1 ಗಂಟೆಯಲ್ಲಿ ಅತಿ ಹೆಚ್ಚು ಜನರಿಗೆ ಮೆಹಂದಿ ಹಚ್ಚಿದ ಭಾರತದ ಯುವತಿ: ಪಾಕ್ ಮಹಿಳೆಯ ಗಿನ್ನೆಸ್ ದಾಖಲೆ ಧೂಳಿಪಟ
ಈ ದಾಖಲೆ ಪಾಕಿಸ್ತಾನದ ಸಮೀನಾ ಹುಸೇನ್ ಎಂಬಾಕೆಯ ಹೆಸರಲ್ಲಿತ್ತು. ಆಕೆ ಒಂದು ಗಂಟೆಯಲ್ಲಿ 600 ಮಂದಿಯ ಕೈಗಳಿಗೆ ಮೆಹಂದಿ ವಿನ್ಯಾಸ ಮಾಡಿದ್ದರು.
Published: 03rd January 2022 12:17 PM | Last Updated: 03rd January 2022 02:07 PM | A+A A-

ಆದಿತ್ಯ ನಿದಿನ್
ಕೋಳಿಕ್ಕೋಡ್: ಕೇರಳ ರಾಜ್ಯದ ಕೋಳಿಕ್ಕೋಡ್ ನ ಮೆಹಂದಿ ಕಲಾವಿದೆ 25 ವರ್ಷದ ಆದಿತ್ಯ ನಿದಿನ್ ಎನ್ನುವ ಯುವತಿ ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರಗಳ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣಾ ಸಮಯದ ಚಿತ್ರ: ಓಟಿಟಿಯಲ್ಲೂ ಶಿವಣ್ಣನ 'ಭಜರಂಗಿ 2' ದಾಖಲೆ
ಒಂದು ಗಂಟೆ ಅವಧಿಯಲ್ಲಿ ಅತಿ ಹೆಚ್ಚು ಮಂದಿಯ ಕೈಗಳಿಗೆ ಮೆಹಂದಿ ವಿನ್ಯಾಸ ರೂಪಿಸಿದ ದಾಖಲೆ ಅವರ ಪಾಲಾಗಿದೆ. ಹೊಸ ವರ್ಷದ ಮೊದಲ ದಿನದಂದೇ ಆದಿತ್ಯ ನಿದಿನ್ ಈ ದಾಖಲೆ ಮಾಡಿರುವುದು ವಿಶೇಷ.
ಇದನ್ನೂ ಓದಿ: ಪುಡಿಗಾಸು ಕಡಲೆಕಾಯಿ ಸಾಲ ಹಿಂದಿರುಗಿಸಲು ಅಮೆರಿಕದಿಂದ ಭಾರತಕ್ಕೆ ಹಾರಿಬಂದ ಅಣ್ಣ ತಂಗಿ
ಈ ಹಿಂದೆ ಈ ದಾಖಲೆ ಪಾಕಿಸ್ತಾನದ ಸಮೀನಾ ಹುಸೇನ್ ಎಂಬಾಕೆಯ ಹೆಸರಲ್ಲಿತ್ತು. ಆಕೆ ಒಂದು ಗಂಟೆಯಲ್ಲಿ 600 ಮಂದಿಯ ಕೈಗಳಿಗೆ ಮೆಹಂದಿ ವಿನ್ಯಾಸ ಮಾಡಿದ್ದರು.
ಇದನ್ನೂ ಓದಿ: ಕನ್ನಡ ನಾಡಿನ ಸಮಾಜಮುಖಿ ಸೆಲಬ್ರಿಟಿಗಳು: ಕರ್ತವ್ಯಕ್ಕೂ ಜೈ ಸೇವೆಗೂ ಸೈ
ಅಚ್ಚರಿ ಎಂದರೆ ಕೇರಳದ ಆದಿತ್ಯ ನಿದಿನ್, 37ನೇ ನಿಮಿಷದಲ್ಲಿಯೇ 600 ಮಂದಿಗೆ ಮೆಹಂದಿ ಹಚ್ಚುವ ಮೂಲಕ ಸಮೀನಾ ಹುಸೇನ್ ದಾಖಲೆಯನ್ನು ಅಳಿಸಿ ಹಾಕಿದರು.
ಇದನ್ನೂ ಓದಿ: ಜೀವನಪ್ರೀತಿ ಮೂಡಿಸುವ ಟಾಪ್ 10 ಅಸಲಿ ಕೊರೊನಾ ಪಾಸಿಟಿವ್ ಕಥೆಗಳು- 2021
ಆದಿತ್ಯ ನಿದಿನ್ ಅವರಿಂದ ಒಂದು ಗಂಟೆಯಲ್ಲಿ ಮೆಹಂದಿ ಹಚ್ಚಲ್ಪಟ್ಟ ಜನರ ಸಂಖ್ಯೆ 910!
ಇದನ್ನೂ ಓದಿ: ವೀಲ್ ಚೇರ್ ಆಸರೆಯಲ್ಲಿದ್ದವರೂ ಬೀಚ್ ಸೌಂದರ್ಯ ಸವಿಯಬಹುದು: ಮರೀನಾ ಬೀಚಿನಲ್ಲಿ ವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ