ಗದಗದ ಗರಡಿಮನೆಗಳು: ಈ ಗ್ರಾಮೀಣ 'ಜಿಮ್'ಗಳು ಕುಸ್ತಿ ಪಟುಗಳಿಗೆ ತರಬೇತಿ ಕೇಂದ್ರ!

ಕೋವಿಡ್-19 ಸಾಂಕ್ರಾಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಜನರಲ್ಲಿ ಹೆಚ್ಚು ಆಸಕ್ತರನ್ನಾಗಿ ಮಾಡಿದೆ. 

Published: 16th January 2022 12:07 PM  |   Last Updated: 17th January 2022 02:13 PM   |  A+A-


Ishappa Bangari, a pahelwan from Hanaman Garadi (below), wields a gaja during a workout routine | EXPRESS

ಗರಡಿ ಮನೆ (ಸಂಗ್ರಹ ಚಿತ್ರ)

The New Indian Express

ಗದಗ: ಕೋವಿಡ್-19 ಸಾಂಕ್ರಾಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಜನರಲ್ಲಿ ಹೆಚ್ಚು ಆಸಕ್ತರನ್ನಾಗಿ ಮಾಡಿದೆ. 

ಫಿಟ್ನೆಸ್, ಉತ್ತಮ ಆರೋಗ್ಯಕ್ಕಾಗಿನ ಕ್ರಮಗಳು ಕೇವಲ ನಗರಪ್ರದೇಶಗಳಲ್ಲಿರುವ ಮಂದಿಗಷ್ಟೇ ಅಲ್ಲದೇ ಸಣ್ಣ ಪಟ್ಟಣಗಳಲ್ಲೂ ಹೆಚ್ಚಾಗುತ್ತಿದೆ. ಈ ನಡುವೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಸಾಂಪ್ರದಾಯಿಕ ಗರಡಿ ಮನೆಗಳೆಡೆಗೆ ಹೆಚ್ಚಿನ ಆಸಕ್ತಿ ಬೆಳೆಯುತ್ತಿದೆ. 

ಗದಗದ ಗರಡಿಮನೆಗಳಿಗೆ ತೆರಳಿ ವ್ಯಾಯಾಮ ಮಾಡುವವರ ಸಂಖ್ಯೆ ಕಳೆದ 2 ತಿಂಗಳಿನಿಂದ ಹೆಚ್ಚತೊಡಗಿದ್ದು, ಗ್ರಾಮೀಣ ಭಾಗದಲ್ಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ವ್ಯಾಯಾಮಶಾಲೆಗಳಲ್ಲಿ ಹೆಚ್ಚು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ಗದಗ ನಗರದ ಗರಡಿ ಮನೆಗಳಲ್ಲಿ ಕಳೆದ ವರ್ಷ ಕೇವಲ 11 ಸದಸ್ಯರಿದ್ದರು, ಅದು ಈ ವರ್ಷ 26 ಕ್ಕೆ ಏರಿಕೆಯಾಗಿದೆ. ಲಕ್ಕುಂಡಿಯ ಗರಡಿ ಮನೆ ಹೊಸದಾಗಿ 9 ಮಂದಿಯನ್ನು ಸ್ವಾಗತಿಸಿದ್ದರೆ, ಹತಲಗೇರಿಯ ಗರಡಿಮನೆಗೆ 6 ಮಂದಿ ಸೇರ್ಪಡೆಯಾಗಿದ್ದಾರೆ ಹಾಗೂ ಜಕ್ಕಲಿಯಲ್ಲಿ 18 ಮಂದಿ ಹೊಸದಾಗಿ ಸೇರಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಗರಡಿಮನೆಗಳು ಮರುಜೀವ ಪಡೆಯಲು ಪ್ರಾರಂಭಿಸಿವೆ.

ಭಾರತದಲ್ಲಿ ಈ ಸಾಂಪ್ರದಾಯಿಕ ಜಿಮ್ ಗಳಿಗೆ ಶ್ರೀಮಂತ ಇತಿಹಾಸವಿದೆ. ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ 1650 ರಿಂದಲೂ ಅಂದರೆ ಕಂಠೀರವ ನರಸರಾಜ ಒಡೆಯರ್ ಅವಧಿಯಿಂದ ಪ್ರಾರಂಭಗೊಂಡು ಗರಡಿಮನೆಗಳಿಗೆ ಪ್ರಾಮುಖ್ಯತೆ ಇದೆ.

ಇದನ್ನೂ ಓದಿ: ಫಿಟ್ ನೆಸ್ ಮಾಯೆಯೋ, ಮೋಹವೋ; ಸಿನಿಮಾ ತಾರೆಯರಿಗೆ ಪೂರಕವೋ, ಮಾರಕವೋ?

ಗಜ, ಮುದ್ಗರ, ಕಲ್ಲಿನ ಬೌಲ್ಡರ್ ಗಳು, ಮಣ್ಣಿನ ನೆಲಗಳನ್ನು ಹೊಂದಿರುವ ಗರಡಿಮನೆಗಳಲ್ಲಿ ಕುಸ್ತಿ ಪಟುಗಳು ತರಬೇತಿ ನೀಡುತ್ತಾರೆ.

1960 ರಲ್ಲಿ ಗದಗದ ಜಕ್ಕಲಿ, ಮಲ್ಲಪುರ, ಸವದಿ, ರೋಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗರಡಿಮನೆಗಳು ಪ್ರಾರಂಭವಾದವು, ಈ ಗರಡಿಗಳಲ್ಲಿ ಪಳಗಿದ ಹಲವು ಪೈಲ್ವಾನ್ ಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ದಂಗಲ್ ಗಳಲ್ಲಿ ಭಾಗವಹಿಸಿ ಹಲವು ಟ್ರೋಫಿಗಳನ್ನು ಗೆದ್ದಿದ್ದಾರೆ. 90 ನೇ ದಶಕದಲ್ಲೂ ಈ ಟ್ರೆಂಡ್ ಮುಂದುವರೆದಿತ್ತು. ಆದರೆ ಇತ್ತೀಚಿನ ಹೊಸ ಟ್ರೆಂಡ್ ಅಬ್ಬರದಲ್ಲಿ ಗರಡಿಮನೆಗಳು ಮಾಯವಾಗಿದ್ದವು ಈಗ ಮತ್ತೆ ಹಳೆಯ ಟ್ರೆಂಡ್ ಮರಳುತ್ತಿದೆ.


Stay up to date on all the latest ವಿಶೇಷ news
Poll
Students greet each other, relieved that their SSLC examinations

SSLC ಪರೀಕ್ಷೆ ಫಲಿತಾಂಶ: 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್; ಧಾರಾಳವಾಗಿ ಅಂಕ ನೀಡಿರುವ ಈ ಮೌಲ್ಯಮಾಪನ ರೀತಿ ಸರಿಯೇ?


Result
ಸರಿ
ಸರಿಯಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp