡ್ II ಆಗಿರಬೇಕು. ಜಂಟಿ ಅಧಿವೇಶನ, ಕನ್ನಡ ರಾಜ್ಯೋತ್ಸವ, ರಾಜ್ಯಪಾಲರ ಅಧಿಕಾರ ಸ್ವೀಕಾರ ಸಮಾರಂಭ, ದಸರಾ ಮತ್ತಿತರ ಸಮಾರಂಭದಲ್ಲಿ ಮೈಸೂರು ಬ್ಯಾಂಡ್ ಪ್ರದರ್ಶನ ಇರುತ್ತದೆ.