ಒಮ್ಮೆ ಬೀದಿಯಲ್ಲಿ ಭಿಕ್ಷುಕನಾಗಿದ್ದ ವ್ಯಕ್ತಿ, ಈಗ 23 ವರ್ಷಗಳಿಂದ ನಿರ್ಗತಿಕರಿಗೆ ಆಹಾರ ವಿತರಣೆ: ಬಿ ಮುರುಗನ್ ಸಾಧನೆ
ಒಮ್ಮೆ ಬೀದಿ ಬದಿಯಲ್ಲಿ ಭಿಕ್ಷುಕರಾಗಿದ್ದ ಕೊಯಂಬತ್ತೂರಿನ ವ್ಯಕ್ತಿ ಬಿ. ಮುರುಗನ್ ಸುಮಾರು 23 ವರ್ಷಗಳಿಂದ ಬೀದಿ ಬದಿಯ ನಿರ್ಗತಕರಿಗೆ ಆಹಾರ ವಿತರಿಸುವ ಕಾಯಕ ಮಾಡುತ್ತಾ ಬಂದಿದ್ದಾರೆ. ಇವರ ಈ ಸಾಧನೆ ಕುರಿತ ಪರಿಚಯ ಇಲ್ಲಿದೆ.
Published: 17th January 2022 04:11 PM | Last Updated: 17th January 2022 04:40 PM | A+A A-

ಬಿ. ಮುರುಗನ್
ಕೊಯಂಬತ್ತೂರು: ಒಮ್ಮೆ ಬೀದಿ ಬದಿಯಲ್ಲಿ ಭಿಕ್ಷುಕರಾಗಿದ್ದ ಕೊಯಂಬತ್ತೂರಿನ ವ್ಯಕ್ತಿ ಬಿ. ಮುರುಗನ್ ಸುಮಾರು 23 ವರ್ಷಗಳಿಂದ ಬೀದಿ ಬದಿಯ ನಿರ್ಗತಕರಿಗೆ ಆಹಾರ ವಿತರಿಸುವ ಕಾಯಕ ಮಾಡುತ್ತಾ ಬಂದಿದ್ದಾರೆ. ಇವರ ಈ ಸಾಧನೆ ಕುರಿತ ಪರಿಚಯ ಇಲ್ಲಿದೆ.
ಪ್ರತಿದಿನ ಮುಂಜಾನೆ ಮೂರು ಗಂಟೆಗೆ ಏಳುವ ಬಿ. ಮುರುಗನ್ ಕೂಡಲೇ ತನ್ನ ಮನೆ ಹತ್ತಿರವೇ ಮಾಡಿಕೊಂಡಿರುವ ಕಿಚನ್ ಗೆ ತನ್ನ ಪತ್ನಿ, ಮೂವರು ಸಹಾಯಕರು ಹಾಗೂ ಬಾಣಸಿಗರೊಬ್ಬರೊಂದಿಗೆ ಸೇರಿಕೊಳ್ಳುತ್ತಾರೆ. ಒಟ್ಟಾಗಿ ಸಂಜೆ ಆರು ಗಂಟೆಯವರೆಗೂ ಆಹಾರ ತಯಾರಿಸುತ್ತಾರೆ. ಅದನ್ನು ನೀಟಾಗಿ ಪ್ಯಾಕ್ ಮಾಡುತ್ತಾರೆ. ಅವರು ಮೆಸ್ ಅಥವಾ ಹಾಸ್ಟೆಲ್ ನಡೆಸುತ್ತಾರೆ ಎಂಬ ಕಾರಣಕ್ಕೆ ಇದನ್ನು ಮಾಡುತ್ತಿಲ್ಲ ಆದರೆ, ಕೊಯಂಬತ್ತೂರಿನ ಬೀದಿ ಬದಿಯ ನಿರ್ಗತರಿಗೆ ಆಹಾರವನ್ನು ವಿತರಿಸುತ್ತಾರೆ.
1998ರಲ್ಲಿ ನಿಝಾಲ್ ಮೈಯಂ ಎನ್ ಜಿಒ ಸ್ಥಾಪಿಸಿದ ಮುರುಗನ್ (47) ಬೀದಿ ಬದಿಯ ನಿರ್ಗತಿಕರು ಹಾಗೂ ಅನಾಥ ಮಕ್ಕಳಿಗೆ ಸ್ವಯಂ ಸೇವಕರ ಸಹಾಯದಿಂದ 23 ವರ್ಷಗಳಿಂದ ಆಹಾರ ವಿತರಿಸುತ್ತಿದ್ದಾರೆ. ಅವರು ಆರೋಗ್ಯಯುತ ಹಾಗೂ ಬಗೆ ಬಗೆಯ ಆಹಾರವನ್ನು ವಿತರಿಸುತ್ತಿದ್ದಾರೆ. ಅವರು ಪುದೀನಾ ಮತ್ತು ಕರಿಬೇವಿನ ಎಲೆಗಳನ್ನು ಯಥೇಚ್ಚವಾಗಿ ಹಾಕುವುದರ ಜೊತೆಗೆ ತರಕಾರಿಗಳು ಮತ್ತು ಅಣಬೆಗಳೊಂದಿಗೆ ಪ್ಯಾಕ್ ಮಾಡಿದ ಬಿರಿಯಾನಿಯನ್ನು ತಯಾರಿಸುತ್ತಾರೆ. ಅವರ 'ಗಮಗಮ ಸಾಂಬಾರ್' ಪೌಷ್ಟಿಕಯುಕ್ತವಾಗಿದೆ ಮತ್ತು ಹೆಚ್ಚಿನ ಅಭಿಮಾನಿಗಳನ್ನು ಹೊಂದಿದೆ. ಪ್ರತಿದಿನ, ಅವರು ಪ್ರತಿ ಭಾನುವಾರ ಬೆಳಿಗ್ಗೆ 18 ಅನಾಥಾಶ್ರಮಗಳಲ್ಲಿ ಸುಮಾರು 200 ನಿರ್ಗತಿಕರಿಗೆ ಮತ್ತು 1,000 ಅನಾಥ ಮಕ್ಕಳಿಗೆ ಈ ಒಳ್ಳೆಯ ಊಟವನ್ನು ಬಡಿಸುತ್ತಾರೆ.
ಪರೋಪಕಾರ ಕುರಿತು ತನ್ನ ಅನಿಸಿಕೆ ಹಂಚಿಕೊಂಡಿರುವ ಬಿ. ಮುರುಗನ್, ದ್ವಿತೀಯ ಪಿಯುಸಿ ತರಗತಿಯಲ್ಲಿ ಅನುತ್ತೀರ್ಣಗೊಂಡಾಗ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ. ದೃಷ್ಟಿಯಲ್ಲಿ ಯಾವುದೇ ಭರವಸೆ ಇರಲಿಲ್ಲ. 1992ರಲ್ಲಿ ಕೊಯಂಬತ್ತೂರಿನ ಸಿರುಮುಗೈಗೆ ಬಂದು ರಸ್ತೆಯಲ್ಲಿ ಭಿಕ್ಷುಕರೊಂದಿಗೆ ವಾಸಿಸುತ್ತದೆ. ಊಟವಿಲ್ಲದೆ ಪರದಾಡುತ್ತಿದೆ. ನನ್ನ ಸುತ್ತಲ್ಲೂ ನೆರೆದಿದ್ದ ಅನೇಕ ಭಿಕ್ಷುಕರನ್ನು ಕಂಡು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾಗಿ ತಿಳಿಸಿದರು.
ಹಿರಿಯ ನಾಗರಿಕ ಕುರುಪ್ಪನ್ ಅವರಿಂದ ಸಣ್ಣ ಹೊಟೇಲ್ ವೊಂದರಲ್ಲಿ ಉದ್ಯೋಗ ದೊರೆಯಿತು. ನಂತರ, ಅನೇಕ ವರ್ಷಗಳ ಕಾಲ ಲಾರಿ ಕ್ಲಿನರ್ ಆಗಿ ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಕಂಪನಿಯೊಂದರಲ್ಲಿ ಆಟೋ ಡ್ರೈವರ್ ಆಗಿ 3 ಸಾವಿರ ರೂ. ಸಂಬಳ ಪಡೆಯಲಾರಂಭಿಸಿದೆ. 1998ರಲ್ಲಿ ನನ್ನ ಕನಸಿನತ್ತ ಮೊದಲ ಹೆಜ್ಜೆ ಇಟ್ಟೆ. ಮೆಟ್ಟುಪಾಳ್ಯಂರಸ್ತೆಯಲ್ಲಿನ ಬೀದಿ ಬದಿಯ ನಿರ್ಗತಿಕರಿಗೆ ಭಾನುವಾರದಂದು ಆಹಾರ ವಿತರಣೆ ಕಾರ್ಯ ಆರಂಭಿಸಿದೆ. ಇದನ್ನು ನೋಡಿದ ನನ್ನ ಸ್ನೇಹಿತರು ಹಾಗೂ ಕಂಪನಿ ಮಾಲೀಕರು ಹಣ ನೀಡುವುದರೊಂದಿಗೆ ಬೆಂಬಲ ನೀಡಿದರು. ತರಕಾರಿ, ಅಕ್ಕಿ, ಮತ್ತಿತರ ಧಾನ್ಯಗಳನ್ನು ನೀಡುತ್ತಿದ್ದರು. ನಿಝಾಲ್ ಮೈಯಂ ಎನ್ ಜಿ ಸ್ಥಾಪನೆ ನಂತರ ಕೆಲ ಸ್ವಯಂ ಸೇವಕರು ತಮ್ಮೊಂದಿಗೆ ಸೇರಿಕೊಂಡರು. 2011ರಲ್ಲಿ ಸ್ವಯಂ ಸೇವಕರು ಸೇರಿದ ನಂತರ ಪ್ರತಿ ದಿನ 200 ಬಡ ಜನರಿಗೆ ಆಹಾರ ವಿತರಿಸಲು ಸಾಧ್ಯವಾಯಿತು ಎಂದರು.
ಮುರುಗನ್ ಅಡಿಕೆ ಮರದ ಪ್ಲೇಟ್ ಗಳನ್ನು ಶಾಪ್, ಹೋಟೆಲ್ ಗಳಿಗೆ ವಿತರಿಸುತ್ತಾರೆ. ಬೆಳಗ್ಗೆ ಹೊತ್ತು ಆಹಾರ ವಿತರಿಸಿ ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಹಾಜರಾಗುತ್ತಾರೆ. ಕೊಯಂಬತ್ತೂರನ್ನು ಭಿಕ್ಷುಕರ ಮುಕ್ತ ನಗರವನ್ನಾಗಿಸುವ ಮತ್ತೊಂದು ಕನಸನ್ನು ಅವರು ಹೊಂದಿದ್ದಾರೆ. ಅನಾಥ ಮಕ್ಕಳು ಹಾಗೂ ವಯಸ್ಕರನ್ನು ನೋಡಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.
ಅನೇಕ ವರ್ಷಗಳ ಕಾಲ ಬೀದಿಯಲ್ಲಿ ವಾಸಿಸುತ್ತಿದ್ದರಿಂದ ಮನೆಯಿಲ್ಲದವರ ಸಂಕಟ ಏನು ಎಂಬುದು ನನಗೆ ತಿಳಿದಿದೆ. 1992ರಲ್ಲಿ ಕೊಯಂಬತ್ತೂರಿನ ಸಿರುಮುಗೈಗೆ ಬಂದಾಗ ರಸ್ತೆ ಬದಿಯಲ್ಲಿ ಭಿಕ್ಷುಕರೊಂದಿಗೆ ವಾಸಿಸುತ್ತಾ ಅನ್ನಕ್ಕಾಗಿ ಪರಾದಾಟ ನಡೆಸಿದ್ದೇನೆ. ರಾಜ್ಯದಲ್ಲಿಯೇ ಇಂತಹ ಅನೇಕ ಭಿಕ್ಷುಕರನ್ನು ನೋಡಿದಾಗ ಅವರಿಗೆ ನೆರವು ನೀಡಲು ನಿರ್ಧರಿಸಿದ್ದಾಗಿ ಅವರು ತಿಳಿಸಿದರು.