ಭಾರತ- ಪಾಕ್ ವಿಭಜನೆಯ ಸಮಯದಲ್ಲಿ ಬೇರ್ಪಟ್ಟಿದ್ದ 200 ಕುಟುಂಬಗಳನ್ನು ಒಂದುಗೂಡಿಸಿದ 'ಪಂಜಾಬ್ ಲೆಹರ್' ಯೂಟ್ಯೂಬ್ ಚಾನೆಲ್
ಭಾರತ ಮತ್ತು ಪಾಕಿಸ್ತಾನ ದೇಶದಲ್ಲಿ ಹಂಚಿಹೋಗಿದ್ದ ಅಣ್ಣತಮ್ಮಂದಿರು, ಕುಟುಂಬಸ್ಥರು ಕರ್ತಾರ್ಪುರ ಕಾರಿಡಾರಿನಲ್ಲಿ ಭೇಟಿಯಾಗಿ ಕಣ್ಣೀರಾಗಿದ್ದಾರೆ.
Published: 15th January 2022 08:51 PM | Last Updated: 15th January 2022 08:51 PM | A+A A-

ಭಾರತ- ಪಾಕ್ ವಿಭಜನೆ
ನವದೆಹಲಿ: ಯೂಟ್ಯೂಬ್ ಚಾನಲ್ 'ಪಂಜಾಬಿ ಲೆಹರ್', 1947 ಭಾರತ- ಪಾಕ್ ವಿಭಜನೆ ಸಮಯದಲ್ಲಿ ಬೇರ್ಪಟ್ಟಿದ್ದ 200 ಕುಟುಂಬಗಳನ್ನು ಒಂದು ಮಾಡಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ.
ಇದನ್ನೂ ಓದಿ: ಪತ್ನಿಯ ಕೊನೆಯಾಸೆ: 5 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿದ ಹಿಮಾಚಲ ಪ್ರದೇಶ ವೈದ್ಯ!
ಭಾರತ ಮತ್ತು ಪಾಕಿಸ್ತಾನ ದೇಶದಲ್ಲಿ ಹಂಚಿಹೋಗಿದ್ದ ಅಣ್ಣತಮ್ಮಂದಿರು, ಕುಟುಂಬಸ್ಥರು ಕರ್ತಾರ್ಪುರ ಕಾರಿಡಾರಿನಲ್ಲಿ ಭೇಟಿಯಾಗಿ ಕಣ್ಣೀರಾಗಿದ್ದಾರೆ. 74 ವರ್ಷಗಳ ಬಳಿಕ ಭೇಟಿಯಾದ ಸಹೋದರರು ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡು ಭಾವುಕರಾದ ಅದೆಷ್ಟೋ ನಿದರ್ಶನಗಳು ಈ ವೇಳೆ ನೋಡಬಹುದಾಗಿತ್ತು.
ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲೇ ನಶಿಸಿದೆ ಎನ್ನಲಾಗಿದ್ದ ಚಿಟ್ಟೆ ಪ್ರಭೇದ ಮಧ್ಯಪ್ರದೇಶದಲ್ಲಿ ಪತ್ತೆ: ಭಾರತೀಯ ಪರಿಸರ ವಿಜ್ಞಾನಿಗಳ ಸಾಧನೆ
ಪಂಜಾಬಿ ಲೆಹೆರ್, ಪಾಕಿಸ್ತಾನ ಮೂಲದ ಯೂಟ್ಯೂಬ್ ಆಗಿದ್ದು, ಭಾರತ ಪಾಕ್ ವಿಭಜನೆಯ ಸಮಯದಲ್ಲಿ ಬೇರ್ಪಟ್ಟಿದ್ದ ಹೃದಯಗಳನ್ನು ಒಂದುಗೂಡಿಸುವ ಕೆಲಸದಲ್ಲಿ ನಿರತವಾಗಿದೆ. ಕಳೆದುಕೊಂಡಿದ್ದ ತಮ್ಮ ಬಾಂಧವರನ್ನು ಭೇಟಿ ಮಾಡಿದ ನಂತರ ಜನರು ತಮ್ಮತಮ್ಮ ದೇಶಗಳಿಗೆ ಹಿಂದಿರುಗಿದ್ದಾರೆ.
ಇದನ್ನೂ ಓದಿ: ಇದೇ ಮೊದಲು: ಅಂಧ ವ್ಯಕ್ತಿಗೆ ರಾಜಕೀಯ ಪಕ್ಷದ ಕಾರ್ಯದರ್ಶಿ ಸ್ಥಾನ; ಮಾದರಿಯಾದ ಸಿಪಿಎಂ