ಮೈಸೂರು: ಸರ್ಕಾರಿ ಶಾಲೆ ನಿರ್ಮಿಸಲು ಎರಡೂವರೆ ಎಕರೆ ಜಮೀನು ದಾನ ಮಾಡಿದ ಮುಸ್ಲಿಂ ಕುಟುಂಬ!

ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ದೂರದ ಹಳ್ಳಿಯೊಂದರ ಮುಸ್ಲಿಂ ಕುಟುಂಬವೊಂದು ಸರ್ಕಾರಿ ಶಾಲೆಗಾಗಿ  50 ಲಕ್ಷ ರು. ಮೌಲ್ಯದ ಎರಡೂವರೆ ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ.

Published: 18th February 2022 01:16 PM  |   Last Updated: 18th February 2022 01:57 PM   |  A+A-


Mohammed Rakib hands over land documents to the Bachegowdanahalli government school authorities at the registration office in HD Kote

ಎರಡೂವರೆ ಎಕರೆ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ

The New Indian Express

ಮೈಸೂರು: ರಾಜ್ಯಾದ್ಯಂತ ಹಿಜಾಬ್ ವಿವಾದ ತಾರಕಕ್ಕೇರುತ್ತಿರುವ ಬೆನ್ನಲ್ಲೇ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ದೂರದ ಹಳ್ಳಿಯೊಂದರ ಮುಸ್ಲಿಂ ಕುಟುಂಬವೊಂದು ಸರ್ಕಾರಿ ಶಾಲೆಗಾಗಿ  50 ಲಕ್ಷ ರು. ಮೌಲ್ಯದ ಎರಡೂವರೆ ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ.

ಅಕ್ಕಪಕ್ಕದ ಹಳ್ಳಿಗಳ ಮಕ್ಕಳ ಶೈಕ್ಷಣಿಕ ಅಗತ್ಯತೆ ಮತ್ತು ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಜಮೀನು ನೀಡುವುದಾಗಿ ವಾಗ್ದಾನ ಮಾಡಿದ್ದ ಮಾರ್ಚಳ್ಳಿ ಗ್ರಾಮದ ನಿವಾಸಿ ದಿವಂಗತ ತಂದೆ ಮಹಮ್ಮದ್ ಜಾಫರ್ ಅವರ ಕನಸನ್ನು ನನಸಾಗಿಸಲು ಅವರ ಮಕ್ಕಳು ಇದೀಗ 2.5 ಎಕರೆ ಭೂಮಿ ದಾನ ಮಾಡಿದ್ದಾರೆ.

ಈ ಜಮೀನನ್ನು ಬಚ್ಚೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಲಾಗಿದ್ದು, ಮುಖ್ಯೋಪಾಧ್ಯಾಯರ ಹೆಸರಿಗೆ ನೋಂದಣಿ ಮಾಡಲಾಗಿದ್ದು, ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಮತ್ತು ಈ ಪ್ರದೇಶದಲ್ಲಿ ಸಾಕ್ಷರತೆಯ ಪ್ರಮಾಣವನ್ನು ಸುಧಾರಿಸಲು ಶಾಲೆಗೆ ಭೂಮಿಯನ್ನು ದಾನ ಮಾಡಲು ನನ್ನ ತಂದೆ ಮೊಹಮದ್ ರಕೀಬ್  ವಾಗ್ದಾನ ಮಾಡಿದ್ದರು ಎಂದು ಜಾಫರ್ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಗೊಂದಲ: ಹಲವೆಡೆ ಹಿಜಾಬ್ ತೆಗೆಯಲು ವಿದ್ಯಾರ್ಥಿಗಳ ನಕಾರ, ಮಾತಿನ ಚಕಮಕಿ

ನಾವು ಆರು ಮಂದಿ ಒಡಹುಟ್ಟಿದವರು, ನಾಲ್ಕು ಸಹೋದರರು ಮತ್ತು ಇಬ್ಬರು ಸಹೋದರಿಯರು. ನಮ್ಮ ತಂದೆಯ ಇಚ್ಛೆಯಂತೆ ನಾವು ಚರ್ಚಿಸಿ 2.5 ಎಕರೆಯನ್ನು ನೀಡಲು ನಿರ್ಧರಿಸಿ, ಫೆಬ್ರವರಿ 15 ರಂದು ನಾವು ಶಾಲೆಗೆ ಜಮೀನನ್ನು ನೋಂದಾಯಿಸಿದ್ದೇವೆ.

ಕೃಷಿಯಲ್ಲಿ ತೊಡಗಿರುವ ಈ ಕುಟುಂಬವು ಗ್ರಾಮದಲ್ಲಿ 12 ಎಕರೆಗೂ ಹೆಚ್ಚು ಜಮೀನು ಹೊಂದಿದ್ದು, ಹೊಂದಿದ್ದಾರೆ. ಅದರಲ್ಲಿ 2.5 ಎಕರೆಯನ್ನು ದಾನ ಮಾಡಿದರು. ತರಗತಿ ಕೊಠಡಿಗಳ ಕೊರತೆಯಿದ್ದರೆ, ದಾನವಾಗಿ ನೀಡಿದ ಭೂಮಿಯಲ್ಲಿ ಹೊಸದಾಗಿ ನಿರ್ಮಿಸಬಹುದು ಅಥವಾ ಮಕ್ಕಳ ಆಟದ ಮೈದಾನವಾಗಿ ಪರಿವರ್ತಿಸಬಹುದು ಅಥವಾ ಇತರ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಬಹುದು ಎಂಬುದು ಅವರ ಆಶಯ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಹೆಚ್.ಡಿ.ಕೋಟೆ ಬ್ಲಾಕ್ ಶಿಕ್ಷಣಾಧಿಕಾರಿ ಚಂದ್ರಕಾಂತ್, ''ದಾನವಾಗಿ ನೀಡಿದ ಜಮೀನನ್ನು ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಹಾಗೂ ಅಗತ್ಯವಿದ್ದಲ್ಲಿ ಹೊಸ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು. ಕುಟುಂಬದ ಈ ನಡೆ ಅನುಕರಣೀಯವಾಗಿದೆ ಮತ್ತು ಸಹಾಯ ಮಾಡಲು ಇತರರನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.


Stay up to date on all the latest ವಿಶೇಷ news
Poll
Parliament

2024 ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷ ಯಾವುದು ಎಂದು ನೀವು ಭಾವಿಸುತ್ತೀರಿ?


Result
ಕಾಂಗ್ರೆಸ್
ಎಎಪಿ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp