ಹುತಾತ್ಮ ಯೋಧರ ಮನೆಗಳಿಂದ ಮೃತ್ತಿಕೆ ಸಂಗ್ರಹಿಸಲು 1.15 ಲಕ್ಷ ಕಿ.ಮೀ ಪ್ರಯಾಣಿಸಿದ ಬೆಂಗಳೂರಿನ ಸಂಗೀತಗಾರ
ವೃತ್ತಿಯಲ್ಲಿ ಫಾರ್ಮಸಿ ಪ್ರೊಫೆಸರ್ ಹಾಗೂ ಸಂಗೀತಗಾರನಾಗಿರುವ ಉಮೇಶ್ ಜಾಧವ್ ರಸ್ತೆ ಮಾರ್ಗದ ಮೂಲಕ 1.15 ಲಕ್ಷ ಕಿ.ಮೀ ಸಂಚರಿಸಿ ಹಲವು ಯುದ್ಧಗಳು ಸೇರಿದಂತೆ ಇತ್ತೀಚಿನ ಕೂನೂರ್ ದುರಂತದಲ್ಲಿ ಹುತಾತ್ಮರಾದ ಯೋಧರ ನಿವಾಸಕ್ಕೂ ತೆರಳಿ ಮೃತ್ತಿಕೆ ಸಂಗ್ರಹಿಸಿದ್ದಾರೆ.
Published: 15th February 2022 02:52 PM | Last Updated: 16th February 2022 07:05 PM | A+A A-

ಉಮೇಶ್ ಗೋಪಿನಾಥ್ ಜಾಧವ್
ಬೆಂಗಳೂರು: "ನಿಮ್ಮ ದೇಶ ನಿಮಗಾಗಿ ಏನು ಮಾಡಬಹುದೆಂದು ಕೇಳಬೇಡಿ, ದೇಶಕ್ಕಾಗಿ ನೀವೇನು ಮಾಡಬಲ್ಲಿರಿ ಎಂಬುದನ್ನು ಕೇಳಿ" ಸೇನೆಗೆ ಸೇರಲು ತಯಾರಿ ನಡೆಸುತ್ತಿರುವ ಪುಲ್ವಾಮ ಹುತಾತ್ಮ ಯೋಧ ಮೋಹನ್ ಲಾಲ್ ಅವರ ಪುತ್ರಿಯ ಈ ಮಾತುಗಳು ಸದಾ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ ಎನ್ನುತ್ತಾರೆ 1.15 ಲಕ್ಷ ಕಿ.ಮೀ ಸಂಚರಿಸಿ 144 ಹುತಾತ್ಮ ಯೋಧರ ಮನೆಗಳಿಂದ ಮೃತ್ತಿಕೆ ಸಂಗ್ರಹಿಸಿ ವಾಪಸ್ಸಾಗಿರುವ ಬೆಂಗಳೂರು ಮೂಲದ ಉಮೇಶ್ ಗೋಪಿನಾಥ್ ಜಾಧವ್.
ವೃತ್ತಿಯಲ್ಲಿ ಫಾರ್ಮಸಿ ಪ್ರೊಫೆಸರ್ ಹಾಗೂ ಸಂಗೀತಗಾರನಾಗಿರುವ ಉಮೇಶ್ ಜಾಧವ್ ರಸ್ತೆ ಮಾರ್ಗದ ಮೂಲಕ 1.15 ಲಕ್ಷ ಕಿ.ಮೀ ಸಂಚರಿಸಿ ಹಲವು ಯುದ್ಧಗಳು ಸೇರಿದಂತೆ ಇತ್ತೀಚಿನ ಕೂನೂರ್ ದುರಂತದಲ್ಲಿ ಹುತಾತ್ಮರಾದ ಯೋಧರ ನಿವಾಸಕ್ಕೂ ತೆರಳಿ ಮೃತ್ತಿಕೆ ಸಂಗ್ರಹಿಸಿದ್ದಾರೆ.
ಸಮವಸ್ತ್ರ ಧರಿಸದೇ ದೇಶಕ್ಕಾಗಿ ಬಹಳಷ್ಟು ಕೆಲಸ ಮಾಡಬಹುದು ಎಂದು ದೇಶಾದ್ಯಂತ ಸಂಚರಿಸಿ ಯೋಧರ ಮನೆಗಳಿಗೆ ಭೇಟಿ ನೀಡಿದ ಬಳಿಕ ಅರಿತುಕೊಂಡೆ ಎನ್ನುತ್ತಾರೆ ಉಮೇಶ್ ಜಾಧವ್.
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು, ಉದ್ಯೋಗಕ್ಕೆ ರಾಜೀನಾಮೆ ನೀಡಿ ಹುತಾತ್ಮ ಯೋಧರ ಮನೆಯಿಂದ ಮೃತ್ತಿಕೆ ಸಂಗ್ರಹಿಸಲು ಉಮೇಶ್ ಜಾಧವ್ ಗೆ ಪ್ರೇರಣೆ ನೀಡಿದ್ದು ಫೆ.14, 2019 ರಂದು ಸಂಭವಿಸಿದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ. "ನಾನು ಫೆ.14 ರಂದು ನಡೆದ ಪುಲ್ವಾಮ ದಾಳಿಯ ಬಗ್ಗೆ ತಿಳಿದುಕೊಂಡಾಗ ನಾನು ಖಾಸಗಿ ಕಾರ್ಯಕ್ರಮ ಮುಕ್ತಾಯಗೊಳಿಸಿ ಬೆಂಗಳೂರಿಗೆ ಆಗಮಿಸಲು ಜೈಪುರ ವಿಮಾನ ನಿಲ್ದಾಣದಲ್ಲಿದ್ದೆ. ಏಪ್ರಿಲ್ 19, 2019 ರಂದು ಕ್ರೌಡ್ ಫಂಡೆಡ್ ಪ್ರಯಾಣವನ್ನು ಪ್ರಾರಂಭಿಸಿದೆ ಎನ್ನುತ್ತಾರೆ ಉಮೇಶ್ ಜಾಧವ್.
ಪುಲ್ವಾಮ ಹುತಾತ್ಮ ಯೋಧರ ಕುಟುಂಬಗಳನ್ನಷ್ಟೇ ಅಲ್ಲದೇ ಮೊದಲ, ಎರಡನೇ ವಿಶ್ವಯುದ್ಧದಲ್ಲಿ ಮಡಿದ ಯೋಧರ ಕುಟುಂಬಗಳನ್ನು, ಕಾರ್ಗಿಲ್ ಯುದ್ಧ, ಉರಿ ದಾಳಿ, ಪಠಾಣ್ಕೋಟ್ ದಾಳಿ, ಆಪರೇಷನ್ ರಕ್ಷಕ್, ಗಲ್ವಾನ್ ಸಂಘರ್ಷ, ಇತ್ತೀಚಿನ ಕೂನೂರ್ ಹೆಲಿಕಾಫ್ಟರ್ ನಲ್ಲಿ ಮೃತಪಟ್ಟ ಹುತಾತ್ಮ ಯೋಧರ ಕುಟುಂಬಗಳನ್ನೂ ಜಾಧನ್ ಭೇಟಿ ಮಾಡಿದ್ದಾರೆ.
ಈಗಾಗಲೇ ಪುಲ್ವಾಮ ಹುತಾತ್ಮ ಯೋಧರ ಮನೆಗಳಿಂದ ಸಂಗ್ರಹಿಸಿದ ಮೃತ್ತಿಕೆಯನ್ನು ಬಳಸಿ ಒಂದು ಸ್ಮಾರಕ ನಿರ್ಮಿಸಲಾಗಿದೆ. ಈಗ ನಾನು ಸಂಗ್ರಹಿಸಿರುವುದರಿಂದ ದೆಹಲಿಯಲ್ಲಿ ಮತ್ತೊಂದು ಸ್ಮಾರಕ ನಿರ್ಮಿಸಲು ಅದನ್ನು ರಕ್ಷಣಾ ಪಡೆಗಳಿಗೆ ಹಸ್ತಾಂತರಿಸುತ್ತೇನೆ ಎಂದು ಉಮೇಶ್ ಜಾಧವ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಸಿಆರ್ ಪಿಎಫ್ ಯೋಧ ಹೆಚ್ ಗುರು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದನ್ನೂ ಉಮೇಶ್ ಜಾಧವ್ ಸ್ಮರಿಸಿದ್ದಾರೆ. ಎಲ್ಲಾ ಹುತಾತ್ಮ ಯೋಧರ ಕುಟುಂಬ ಸದಸ್ಯರನ್ನೂ ಭೇಟಿ ಮಾಡುವುದು ಅಸಾಧ್ಯವಾಗಿರುವುದರಿಂದ ಪ್ರತಿ ರಾಜ್ಯದಿಂದ 2 ಕುಟುಂಬಗಳನ್ನು ಭೇಟಿ ಮಾಡುತ್ತಿದೆ. ಆದರೆ ನಾಸಿಕ್ ನಲ್ಲಿ ನಾಲ್ಕು ಕುಟುಂಬಗಳನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಯಿತು. ಎಲ್ಲಾ ಮನೆಗಳ ಮೃತ್ತಿಕೆ (ಮಣ್ಣನ್ನು) ಒಂದು ಕಲಶದಲ್ಲಿ ಸಂಗ್ರಹಿಸಿ ನನಗೆ ಕೊಟ್ಟರು. ಇದು ನನ್ನ ಪ್ರಯಾಣದಲ್ಲಿ ಅತ್ಯಂತ ಭಾವನಾತ್ಮಕ ಸನ್ನಿವೇಶವಾಗಿತ್ತು. ನನ್ನನ್ನು ಭೇಟಿ ಮಾಡಲು ಯಾವುದೇ ಹುತಾತ್ಮ ಯೋಧರ ಕುಟುಂಬವೂ ನಿರಾಕರಿಸಲಿಲ್ಲ. ನನ್ನ ಪ್ರಯಾಣದ ವೇಗವನ್ನು ಲಾಕ್ ಡೌನ್ ಕುಗ್ಗಿಸಿತು ಎನ್ನುತ್ತಾರೆ ಉಮೇಶ್.
ಇಬ್ಬರು ಫೀಲ್ಡ್ ಮಾರ್ಷಲ್ ಗಳಾದ ಜನರಲ್ ಕೆಎಂ ಕಾರಿಯಪ್ಪ, ಜನರಲ್ ಸ್ಯಾಮ್ ಮಾಣಿಕ್ ಷಾ, 26/11 ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಮನೆಗಳಿಂದ ಎಲೀಟ್ 51 ವಿಶೇಷ ಕಾರ್ಯಪಡೆ ಮೂಲಕ ಮೃತ್ತಿಕೆ ಸಂಗ್ರಹಿಸಿದ್ದಾರೆ. ಜಾಧವ್ ಹಾಗೂ ಅವರ ಸ್ನೇಹಿತರು ಹುತಾತ್ಮ ಯೋಧರೊಂದಿಗೆ ನಡೆಸಿದ ಸಂವಾದದ ಅಂಶಗಳನ್ನು ಡಾಕ್ಯುಮೆಂಟರಿ ಮಾಡಿ ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸುವ ಯೋಜನೆ ಹೊಂದಿದ್ದಾರೆ.