ಕೊಡವರ ಹಬ್ಬಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ...

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅಕ್ಟೋಬರ್ ಮಧ್ಯದಲ್ಲಿ ಕಾವೇರಿ ಸಂಕ್ರಮಣವನ್ನು ಆಚರಿಸಲಾಗುತ್ತದೆ. ತಲಕಾವೇರಿ ದೇವಸ್ಥಾನದಲ್ಲಿರುವ ಪುಷ್ಕರಿಣಿ ಸಮೀಪದ ಕುಂಡಿಕೆಯಿಂದ ಕಾವೇರಿ ನದಿ ಉಗಮವಾಗುತ್ತದೆ (ತೀರ್ತೋದ್ಭವ) ಮತ್ತು ಈ ನೀರಿನಲ್ಲಿ ಪವಿತ್ರ ಸ್ನಾನ ಮಾಡಲು ಸಾವಿರಾರು ಭಕ್ತರು ತಲಕಾವೇರಿ ಮತ್ತು ಭಾಗಮಂಡಲಕ್ಕೆ ಆಗಮಿಸುತ್ತಾರೆ.

Published: 02nd January 2022 01:38 PM  |   Last Updated: 03rd January 2022 02:06 PM   |  A+A-


File photo

ಸಂಗ್ರಹ ಚಿತ್ರ

The New Indian Express

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅಕ್ಟೋಬರ್ ಮಧ್ಯದಲ್ಲಿ ಕಾವೇರಿ ಸಂಕ್ರಮಣವನ್ನು ಆಚರಿಸಲಾಗುತ್ತದೆ. ತಲಕಾವೇರಿ ದೇವಸ್ಥಾನದಲ್ಲಿರುವ ಪುಷ್ಕರಿಣಿ ಸಮೀಪದ ಕುಂಡಿಕೆಯಿಂದ ಕಾವೇರಿ ನದಿ ಉಗಮವಾಗುತ್ತದೆ (ತೀರ್ತೋದ್ಭವ) ಮತ್ತು ಈ ನೀರಿನಲ್ಲಿ ಪವಿತ್ರ ಸ್ನಾನ ಮಾಡಲು ಸಾವಿರಾರು ಭಕ್ತರು ತಲಕಾವೇರಿ ಮತ್ತು ಭಾಗಮಂಡಲಕ್ಕೆ ಆಗಮಿಸುತ್ತಾರೆ. ಸ್ಥಳೀಯರು ಪವಿತ್ರವೆಂದು ಪರಿಗಣಿಸಿ ಈ ನೀರನ್ನು ಸಂಗ್ರಹಿಸಿ ಸಂರಕ್ಷಿಸುತ್ತಾರೆ.

ಕಾವೇರಿ ಸಂಕ್ರಮಣ' ಉತ್ಸವವು ಜಿಲ್ಲೆಯಾದ್ಯಂತ ದೇಶೀಯ ಹಬ್ಬಗಳ ಋತುವಿನ ಆರಂಭವನ್ನು ಸೂಚಿಸುತ್ತದೆ, ಹೀಗಾಗಿ ಕೊಡಗಿನ ಪ್ರತಿ ಹಳ್ಳಿಯು ಆಚರಣೆ ಮತ್ತು ಸಂಪ್ರದಾಯಗಳ ವಿಶಿಷ್ಟ ಪ್ರದರ್ಶನಕ್ಕೆ ಸಜ್ಜುಗೊಳ್ಳುತ್ತದೆ.

ಈ ಹಬ್ಬವು ಕೊಡಗು ನೆಲದ ಬುಡಕಟ್ಟು ಸಂಸ್ಕೃತಿ ಮತ್ತು ಕೊಡವರ ಜಾನಪದ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತವೆ. ಕೊಡವ ಭೂಮಿಯ 35 ಪ್ರಾಂತ್ಯಗಳಲ್ಲಿ, 276 'ಕೇರಿ' ಅಥವಾ ಹಳ್ಳಿಗಳು ಅಕ್ಟೋಬರ್ ತಿಂಗಳಿನಲ್ಲಿ ಹಬ್ಬಗಳನ್ನು ಆಚರಿಸುತ್ತವೆ,

ಕೊಡಗು ಪ್ರಾಂತ್ಯವನ್ನು ಅನೇಕ ಸಾಮ್ರಾಜ್ಯಗಳು ಆಳಿದ್ದವು. ಪ್ರತಿ ಹಳ್ಳಿಯಲ್ಲಿ ಇಲ್ಲಿಯವರೆಗೆ ಆಚರಿಸಲಾಗುವ ಹಬ್ಬಗಳು ಹಾಲೇರಿ ಸಾಮ್ರಾಜ್ಯದ ಆಳ್ವಿಕೆಯ ಹಿಂದಿನದ್ದಾಗಿದೆ ಎಂದು ಕೊಡವ ಇತಿಹಾಸಕಾರರಾದ ಬಾಚರಣಿಯಂಡ ಅಪ್ಪಣ್ಣ ಅವರು ಹೇಳಿದ್ದಾರೆ.

ಪ್ರತಿಯೊಂದು ಹಳ್ಳಿಯು ಉತ್ಸವವು ಜಾನಪದದಲ್ಲಿ ತನ್ನ ಬೇರುಗಳನ್ನು ಹೊಂದಿದೆ, ಭೂಮಿಯ ಪ್ರಾಮುಖ್ಯತೆ ಮತ್ತು ಪ್ರಕೃತಿ ಆರಾಧನೆಯ ಪರಿಕಲ್ಪನೆಗೆ ನಿಕಟ ಸಂಪರ್ಕಗಳನ್ನು ನಿರೂಪಿಸುವ ಬಲವಾದ ಕಥೆಗಳೊಂದಿಗೆ. ಪ್ರಕಾಶಮಾನವಾದ ಬಣ್ಣಗಳು, ಸಂಗೀತ ಮತ್ತು ಸಾಂಪ್ರದಾಯಿಕ ನೃತ್ಯಗಳು ಈ ಹಬ್ಬಗಳನ್ನು ಗುರುತಿಸುತ್ತವೆ.

ಏಟೆಕಾರಿ ನಾಡಲ್ಲಿ ಭದ್ರಕಾಳಿ ದೇವಸ್ಥಾನದ ಉತ್ಸವ

ಈ ಹಬ್ಬಗಳ ಸಂದರ್ಭದಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಸಾಂಪ್ರದಾಯಿಕವಾಗಿ ಅತ್ಯುತ್ತಮವಾದ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಆಚರಣೆಗಳು ಎಲ್ಲಾ ಹಳ್ಳಿಗಳಲ್ಲಿ ಒಂದೇ ಮಾದರಿಯನ್ನು ಅನುಸರಿಸುತ್ತವೆ,

“ಭರತಖಂಡವು (ದೇಶ) 56 ಸಾಮ್ರಾಜ್ಯಗಳನ್ನು ಹೊಂದಿದ್ದು, ಅದರಲ್ಲಿ ಒಂದು ಸಾಮ್ರಾಜ್ಯ ಕೊಡಗು ಆಗಿದೆ. ಈ ಜಿಲ್ಲೆಯು ಚಿಕ್ಕದ್ದಾಗಿದ್ದರು, ಅದ್ಭುತ ಪ್ರದೇಶವಾಗಿದೆ. ಕೊಡಗು 35 ಪ್ರಾಂತ್ಯಗಳನ್ನು ಹೊಂದಿದ್ದು, 276 ಗ್ರಾಮಗಳು ಇಲ್ಲಿವೆ. ಈ ಗ್ರಾಮಗಳಲ್ಲಿ 882 ಕುಟುಂಬಗಳಿವೆ. ಗ್ರಾಮಗಳಲ್ಲಿರುವ ಈ 882 ಕುಟುಂಬಗಳ ಸ್ಥಳೀಯ ಹಬ್ಬಗಳನ್ನು ಆಚರಿಸುತ್ತವೆ ಎಂದು ಫೋರ್ಟ್ ಮರ್ಕೆರಾದ ಜನರಲ್ ಮ್ಯಾನೇಜರ್ ಚೋಕಂಡ ಸೂರಜ್ ವಿವರಿಸಿದ್ದಾರೆ.

ಈ ಹಬ್ಬಗಳು ಭೂಮಿಯ ಸಂರಕ್ಷಣೆ ಕಥೆಗಳನ್ನು ಹೇಳುವುದರ ಜೊತೆಗೆ, ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಬೇಕೆಂದು ಒತ್ತಾಯಿಸುತ್ತವೆ. ಪ್ರತಿ ಹಳ್ಳಿಯಲ್ಲಿಯೂ ಈ ಹಬ್ಬವನ್ನು ಸುಮಾರು 15 ದಿನಗಳವರೆಗೆ ಆಚರಣೆ ಮಾಡಲಾಗುತ್ತದೆ ಮತ್ತು ಆಚರಣೆಗಳು ಮಾಂಸದ ನಿಷೇಧ, ಸೂರ್ಯಾಸ್ತದ ಮೊದಲು ಗ್ರಾಮಕ್ಕೆ ಕಡ್ಡಾಯವಾಗಿ ಹಿಂತಿರುಗುವುದು ಮತ್ತು ಮರಗಳು ಅಥವಾ ಗಿಡಗಳ ಕಡಿಯುವುದನ್ನು ನಿಷೇಧಿಸುವಂತಹ ನಿಯಮಗಳನ್ನು ಒಳಗೊಂಡಿರುತ್ತದೆ.

ಬುಡಕಟ್ಟು ಕೊಡವರು ಪ್ರಕೃತಿ ಮತ್ತು ಪೂರ್ವಜರ ಆರಾಧಕರಾಗಿರುವುದರಿಂದ, ಈ ಹಬ್ಬಗಳು ಪ್ರಕೃತಿಯ ಬಗ್ಗೆ ವಿಶೇಷ ಗೌರವವನ್ನು ಹೊಂದಿರುತ್ತದೆ, ಆಚರಣೆಯ ಸಮಯದಲ್ಲಿ ಇದನ್ನು ತೋರ್ಪಡಿಸಲಾಗುತ್ತದೆ. ಸಾಂಪ್ರದಾಯಿಕ ನೃತ್ಯಗಳು ನೈಸರ್ಗಿಕ ಪರಿಸರದಿಂದ ಸ್ಫೂರ್ತಿ ಪಡೆಯುತ್ತವೆ ಮತ್ತು ಕೆಲವು ಹಳ್ಳಿ ಉತ್ಸವಗಳಲ್ಲಿ ನವಿಲು ಗರಿಗಳ ನೃತ್ಯಗಳನ್ನೂ ಪ್ರದರ್ಶಿಸಲಾಗುತ್ತದೆ.

ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳ ರೂಪದಲ್ಲಿ ಬೇಟೆಯಾಡುವ ಅಂಶಗಳು ಮತ್ತು ಯೋಧರ ಶೌರ್ಯವನ್ನು ಹಬ್ಬದ ಆಚರಣೆ ವೇಳೆ ತೋರ್ಪಡಿಸಲಾಗುತ್ತದೆ.

ಹಬ್ಬದ ಸಮಯದಲ್ಲಿ ಪೂಜಿಸಲ್ಪಡುವ ಭಗವತಿ ದೇವಿಯು ಪ್ರಕೃತಿಯನ್ನು ಸಂಕೇತಿಸುತ್ತಾಳೆ. ನಮ್ಮಲ್ಲಿ 'ಬೋಡು ನಮ್ಮೆ' ಎಂಬ ಜನಪ್ರಿಯವಾದ ಹಬ್ಬವಿದೆ, ಅಲ್ಲಿ ಜನರು ಕಾಳಿ ದೇವಿಯ ರೀತಿ ಉಡುಪುಗಳನ್ನು ಧರಿಸಿ ಪ್ರಾರ್ಥಿಸುತ್ತಾರೆಂದು ಸೂರಜ್ ಅವರು ಹಬ್ಬದ ಆಚರಣೆ ಕುರಿತು ವಿವರಿಸಿದ್ದಾರೆ.

‘ಕೈಲ್ಪೋದ್’, ‘ಎಡಮ್ಯಾರ್’, ‘ಪುತ್ತರಿ’ ಮತ್ತು ಕಾವೇರಿ ಸಂಕ್ರಮಣ ಕೊಡವ ಸಮುದಾಯದ ಪ್ರಮುಖ ಹಬ್ಬಗಳಾಗಿದ್ದು, ಈ ಹಬ್ಬಗಳನ್ನು ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಯುವ ಪೀಳಿಗೆಯೂ ಈ ಹಬ್ಬವನ್ನು ಆಚರಿಸಿಕೊಂಡು ಹೋಗುವಂತೆ ಪ್ರೇರೇಪಿಸಲಾಗುತ್ತಿದೆ.

“ಕಳೆದ ಮೂರು ವರ್ಷಗಳಿಂದ ಈ ಹಬ್ಬಗಳಲ್ಲಿ ಯುವಕರ ಭಾಗವಹಿಸುವಿಕೆ ಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ತಮ್ಮ ಸಂಪ್ರದಾಯಿಕ ಹಬ್ಬಗಳತ್ತ ಮುಖ ಮಾಡುತ್ತಿದ್ದಾರೆ. ಹಬ್ಬಗಳು ಹಿಂದಿನಿಂದಲೂ ನಡೆದುಕೊಂಡು ಬರುತ್ತಿವೆ, ಈಗಲೂ ಆಚರಿಸಿಕೊಂಡು ಹೋಗಲಾಗುತ್ತಿದೆ. ಇದಷ್ಟೇ ಅಲ್ಲದೆ, ಸಮುದಾಯದ ಅನೇಕ ಧಾರ್ಮಿಕ ಮುಖ್ಯಸ್ಥರು ಮತ್ತು ಸಂಸ್ಥೆಗಳು ಈ ಸ್ಥಳೀಯ ಹಬ್ಬಗಳನ್ನು ಆಚರಿಸುವಲ್ಲಿ ತೊಡಗಿಸಿಕೊಂಡಿವೆ ಮತ್ತು ಅವುಗಳನ್ನು ಯುವಜನರಿಗೂ ತಿಳಿಸುತ್ತಿವೆ ಎಂದು ತಿಳಿಸಿದ್ದಾರೆ.


Stay up to date on all the latest ವಿಶೇಷ news
Poll
Omicron-Covid-variant

ಭಾರತದಲ್ಲಿ ಕೋವಿಡ್‌ನಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂಬ WHO ವರದಿ ಮತ್ತು ಅಂಕಿಅಂಶಗಳನ್ನು ನೀವು ಒಪ್ಪುತ್ತೀರಾ?


Result
ಹೌದು, ಒಪ್ಪಬಹುದು
ಇಲ್ಲ, ಒಪ್ಪಲಾಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp